IPL 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್​ ನಡುವೆ ಕದನದಲ್ಲಿ RCB ಲೆಕ್ಕಚಾರ..!

IPL 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್​ ನಡುವೆ ಕದನದಲ್ಲಿ RCB ಲೆಕ್ಕಚಾರ..!
RCB

IPL 2022 PBKS vs DC: ಗುಜರಾತ್ ಟೈಟನ್ಸ್ ವಿರುದ್ದ ಗೆಲ್ಲುವ ವಿಶ್ವಾಸದಲ್ಲಿರುವ ಆರ್​ಸಿಬಿ ತಂಡವು 16 ಪಾಯಿಂಟ್ಸ್​ ಗಳಿಸಿ ಪ್ಲೇಆಫ್ ಗೇರುವ ತವಕದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳಿಗೂ 16 ಪಾಯಿಂಟ್ಸ್​ ಗಳಿಸುವ ಅವಕಾಶವಿದೆ.

TV9kannada Web Team

| Edited By: Zahir PY

May 16, 2022 | 2:35 PM

IPL 2022: ಐಪಿಎಲ್​ನ 64ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ (PBKS vs DC) ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ ಪಂದ್ಯ. ಏಕೆಂದರೆ ಎರಡೂ ತಂಡಗಳು 12 ಪಂದ್ಯಗಳಿಂದ 12 ಪಾಯಿಂಟ್ಸ್ ಪಡೆದುಕೊಂಡಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ 14 ಪಾಯಿಂಟ್ಸ್​ ಗಳಿಸಲಿದೆ. ಅಷ್ಟೇ ಅಲ್ಲದೆ ಗೆದ್ದ ತಂಡವು ಪ್ಲೇಆಫ್ ರೇಸ್​ನಲ್ಲಿ ಉಳಿಯಲಿದೆ.

ಏಕೆಂದರೆ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿರುವ ಆರ್​ಸಿಬಿ ತಂಡಕ್ಕೆ ಇನ್ನೂ ಒಂದು ಪಂದ್ಯವಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ 16 ಪಾಯಿಂಟ್ಸ್​ಗಳೊಂದಿಗೆ ಪ್ಲೇಆಫ್​ಗೇರಬಹುದು. ಆದರೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೆ 2 ಪಂದ್ಯಗಳಿವೆ. ಈ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಒಂದು ತಂಡವು 16 ಪಾಯಿಂಟ್ಸ್​ಗಳಿಸಿ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನಕ್ಕೇರಬಹುದು.

ಇದೀಗ ಈ ಅವಕಾಶ ಹೊಂದಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳೇ ಮುಖಾಮುಖಿಯಾಗುತ್ತಿರುವ ಕಾರಣ, ಇದರಲ್ಲಿ ಒಂದು ತಂಡ ಸೋಲಲೇಬೇಕಾಗುತ್ತದೆ. ಹೀಗಾಗಿ ಒಂದು ತಂಡವು ಪ್ಲೇಆಫ್ ರೇಸ್​ನಿಂದ ಬಹುತೇಕ ಹೊರಬೀಳುವುದು ಖಚಿತ. ಇದಾಗ್ಯೂ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಗೆಲ್ಲದಿದ್ದರೆ ಮಾತ್ರ 14 ಪಾಯಿಂಟ್ಸ್ ಮೂಲಕ ಪ್ಲೇಆಫ್​ ಲೆಕ್ಕಚಾರ ಮಾಡಬಹುದು.

ಆದರೆ ಗುಜರಾತ್ ಟೈಟನ್ಸ್ ವಿರುದ್ದ ಗೆಲ್ಲುವ ವಿಶ್ವಾಸದಲ್ಲಿರುವ ಆರ್​ಸಿಬಿ ತಂಡವು 16 ಪಾಯಿಂಟ್ಸ್​ ಗಳಿಸಿ ಪ್ಲೇಆಫ್ ಗೇರುವ ತವಕದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳಿಗೂ 16 ಪಾಯಿಂಟ್ಸ್​ ಗಳಿಸುವ ಅವಕಾಶವಿದ್ದು, ಹೀಗಾಗಿ ಈ ತಂಡಗಳಲ್ಲಿ ಒಂದು ತಂಡವು ನೆಟ್​ ರನ್​ ರೇಟ್ ಮೂಲಕ ಆರ್​ಸಿಬಿಗೆ ಪೈಪೋಟಿ ನೀಡಲಿದೆ.

