VIDEO: ಅಶ್ಲೀಲವಾಗಿ ಬೈದ ಹಾರ್ದಿಕ್ ಪಾಂಡ್ಯ: ಜಿದ್ದಿಗೆ ನಿಂತ ಸಾಯಿ ಕಿಶೋರ್
Gujarat Titans vs Mumbai Indians: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ಗಳಲ್ಲಿ 196 ರನ್ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ 160 ರನ್ಗಳಿಸಲಷ್ಟೇ ಶಕ್ತರಾದರು. ಈ ಚೇಸಿಂಗ್ ವೇಳೆ ಹಾರ್ದಿಕ್ ಪಾಂಡ್ಯ ಹಾಗೂ ಸಾಯಿ ಕಿಶೋರ್ ನಡುವೆ ಸಣ್ಣ ಕಿರಿಕ್ ಕೂಡ ನಡೆದಿದೆ.

IPL 2025″ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಗುಜರಾತ್ ಟೈಟಾನ್ಸ್ ಸ್ಪಿನ್ನರ್ ಸಾಯಿ ಕಿಶೋರ್ (Sai Kishore) ನಡುವೆ ಜಿದ್ದಾಟ ಕಂಡು ಬಂದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ (63) ಅರ್ಧಶತಕ ಬಾರಿಸಿದರೆ, ಶುಭ್ಮನ್ ಗಿಲ್ 38 ರನ್ಗಳಿಸಿದರು.
ಇನ್ನು ಜೋಸ್ ಬಟ್ಲರ್ 39 ರನ್ಗಳ ಕೊಡಗೆ ನೀಡಿದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.
197 ರನ್ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (8) ಮೊದಲ ಓವರ್ನಲ್ಲಿ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಯಾನ್ ರಿಕೆಲ್ಟನ್ (6) ರನ್ನು ಬೌಲ್ಡ್ ಮಾಡಿ ಮೊಹಮ್ಮದ್ ಸಿರಾಜ್ 2ನೇ ಯಶಸ್ಸು ತಂದುಕೊಟ್ಟರು.
ಈ ಹಂತದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ (39) ಹಾಗೂ ಸೂರ್ಯಕುಮಾರ್ ಯಾದವ್ (48) ಉತ್ತಮ ಮೊತೆಯಾಟದೊಂದಿಗೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ರನ್ಗಳಿಸಲು ಹೆಣಗಾಡಿದ್ದರು.
ಅದರಲ್ಲೂ ಸ್ಪಿನ್ನರ್ ಸಾಯಿ ಕಿಶೋರ್ ಎಸೆತಗಳಲ್ಲಿ ಬಿಗ್ ಶಾಟ್ ಬಾರಿಸಲು ತಡಕಾಡಿದರು. ಇದೇ ವೇಳೆ ಕೋಪದಿಂದ ಬೌಲರ್ನತ್ತ ನೋಡಿ ಅಶ್ಲೀಲವಾಗಿ ಬೈದಿದ್ದಾರೆ.
ತಿರುಗಿ ನಿಂತ ಸಾಯಿ ಕಿಶೋರ್:
ಹಾರ್ದಿಕ್ ಪಾಂಡ್ಯ ತನ್ನನ್ನು ಗುರಿಯಾಗಿಸಿ ಅಶ್ಲೀಲವಾಗಿ ಬೈದಿರುವುದು ಕೇಳಿಸಿಕೊಂಡ ಸಾಯಿ ಕಿಶೋರ್ ನೇರವಾಗಿ ಹೋಗಿ ಹಾರ್ದಿಕ್ ಪಾಂಡ್ಯರನ್ನು ದಿಟ್ಟಿಸಿ ನೋಡಿದರು. ಅತ್ತ ಕಡೆ ಮೊದಲೇ ಕೋಪದಲ್ಲಿದ್ದ ಹಾರ್ದಿಕ್ ಪಾಂಡ್ಯ ಕೂಡ ಮುಂದೆ ಬಂದು ಕಣ್ಣನಲ್ಲಿ ಕಣ್ಣಿಟ್ಟು ಗುರಾಯಿಸಿದರು. ಅಷ್ಟರಲ್ಲಾಗಲೇ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯಪ್ರವೇಶಿಸಿ ಉಭಯರನ್ನು ದೂರ ಮಾಡಿದರು. ಇದೀಗ ಈ ಜಿದ್ದಾಟದ ವಿಡಿಯೋ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ-ಸಾಯಿ ಕಿಶೋರ್ ಜಿದ್ದಾಟ:
Lafda between Hardik Pandya & Sai Kishore 🔥🥵🥶
But I like calmness from sai kishore, maturity level 👌👌👌 pic.twitter.com/3MHgjUOWzE
— Zsports (@_Zsports) March 30, 2025
ಇನ್ನು ಈ ಪಂದ್ಯದಲ್ಲಿ 197 ರನ್ಗಳನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಅಂತಿಮವಾಗಿ 160 ರನ್ಗಳಿಸಿ 36 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನ ಬಳಿಕ ಸಾಯಿ ಕಿಶೋರ್ ಹಾಗೂ ಹಾರ್ದಿಕ್ ಪಾಂಡ್ಯ ಮುಖಾಮುಖಿಯಾಗಿದ್ದರು. ಈ ವೇಳೆ ಇಬ್ಬರು ಆಟಗಾರರು ಪರಸ್ಪರ ನಗುತ್ತಾ ಆಲಿಂಗಿಸಿಕೊಳ್ಳುವ ಮೂಲಕ ಎಲ್ಲಾ ಕಿತ್ತಾಟಗಳಿಗೂ ತೆರೆ ಎಳೆದಿರುವುದು ವಿಶೇಷ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ , ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ , ಹಾರ್ದಿಕ್ ಪಾಂಡ್ಯ (ನಾಯಕ) , ನಮನ್ ಧೀರ್ , ಮಿಚೆಲ್ ಸ್ಯಾಂಟ್ನರ್ , ದೀಪಕ್ ಚಹರ್ , ಟ್ರೆಂಟ್ ಬೌಲ್ಟ್ , ಮುಜೀಬ್ ಉರ್ ರೆಹಮಾನ್ , ಸತ್ಯನಾರಾಯಣ ರಾಜು.
ಇದನ್ನೂ ಓದಿ: ಪಾಕ್ ವಿರುದ್ಧ ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಪುತ್ರ..!
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭ್ಮನ್ ಗಿಲ್ (ನಾಯಕ) , ಸಾಯಿ ಸುದರ್ಶನ್ , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ಶೆರ್ಫೇನ್ ರುದರ್ಫೋರ್ಡ್ , ಶಾರುಖ್ ಖಾನ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಸಾಯಿ ಕಿಶೋರ್ , ಕಗಿಸೋ ರಬಾಡ , ಮೊಹಮ್ಮದ್ ಸಿರಾಜ್ , ಪ್ರಸಿದ್ಧ್ ಕೃಷ್ಣ , ಇಶಾಂತ್ ಶರ್ಮಾ.