IPL 2025: ಐಪಿಎಲ್‌ಗಾಗಿ ಪಾಕ್ ಸೂಪರ್ ಲೀಗ್​ ತೊರೆದಿದ್ದ ಆಟಗಾರ ಶೂನ್ಯಕ್ಕೆ ಔಟ್..!

IPL 2025: ಪಂಜಾಬ್ ಕಿಂಗ್ಸ್ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಬದಲಿಗೆ ಮಿಚೆಲ್ ಓವನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಹೀಗೆ ಪಾಕಿಸ್ತಾನ ಸೂಪರ್ ಲೀಗ್ ನಿಂದ ಐಪಿಎಲ್ ಗೆ ಬಂದ ಮಿಚೆಲ್ ಓವನ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ 2 ಎಸೆತಗಳಲ್ಲಿ ಖಾತೆ ತೆರೆಯದೆ ಔಟ್ ಆದರು. ಬಿಗ್ ಬ್ಯಾಷ್ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಓವನ್ ಐಪಿಎಲ್ ನಲ್ಲಿ ನಿರಾಶೆ ಉಂಟುಮಾಡಿದರು.

IPL 2025: ಐಪಿಎಲ್‌ಗಾಗಿ ಪಾಕ್ ಸೂಪರ್ ಲೀಗ್​ ತೊರೆದಿದ್ದ ಆಟಗಾರ ಶೂನ್ಯಕ್ಕೆ ಔಟ್..!
Mitchell Owen

Updated on: May 18, 2025 | 4:34 PM

ಐಪಿಎಲ್ 2025 (IPL 2025) ರ 59 ನೇ ಪಂದ್ಯ ಪಂಜಾಬ್ ಕಿಂಗ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವೆ ನಡೆಯುತ್ತಿದೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯದ ಗೆಲುವು ಪಂಜಾಬ್​ಗೆ ಬಹಳ ಮುಖ್ಯವಾಗಿದೆ. ಹೀಗಾಗಿ ಪಂಜಾಬ್ ತನ್ನ ತಂಡದಲ್ಲಿ ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿತ್ತು. ಅದರಂತೆ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ (PSL) ಆಡುತ್ತಿದ್ದ ವಿದೇಶಿ ಆಟಗಾರನನ್ನು ದ್ವಿತೀಯಾರ್ಧದ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ತಂಡಕ್ಕೆ ಸೇರಿಸಿಕೊಂಡಿತು. ವಾಸ್ತವವಾಗಿ ಪಂಜಾಬ್ ಕಿಂಗ್ಸ್‌ನ ಡ್ಯಾಶಿಂಗ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದಾಗಿ ಐಪಿಎಲ್ 2025 ರಿಂದ ಹೊರಗುಳಿದಿದ್ದರು. ಹೀಗಾಗಿ ಪಿಎಸ್ಎಲ್​ನಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಮಿಚೆಲ್ ಓವನ್ (Mitchell Owen) ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಮಿಚೆಲ್ ಓವನ್ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಕೇವಲ 2 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.

ಐಪಿಎಲ್​ಗಾಗಿ ಪಿಎಸ್​ಎಲ್ ತೊರೆದಿದ್ದ ಮಿಚೆಲ್

ಪಂಜಾಬ್ ಕಿಂಗ್ಸ್ ತಂಡವು ಗ್ಲೆನ್ ಮ್ಯಾಕ್ಸ್‌ವೆಲ್ ಬದಲಿಗೆ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಮಿಚೆಲ್ ಓವನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮಿಚೆಲ್ ಓವನ್ ಈ ಮೊದಲು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪೇಶಾವರ್ ಝಲ್ಮಿ ತಂಡದ ಪರ ಆಡುತ್ತಿದ್ದರು. ಇತ್ತೀಚೆಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯ ನಂತರ, ಈ ಆಟಗಾರ ಪಾಕಿಸ್ತಾನಕ್ಕೆ ಹೋಗದಿರಲು ನಿರ್ಧರಿಸಿ ಐಪಿಎಲ್ ಆಡಲು ಭಾರತಕ್ಕೆ ಬಂದಿದ್ದಾರೆ.

ಅದರಂತೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಪಡೆದ ಮಿಚೆಲ್ ಓವನ್ ಕೇವಲ 2 ಎಸೆತಗಳನ್ನು ಎದುರಿಸಿ ತಮ್ಮ ವಿಕೆಟ್ ಕಳೆದುಕೊಂಡರು. ಮಿಚೆಲ್ ಓವನ್​ಗೆ ಖಾತೆ ತೆರೆಯಲು ಆಗಲಿಲ್ಲ. ಪಂಜಾಬ್ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಮಿಚೆಲ್, ಕ್ವೆನಾ ಎಂಫಕಾ ಅವರ ಅದ್ಭುತ ಎಸೆತದಲ್ಲಿ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಮಿಚೆಲ್ ಓವನ್ ಪಾಕಿಸ್ತಾನ ಸೂಪರ್ ಲೀಗ್ 2025 ರಲ್ಲಿ ಪೇಶಾವರ್ ಝಲ್ಮಿ ಪರ ಒಟ್ಟು 8 ಪಂದ್ಯಗಳನ್ನು ಆಡಿದ್ದು, ಕೇವಲ 102 ರನ್‌ಗಳನ್ನು ಮಾತ್ರ ಕಲೆಹಾಕಿದ್ದರು.

IPL 2025: ಬ್ಯಾಟಿಂಗ್‌ ಕ್ರಮಾಂಕ ಮತ್ತೆ ಬದಲು; ಐಪಿಎಲ್‌ನಲ್ಲೂ ರಾಹುಲ್ ಸಾಂದರ್ಭಿಕ ಶಿಶು

2025 ರಲ್ಲಿ ಬಿಗ್ ಬ್ಯಾಷ್ ಲೀಗ್ ಸಂಚಲನ

ಈ ವರ್ಷ ಆಸ್ಟ್ರೇಲಿಯಾದ ಕ್ರಿಕೆಟ್ ಲೀಗ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮಿಚೆಲ್ ಓವನ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಇಡೀ ಸೀಸನ್‌ನಲ್ಲಿ 11 ಇನ್ನಿಂಗ್ಸ್‌ಗಳನ್ನು ಆಡಿ 45 ರ ಸರಾಸರಿ ಮತ್ತು 203 ರ ಸ್ಟ್ರೈಕ್ ರೇಟ್‌ನೊಂದಿಗೆ ಅತಿ ಹೆಚ್ಚು 452 ರನ್‌ ಕಲೆಹಾಕಿದ್ದರು. ಫೈನಲ್‌ನಲ್ಲಿ, ಮಿಚೆಲ್ ಓವನ್ 42 ಎಸೆತಗಳಲ್ಲಿ 257 ರ ಸ್ಟ್ರೈಕ್ ರೇಟ್‌ನೊಂದಿಗೆ 108 ರನ್‌ ಗಳಿಸುವ ಮೂಲಕ ತಮ್ಮ ತಂಡವಾದ ಹೋಬಾರ್ಟ್ ಹರಿಕೇನ್ಸ್ ಅನ್ನು ಚಾಂಪಿಯನ್ ಮಾಡಿದ್ದರು. ಈ ಶತಕದ ಇನ್ನಿಂಗ್ಸ್‌ನಲ್ಲಿ, ಅವರು 10 ಸಿಕ್ಸರ್‌ ಮತ್ತು 5 ಬೌಂಡರಿಗಳನ್ನು ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