ಅದರಲ್ಲೂ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಏಕೆಂದರೆ ಆರ್​ಸಿಬಿ ತಂಡದ ನೆಟ್​ ರನ್​ ರೇಟ್ ಮೈನಸ್​ನಲ್ಲಿದ್ದು, ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನೆಟ್ ರನ್​ ರೇಟ್ ಪ್ಲಸ್​ನಲ್ಲಿದೆ. ಹೀಗಾಗಿ ಗೆದ್ದ ತಂಡವು ಉತ್ತಮ ನೆಟ್​ ರನ್​ ರೇಟ್​ನೊಂದಿಗೆ 14 ಪಾಯಿಂಟ್ಸ್​ಗಳಿಸಿ ಪಾಯಿಂಟ್ಸ್​ ಟೇಬಲ್​ನಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಲಿದೆ.

ಒಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್​ ನಡುವಣ ಪಂದ್ಯದ ಫಲಿತಾಂಶದಿಂದ ಪ್ಲೇಆಫ್ ರೇಸ್​ನಲ್ಲಿ ಆರ್​ಸಿಬಿಗೆ ಯಾವ ತಂಡ ಪೈಪೋಟಿ ನೀಡಲಿದೆ ಎಂಬುದು ಖಚಿತವಾಗಲಿದೆ. ಮತ್ತೊಂದೆಡೆ ಸೋತ ತಂಡ ಪ್ಲೇಆಫ್ ರೇಸ್​ನಿಂದ ಬಹುತೇಕ ಹೊರಬೀಳಲಿದೆ. ಇದರಿಂದ ಮುಂದಿನ ಪಂದ್ಯದಲ್ಲಿ ಆರ್​ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್​ ರೇಟ್​ ಮೂಲಕ ಪ್ಲೇಆಫ್​ಗೇರಬಹುದು. ಹೀಗಾಗಿ ಇಂದಿನ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿ ತಂಡಕ್ಕೂ ಮಹತ್ವದ ಪಂದ್ಯ ಎನ್ನಬಹುದು.

ಪಂಜಾಬ್ ಕಿಂಗ್ಸ್ ತಂಡ: ಮಯಾಂಕ್ ಅಗರ್ವಾಲ್ (ನಾಯಕ) , ಜಿತೇಶ್ ಶರ್ಮಾ, ಜಾನಿ ಬೈರ್‌ಸ್ಟೋವ್ , ಶಿಖರ್ ಧವನ್ , ಭಾನುಕಾ ರಾಜಪಕ್ಸೆ , ಲಿಯಾಮ್ ಲಿವಿಂಗ್‌ಸ್ಟೋನ್ , ಹರ್‌ಪ್ರೀತ್ ಬ್ರಾರ್ , ರಿಷಿ ಧವನ್ , ರಾಹುಲ್ ಚಾಹರ್ , ಕಗಿಸೋ ರಬಾಡ , ಅರ್ಷ್‌ದೀಪ್ ಸಿಂಗ್ , ಸಂದೀಪ್ ಶರ್ಮಾ , ಶಾರುಖ್ಮಿರಾನ್ ಖಾನ್ , ಶಾರುಖ್ ಖಾನ್ , ಬೆನ್ನಿ ಹೋವೆಲ್ , ಬಲ್ತೇಜ್ ಸಿಂಗ್ , ರಿಟಿಕ್ ಚಟರ್ಜಿ , ಪ್ರೇರಕ್ ಮಂಕಡ್ , ಇಶಾನ್ ಪೊರೆಲ್ ,ಅಥರ್ವ ಟೈಡೆ , ನಾಥನ್ ಎಲ್ಲಿಸ್ , ವೈಭವ್ ಅರೋರಾ , ಅಂಶ್ ಪಟೇಲ್ , ರಾಜ್ ಬಾವಾ

ದೆಹಲಿ ಕ್ಯಾಪಿಟಲ್ಸ್ ತಂಡ: ರಿಷಭ್ ಪಂತ್ (ನಾಯಕ) , ಶ್ರೀಕರ್ ಭರತ್ , ಡೇವಿಡ್ ವಾರ್ನರ್ , ಮಿಚೆಲ್ ಮಾರ್ಷ್ , ಲಲಿತ್ ಯಾದವ್ , ರೋವ್ಮನ್ ಪೊವೆಲ್ , ಅಕ್ಷರ್ ಪಟೇಲ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಚೇತನ್ ಸಕರಿಯಾ , ಅನ್ರಿಕ್ ನೋಕಿಯಾ , ಮನ್ ದೀಪ್ ಸಿಂಗ್ , ಸರ್ಫರಾಜ್ ಖಾನ್ , ರಿಪಾಲ್ ಪಟೇಲ್ , ಯಶ್ ಧುಲ್ , ಮುಸ್ತಾಫಿಜುರ್ ರೆಹಮಾನ್ , ಖಲೀಲ್ ಅಹ್ಮದ್ , ಅಶ್ವಿನ್ ಹೆಬ್ಬಾರ್ , ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ , ವಿಕ್ಕಿ ಓಸ್ತ್ವಾಲ್

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada