AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025 vs PSL 2025: ಪಾಕಿಸ್ತಾನಕ್ಕೆ ಕೈಕೊಟ್ಟು ಭಾರತದ ಕೈ ಹಿಡಿದ ಯುಎಇ

IPL 2025 vs PSL 2025: ಭಾರತ ಮತ್ತು ಪಾಕಿಸ್ತಾನದಲ್ಲಿ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಂಡಿದೆ. ಅತ್ತ ಪಾಕಿಸ್ತಾನ್ ಸೂಪರ್ ಲೀಗ್​ಗೆ ಪೂರ್ಣ ವಿರಾಮ ಬಿದ್ದರೆ, ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಒಂದು ವಾರದವರೆಗೆ ಮುಂದೂಡಲಾಗಿದೆ. ಇದೀಗ ಐಪಿಎಲ್ ಸೀಸನ್-18ರ 16 ಪಂದ್ಯಗಳನ್ನು ಆಯೋಜಿಸಲು ಯುಎಇ ಆಸಕ್ತಿ ತೋರಿಸಿದೆ.

IPL 2025 vs PSL 2025: ಪಾಕಿಸ್ತಾನಕ್ಕೆ ಕೈಕೊಟ್ಟು ಭಾರತದ ಕೈ ಹಿಡಿದ ಯುಎಇ
Ipl Vs Psl
ಝಾಹಿರ್ ಯೂಸುಫ್
|

Updated on: May 10, 2025 | 9:04 AM

Share

ಇಂಡೋ-ಪಾಕ್ ಯುದ್ಧ ಭೀತಿ ನಡುವೆ ಇತ್ತ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸ್ಥಗಿತಗೊಂಡರೆ, ಅತ್ತ ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ರದ್ದಾಗಿದೆ. ಇದರ ನಡುವೆ ಪಾಕ್ ಕ್ರಿಕೆಟ್ ಮಂಡಳಿ ಪಿಎಸ್​ಎಲ್​ ಟೂರ್ನಿಯನ್ನು ಪೂರ್ಣಗೊಳಿಸಲು ಪರ್ಯಾಯ ಆಯ್ಕೆಗಳತ್ತ ಮುಖ ಮಾಡಿತ್ತು. ಇದಕ್ಕಾಗಿಯೇ ಯುಎಇ ಕ್ರಿಕೆಟ್ ಬೋರ್ಡ್​ ಜೊತೆ ಚರ್ಚಿಸಿದ್ದರು. ಅಲ್ಲದೆ ಪಿಎಸ್​ಎಲ್​ನ ಉಳಿದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲು ಅನುಮತಿಯನ್ನು ಸಹ ಕೋರಿತ್ತು. ಆದರೆ ಯುಎಇ ಕ್ರಿಕೆಟ್ ಬೋರ್ಡ್ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಕೋರಿಕೆಯನ್ನು ತಿರಸ್ಕರಿಸಿದೆ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಅಪ್ರಸನ್ನ ಪರಿಸ್ಥಿತಿಯ ಕಾರಣ ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಯುಎಇನಲ್ಲಿ ಆಯೋಜಿಸಲು ನಿರಾಕರಿಸಿದೆ. ಹೀಗಾಗಿ 10ನೇ ಸೀಸನ್​ ಪಿಎಸ್​ಎಲ್ ಟೂರ್ನಿ ಅರ್ಧದಲ್ಲೇ ಮೊಟಕುಗೊಳ್ಳುವುದು ಖಚಿತವಾಗಿದೆ.

ಯುಎಇನಲ್ಲಿ ಐಪಿಎಲ್?

ಪಾಕಿಸ್ತಾನ್ ಸೂಪರ್ ಲೀಗ್​ಗೆ ನಕಾರ ಎಂದಿರುವ ಯುಎಇ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಜೊತೆ ಐಪಿಎಲ್ ಆಯೋಜನೆ ಬಗ್ಗೆ ಚರ್ಚಿಸಿದೆ ಎಂದು ವರದಿಯಾಗಿದೆ. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಯುಎಇ ಕ್ರಿಕೆಟ್ ಸಿದ್ಧವಾಗಿದೆ ಎಂಬ ಮಾಹಿತಿಗಳು ಹೊರಬಿದ್ದಿವೆ.

ಇದನ್ನೂ ಓದಿ
Image
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
Image
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
Image
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
Image
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಈ ಹಿಂದೆ ಕೊರೋನಾ ಭೀತಿ ಹಿನ್ನಲೆಯಲ್ಲಿ ಐಪಿಎಲ್ 2020 ಹಾಗೂ 2021 ಅನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ 2021ರ ಟಿ20 ವಿಶ್ವಕಪ್ ಅನ್ನು ಸಹ ಭಾರತ ಯುಎಇನಲ್ಲಿ ಆಯೋಜಿಸಿತ್ತು. ಇದರಿಂದ ಯುಎಇ ಕ್ರಿಕೆಟ್ ಬೋರ್ಡ್​ಗೆ ಉತ್ತಮ ಆದಾಯ ಲಭಿಸಿದೆ.

ಇದೇ ಕಾರಣದಿಂದಾಗಿ ಯುಎಇ ಕ್ರಿಕೆಟ್ ಬೋರ್ಡ್, ಇಂಡಿಯನ್ ಪ್ರೀಮಿಯರ್ ಲೀಗ್​ನ ಉಳಿದ 16 ಪಂದ್ಯಗಳಿಗೆ ಆತಿಥ್ಯವಹಿಸಲು ಆಸಕ್ತಿ ತೋರಿದೆ. ಸದ್ಯ ಉಭಯ ದೇಶಗಳ ಕ್ರಿಕೆಟ್ ಬೋರ್ಡ್ ನಡುವೆ ಮಾತುಕತೆ ಮಾತ್ರ ನಡೆದಿದ್ದು, ಇದಾಗ್ಯೂ ಬಿಸಿಸಿಐ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಏಕೆಂದರೆ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಒಂದು ವಾರದವರೆಗೆ ಮಾತ್ರ ಸ್ಥಗಿತಗೊಳಿಸಿದೆ. ಅಂದರೆ ವಾರದ ಬಳಿಕ ಯುದ್ಧ ಭೀತಿ ಕೊನೆಗೊಂಡರೆ, ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲಿದ್ದಾರೆ. ಇಲ್ಲದಿದ್ದರೆ ಮಾತ್ರ ಬಿಸಿಸಿಐ ಪರ್ಯಾಯ ಆಯ್ಕೆಗಳತ್ತ ಗಮನಹರಿಸಲಿದೆ.

ಇದರ ನಡುವೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಐಪಿಎಲ್​ನ ಉಳಿದ ಪಂದ್ಯಗಳಿಗೆ ಆತಿಥ್ಯವಹಿಸಲು ಆಸಕ್ತಿ ತೋರಿದೆ. 16 ಪಂದ್ಯಗಳನ್ನು ತಮ್ಮ ದೇಶದಲ್ಲಿ ಆಯೋಜಿಸುವಂತೆ ಇಸಿಬಿ ಬಿಸಿಸಿಐಗೆ ಬಿಗ್ ಆಫರ್ ನೀಡಿದೆ. ಅದರಂತೆ ಭಾರತೀಯ ಕ್ರಿಕೆಟ್ ಮಂಡಳಿ ಮುಂದೆ ಇಂಗ್ಲೆಂಡ್ ಆಯ್ಕೆ ಕೂಡ ಇದೆ.

ಇದನ್ನೂ ಓದಿ: IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ

ಹೀಗಾಗಿ ಭಾರತದಲ್ಲಿ ಟೂರ್ನಿ ಆಯೋಜಿಸುವ ಪರಿಸ್ಥಿತಿ ಇರದಿದ್ದರೆ, ಬಿಸಿಸಿಐ ಯುಎಇ ಅಥವಾ ಇಂಗ್ಲೆಂಡ್​ನಲ್ಲಿ ಉಳಿದ 16 ಪಂದ್ಯಗಳನ್ನು ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.