AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮುಂಬೈ ತಂಡಕ್ಕೆ ಸ್ಟಾರ್ ಆಟಗಾರನ ಎಂಟ್ರಿ: ಎದುರಾಳಿಗಳಿಗೆ ಚಿಂತೆ ಶುರು

Suryakumar Yadav: ಮಾರ್ಚ್ 27 ರಂದು ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್​ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

IPL 2022: ಮುಂಬೈ ತಂಡಕ್ಕೆ ಸ್ಟಾರ್ ಆಟಗಾರನ ಎಂಟ್ರಿ: ಎದುರಾಳಿಗಳಿಗೆ ಚಿಂತೆ ಶುರು
Mumbai Indians
TV9 Web
| Edited By: |

Updated on: Mar 31, 2022 | 5:35 PM

Share

ಐಪಿಎಲ್ ಸೀಸನ್ 15 ನಲ್ಲಿ (IPL 2022) ಮುಂಬೈ ಇಂಡಿಯನ್ಸ್ (Mumbai Indians) ತಂಡವು ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಮುಂಬೈ ಉತ್ತಮ ಆರಂಭ ಪಡೆದಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾಗಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಆದರೆ ಇದೀಗ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಶಕ್ತಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಆಗಮನವಾಗಿದೆ. ಮೊದಲ ಪಂದ್ಯದಲ್ಲಿ ಹೆಬ್ಬೆರಳಿನ ಗಾಯದ ಕಾರಣ ಸೂರ್ಯಕುಮಾರ್ ಕಾಣಿಸಿಕೊಂಡಿರಲಿಲ್ಲ. ಇದೀಗ ಬೆರಳಿನ ಗಾಯದಿಂದ ಚೇತರಿಸಿಕೊಂಡಿರುವ ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಕ್ವಾರಂಟೈನ್ ಮುಗಿಸಿ ಆಗಮಿಸಿರುವ ಸೂರ್ಯಕುಮಾರ್ ಯಾದವ್ ಶನಿವಾರ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಚಿಂತೆ ಕೂಡ ದೂರವಾಗಲಿದೆ.

ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ವೇಳೆ ಸೂರ್ಯಕುಮಾರ್ ಯಾದವ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿರುವ ಸೂರ್ಯಕುಮಾರ್ ಯಾದವ್ ಕೀರಾನ್ ಪೊಲಾರ್ಡ್, ಇಶಾನ್ ಕಿಶನ್ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ತರಬೇತಿ ಅವಧಿಯಲ್ಲಿ ಭಾಗವಹಿಸಿದ್ದಾರೆ.

ಮಾರ್ಚ್ 27 ರಂದು ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್​ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ತಂಡವು 178 ರನ್‌ಗಳ ಸ್ಕೋರ್ ಗಳಿಸಿದರೂ, ಡೆಲ್ಲಿ ತಂಡದ ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ನಡುವೆ 7ನೇ ವಿಕೆಟ್‌ಗೆ ಮುರಿಯದ 75 ರನ್ ಜೊತೆಯಾಟದೊಂದಿಗೆ 18.2 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದ್ದರು. ಇದೀಗ ಶನಿವಾರ ಮುಂಬೈ ಇಂಡಿಯನ್ಸ್ ತನ್ನ 2ನೇ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ.

ಇದನ್ನೂ ಓದಿ: Harshal Patel: ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಹರ್ಷಲ್ ಪಟೇಲ್

ಇದನ್ನೂ ಓದಿ: IPL 2022: ವನಿಂದು ಹಸರಂಗ ವಿಭಿನ್ನ ಸಂಭ್ರಮಕ್ಕೆ ಇದುವೇ ಕಾರಣ..!

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?