Ishan Kishan: ಐಪಿಎಲ್ನಲ್ಲಿ ಡಬಲ್ ಸೆಂಚುರಿ ಹೊಡೀತೀನಿ..!
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) ದ್ವಿತೀಯ ಪಂದ್ಯದಲ್ಲಿ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಕೇವಲ 47 ಎಸೆತಗಳಲ್ಲಿ ಅಜೇಯ 106 ರನ್ ಬಾರಿಸಿದ್ದರು. ಈ ವೇಳೆ ಅವರ ಬ್ಯಾಟ್ನಿಂದ ಮೂಡಿಬಂದ ಬೌಂಡರಿಗಳ ಸಂಖ್ಯೆ 17. ಇದೀಗ ಅಜೇಯ ಶತಕ ಸಿಡಿಸಿದ ಹುಮ್ಮಸ್ಸಿನಲ್ಲಿರುವ ಇಶಾನ್ ಕಿಶನ್ ದ್ವಿಶತಕ ಬಾರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಶತಕ ಸಿಡಿಸಿರುವ ಇಶಾನ್ ಕಿಶನ್ (Ishan Kishan) ಹೊಸ ಹುಮ್ಮಸ್ಸಿನಲ್ಲಿದ್ದಾರೆ. ಈ ಹುಮ್ಮಸ್ಸಿನೊಂದಿಗೆ ಐಪಿಎಲ್ನಲ್ಲಿ ದ್ವಿಶತಕ ಬಾರಿಸುವ ವಿಶ್ವಾಸದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ 47 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 106 ರನ್ ಬಾರಿಸಿದ್ದರು.
ಈ ವಿಸ್ಪೋಟಕ ಬ್ಯಾಟಿಂಗ್ನಿಂದಾಗಿ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 286 ರನ್ ಕಲೆಹಾಕಿತು. ಅಲ್ಲದೆ ಈ ಪಂದ್ಯದಲ್ಲಿ 44 ರನ್ಗಳ ಗೆಲುವು ದಾಖಲಿಸಿತು. ಈ ಗೆಲುವಿನ ರೂವಾರಿಯೇ ಇಶಾನ್ ಕಿಶನ್.
ಈ ಖುಷಿಯಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಇಶಾನ್ ಕಿಶನ್, ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸಿದ್ದು ಖುಷಿ ನೀಡಿದೆ. ಇದೇ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದಿದ್ದಾರೆ.
ಇದೇ ವೇಳೆ ಮುಂದಿನ ಪಂದ್ಯಗಳಲ್ಲಿ ನಿಮ್ಮಿಂದ ದ್ವಿಶತಕವನ್ನು ನಿರೀಕ್ಷಿಸಬಹುದಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಇಶಾನ್ ಕಿಶನ್, ಅಂತಹದೊಂದು ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಾನು ಡಬಲ್ ಸೆಂಚುರಿ ಬಾರಿಸ್ತೀನಿ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಈ ಸಾಧನೆ ಮಾಡುವ ಬಯಕೆಯನ್ನು ಹೊಂದಿದ್ದೀನಿ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಏಕದಿನ ಪಂದ್ಯಗಳಲ್ಲಿ 250 ಮತ್ತು 300 ರನ್ ಗಳಿಸುವ ಬಯಕೆಯನ್ನು ಹೊಂದಿರುವುದಾಗಿ ಇಶಾನ್ ಕಿಶನ್ ತಿಳಿಸಿದ್ದಾರೆ. ಈ ಮೂಲಕ ತನ್ನ ಟಾರ್ಗೆಟ್ ಬಿಗ್ ಸ್ಕೋರ್ ಗಳಿಸುವುದು ಎಂಬುದನ್ನು ಯುವ ಎಡಗೈ ದಾಂಡಿಗ ಬಹಿರಂಗಪಡಿಸಿದ್ದಾರೆ.
ಇಶಾನ್ ಕಿಶನ್ ಸೆಂಚುರಿ ವಿಡಿಯೋ:
𝙏𝙝𝙖𝙩 𝙢𝙖𝙞𝙙𝙚𝙣 #TATAIPL 𝙘𝙚𝙣𝙩𝙪𝙧𝙮 𝙛𝙚𝙚𝙡𝙞𝙣𝙜 🧡
A special first for Ishan Kishan as he brought up his 💯 off just 45 balls 🔥
Updates ▶️ https://t.co/ltVZAvInEG#SRHvRR | @SunRisers | @ishankishan51 pic.twitter.com/8n92H58XbK
— IndianPremierLeague (@IPL) March 23, 2025
ಸದ್ಯ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗು ಬಡಿದಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಇಂದು (ಮಾ.27) ನಡೆಯಲಿರುವ ಐಪಿಎಲ್ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ಆರ್ಭಟಿಸಲಿದ್ದಾರಾ ಕಾದು ನೋಡಬೇಕಿದೆ.
Published On - 9:54 am, Thu, 27 March 25