Virat Kohli: ಅದೇನು ಸುಖ…ವಿರಾಟ್ ಕೊಹ್ಲಿಯ ಮಸಾಜ್​ಗೆ ಮೈಮರೆತ ಮ್ಯಾಕ್ಸ್​ವೆಲ್

Virat Kohli: ಅದೇನು ಸುಖ...ವಿರಾಟ್ ಕೊಹ್ಲಿಯ ಮಸಾಜ್​ಗೆ ಮೈಮರೆತ ಮ್ಯಾಕ್ಸ್​ವೆಲ್
Virat kohli-Maxwell

Virat Kohli-Glenn Maxwell: ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ತಂಡದ ಮೊದಲ 3 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ತಂಡವನ್ನು ಸೇರಿಕೊಂಡಿರುವ ಮ್ಯಾಕ್ಸ್​ವೆಲ್ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದ ಮೂಲಕ ಐಪಿಎಲ್ ಅಭಿಯಾನ ಆರಂಭಿಸಲಿದ್ದಾರೆ.

TV9kannada Web Team

| Edited By: Zahir PY

Apr 06, 2022 | 5:07 PM

ಐಪಿಎಲ್ ಸೀಸನ್ 15ರ 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಜಯ ಸಾಧಿಸಿತ್ತು. ಆರ್​ಆರ್ ತಂಡ ನೀಡಿದ 170 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದ್ದರು. ಆದರೆ ಅನೂಜ್ ರಾವತ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡ ಆರ್​ಸಿಬಿ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದರು. ಇತ್ತ ಔಟಾಗಿ ಬಂದ ಬಳಿಕ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಈ ಪಂದ್ಯದಿಂದ ಹೊರಗುಳಿದಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಡ್ರೆಸ್ಸಿಂಗ್ ರೂಮ್​ನಲ್ಲಿದ್ದರು.

ಈ ವೇಳೆ ಕೂತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರ ಬೆನ್ನಿಗೆ ಮತ್ತು ಭುಜಕ್ಕೆ ವಿರಾಟ್ ಕೊಹ್ಲಿ ಮಸಾಜ್ ಮಾಡುತ್ತಿರುವುದು ಕ್ಯಾಮೆರಾಮ್ಯಾನ್ ಸೆರೆ ಹಿಡಿದಿದ್ದರು. ಇತ್ತ ಕಿಂಗ್ ಕೊಹ್ಲಿಯ ಮಸಾಜ್ ಸುಖದಿಂದ ಮ್ಯಾಕ್ಸ್​ವೆಲ್ ಮೈಮರೆತಿದ್ದರು. ಇದೀಗ ಕೊಹ್ಲಿ ಮಸಾಜ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕೊಹ್ಲಿ-ಮ್ಯಾಕ್ಸಿಯ ಗೆಳೆತನಕ್ಕೆ ಅಭಿಮಾನಿಗಳು ಬಹುಪರಾಕ್ ಅನ್ನುತ್ತಿದ್ದಾರೆ.

ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ತಂಡದ ಮೊದಲ 3 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ತಂಡವನ್ನು ಸೇರಿಕೊಂಡಿರುವ ಮ್ಯಾಕ್ಸ್​ವೆಲ್ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದ ಮೂಲಕ ಐಪಿಎಲ್ ಅಭಿಯಾನ ಆರಂಭಿಸಲಿದ್ದಾರೆ. ಅದರಂತೆ ಏಪ್ರಿಲ್ 9 ರಂದು ನಡೆಯಲಿರುವ ಮುಂಬೈ ವಿರುದ್ದ ಪಂದ್ಯದಲ್ಲಿ ಮ್ಯಾಕ್ಸಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ಪಂದ್ಯದಲ್ಲಿ 87 ರನ್​ಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್​ಸಿಬಿ ತಂಡಕ್ಕೆ ಶಹಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ಆಸರೆಯಾಗಿದ್ದರು. ಶಹಬಾಜ್ (45) ಮತ್ತು ಡಿಕೆ (ಅಜೇಯ 44) ಅಂತಿಮ ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ 5 ಎಸೆತಗಳು ಬಾಕಿಯಿರುವಂತೆಯೇ RCB ಗೆ ನಾಲ್ಕು ವಿಕೆಟ್​ಗಳ ಜಯ ತಂದುಕೊಟ್ಟರು.

ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್

Follow us on

Related Stories

Most Read Stories

Click on your DTH Provider to Add TV9 Kannada