ಐಪಿಎಲ್ ಆರಂಭಕ್ಕೂ ಮುನ್ನವೇ ವೇಳಾಪಟ್ಟಿ ಬದಲಾವಣೆ; ಕೊಲ್ಕತ್ತಾದಿಂದ ಗುವಾಹಟಿಗೆ ಪಂದ್ಯ ಶಿಫ್ಟ್

|

Updated on: Mar 20, 2025 | 9:34 PM

IPL 2025 Schedule Change: 2025ರ ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಮೊದಲು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು, ರಾಮನವಮಿ ಆಚರಣೆಯಿಂದಾಗಿ ಭದ್ರತಾ ಕಾರಣಗಳಿಗಾಗಿ ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಈ ಬದಲಾವಣೆಯಿಂದ ಬಂಗಾಳ ಕ್ರಿಕೆಟ್ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಲಿದೆ. ಅಸ್ಸಾಂ ಕ್ರಿಕೆಟ್ ಸಂಸ್ಥೆ ಪಂದ್ಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದೆ.

ಐಪಿಎಲ್ ಆರಂಭಕ್ಕೂ ಮುನ್ನವೇ ವೇಳಾಪಟ್ಟಿ ಬದಲಾವಣೆ; ಕೊಲ್ಕತ್ತಾದಿಂದ ಗುವಾಹಟಿಗೆ ಪಂದ್ಯ ಶಿಫ್ಟ್
Kkr
Follow us on

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಮಾರ್ಚ್ 22 ರಿಂದ ಪ್ರಾರಂಭವಾಗುತ್ತಿದೆ. ಆದರೆ ಈ ಲೀಗ್ ಪ್ರಾರಂಭವಾಗುವ ಮೊದಲೇ ಅದರ ವೇಳಾಪಟ್ಟಿ ಬದಲಾಗಿದೆ. ವಾಸ್ತವವಾಗಿ, ಈ ಲೀಗ್‌ನ ಒಂದು ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಏಪ್ರಿಲ್ 6 ರಂದು ನಡೆಯಬೇಕಾಗಿದ್ದ ಕೆಕೆಆರ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವಿನ ಪಂದ್ಯದ ಸ್ಥಳವನ್ನು ಬದಲಾಯಿಸಲಾಗಿದೆ. ಈ ಪಂದ್ಯವನ್ನು ಮೊದಲು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಈ ಪಂದ್ಯವನ್ನು ಗುವಾಹಟಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕೋಲ್ಕತ್ತಾದಲ್ಲಿ ರಾಮನವಮಿ ಆಚರಣೆಯ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಂಗಾಳ ಕ್ರಿಕೆಟ್ ಸಂಸ್ಥೆಗೆ ನಷ್ಟ

ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಈ ಮಾಹಿತಿ ನೀಡಿದ್ದು, ರಾಮನವಮಿ ದಿನದಂದು ನಗರದಲ್ಲಿ 20,000 ಕ್ಕೂ ಹೆಚ್ಚು ಮೆರವಣಿಗೆಗಳು ನಡೆಯುವುದರಿಂದ ಪಂದ್ಯಕ್ಕೆ ಸಂಪೂರ್ಣ ಭದ್ರತೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಕೋಲ್ಕತ್ತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾವು ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸಲು ಬಿಸಿಸಿಐ ಅನ್ನು ಕೇಳಿಕೊಂಡಿದ್ದೇವು. ಆ ಪ್ರಕಾರ ಈಗ ಈ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಲಕ್ನೋ ಸೂಪರ್‌ಜೈಂಟ್ಸ್ ನಡುವಿನ ಈ ಪಂದ್ಯವನ್ನು ಕೋಲ್ಕತ್ತಾದಿಂದ ಗುವಾಹಟಿಗೆ ಸ್ಥಳಾಂತರಿಸುವುದರಿಂದ ಬಂಗಾಳ ಕ್ರಿಕೆಟ್ ಅಸೋಸಿಯೇಷನ್​ಗೆ ಸಾಕಷ್ಟು ​​ನಷ್ಟ ಉಂಟಾಗಲಿದೆ. ಏಕೆಂದರೆ ಕೆಕೆಆರ್​ ತಂಡಕ್ಕೆ ಇದು ತವರು ಮೈದಾನ ಆಗಿರುವ ಕಾರಣ, ಈ ಪಂದ್ಯವನ್ನು ವೀಕ್ಷಿಸಲು ಸಾಕಷ್ಟು ಅಭಿಮಾನಿಗಳು ಮೈದಾನಕ್ಕೆ ಬರುವುದು ಖಚಿತವಾಗಿತ್ತು. ಇದರಿಂದ ಸಿಎಬಿ ಖಾತೆಗೆ ಬಹಳಷ್ಟು ಹಣ ಸೇರುತ್ತಿತ್ತು. ಆದರೆ ಈಗ ಈ ಹಣ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್‌ನ ಜೇಬಿಗೆ ಬೀಳಲಿದೆ.

ಇದನ್ನೂ ಓದಿ
ಐಪಿಎಲ್ ಆಟಗಾರರ ಖಾತೆಗೆ ಬಿಳಲಿದೆ ಮತ್ತಷ್ಟು ಹಣ
2ನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಬಿಸಿಸಿಐ ಬಂಪರ್ ಗಿಫ್ಟ್
ಐಪಿಎಲ್​ಗಾಗಿ 5 ವರ್ಷಗಳ ನಿಷೇಧವನ್ನು ರದ್ದುಗೊಳಿಸಿದ ಬಿಸಿಸಿಐ
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್

ಐಪಿಎಲ್​ನಿಂದ ಅತಿ ಹೆಚ್ಚು ಹಣ ಸಂಪಾದಿಸಿದ ಟಾಪ್ 10 ಆಟಗಾರರಿವರು

ಗುವಾಹಟಿಯಲ್ಲಿ 3 ಪಂದ್ಯ

ರಾಜಸ್ಥಾನ ರಾಯಲ್ಸ್ ತಂಡವು ಗುವಾಹಟಿಯಲ್ಲಿ ಎರಡು ತವರು ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳು ಮಾರ್ಚ್ 26 ಮತ್ತು ಮಾರ್ಚ್ 30 ರಂದು ನಡೆಯಲಿವೆ. ಇದಾದ ನಂತರ, ಕೆಕೆಆರ್ ಹಾಗೂ ಲಕ್ನೋ ನಡುವಿನ ಪಂದ್ಯವೂ ಗುವಾಹಟಿಯಲ್ಲಿ ನಡೆಯಲಿದೆ. ಪಂದ್ಯಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವುದಾಗಿ ಅಸ್ಸಾಂ ಕ್ರಿಕೆಟ್ ಸಂಸ್ಥೆ ಭರವಸೆ ನೀಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 pm, Thu, 20 March 25