IPL 2022: ರೋಹಿತ್ ಶರ್ಮಾರ ರಣನೀತಿಯನ್ನು ಪ್ರಶ್ನಿಸಿದ ಮಾಜಿ ಕೋಚ್
ipl 2022: ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದೆ.
ಐಪಿಎಲ್ ಸೀಸನ್ 15 ನಲ್ಲಿ ಆಡಿರುವ 3 ಪಂದ್ಯಗಳಲ್ಲೂ ಮುಂಬೈ ಇಂಡಿಯನ್ಸ್ ತಂಡ ಸೋತಿದೆ. ಅದರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಹೀನಾಯವಾಗಿ ಸೋಲನುಭವಿಸಿತು. ಈ ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ತಂತ್ರಗಳನ್ನು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ. ನಿರ್ಣಾಯಕ ಹಂತದಲ್ಲಿ ಸಾಗುತ್ತಿದ್ದಾಗ ಡೆತ್ ಓವರ್ ಬೌಲಿಂಗ್ನಲ್ಲಿ ಬೌಲರ್ಗಳ ಆಯ್ಕೆಯ ಬಗ್ಗೆ ರವಿಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಜಸ್ಪ್ರೀತ್ ಬುಮ್ರಾ ಅವರನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಉತ್ತಮ ಬೌಲರ್ಗಳನ್ನು ಹೊಂದಿರದ ಕಾರಣ ಕೆಲವೊಮ್ಮೆ ನೀವು ಅವರಿಂದ ಉತ್ತಮವಾದದನ್ನು ಪಡೆಯಲಾಗುವುದಿಲ್ಲ. ಆದ್ದರಿಂದ ನೀವು ವಿಕೆಟ್‌ಗಳನ್ನು ಹುಡುಕುವ ಬದಲು, ಡೆತ್ ಓವರ್‌ಗಳಿಗೆ ಒಬ್ಬ ಅಥವಾ ಇಬ್ಬರು ಬೌಲರ್ಗಳನ್ನು ಇರಿಸಿಕೊಳ್ಳಬೇಕಾಗುತ್ತದೆ.
ಮುಂಬೈ ಇಂಡಿಯನ್ಸ್ ನಿರ್ಣಾಯಕ ಸಮಯದಲ್ಲಿ ಬುಮ್ರಾ ಅವರನ್ನು ಬಳಸಿಕೊಳ್ಳಬೇಕಿತ್ತು. ಇನಿಂಗ್ಸ್‌ನ ಕೊನೆಯವರೆಗೂ ನೀವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆರಂಭಿಕ ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿ ತಂಡದ ಮೇಲೆ ಗಂಭೀರ ಒತ್ತಡವನ್ನು ಹೇರಲು ಪ್ರಯತ್ನಿಸಬೇಕು. ಮೊದಲ ಆರು ಓವರ್‌ಗಳಲ್ಲಿ, ಪಿಚ್‌ನಲ್ಲಿ ವೇಗ ಮತ್ತು ಬೌನ್ಸ್ ಇದ್ದರೆ, ಕನಿಷ್ಠ ಮೂರು ವಿಕೆಟ್‌ಗಳನ್ನು ಪ್ರಯತ್ನಿಸಬೇಕು. ಆ ಬಳಿಕ ಡೆತ್ ಓವರ್‌ಗಳಿಗೆ ಬಳಸಿಕೊಳ್ಳಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಪ್ರಮುಖ ಬೌಲರ್ಗಳನ್ನು ಹೊಂದಿಲ್ಲ. ಹೀಗಾಗಿ ಬುಮ್ರಾ ಅವರನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲು ರೋಹಿತ್ ಶರ್ಮಾ ಮುಂದಾಗಬೇಕಿತ್ತು. ಇದುವೇ ಈಗ ಮುಂಬೈ ಸೋಲಿಗೆ ಕಾರಣವಾಗುತ್ತಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಗಮನಾರ್ಹವೆಂದರೆ ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಮೂರೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ 5 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಕೆಕೆಆರ್ ಪರ ಪ್ಯಾಟ್ ಕಮಿನ್ಸ್ ಕೇವಲ 15 ಎಸೆತಗಳಲ್ಲಿ ಅಜೇಯ 56 ರನ್ ಗಳಿಸುವ ಮೂಲಕ ಡೆತ್ ಓವರ್ಗಳ ವೇಳೆ ಅಬ್ಬರಿಸಿದ್ದರು. ಇದರೊಂದಿಗೆ ಕೆಕೆಆರ್ ಸುಲಭ ಜಯ ಸಾಧಿಸಿತು.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?