Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ನಾಯಕರ ನಿಷೇಧ ರದ್ದು; ಸಿಎಸ್​ಕೆ ವಿರುದ್ಧ ಆಡ್ತಾರಾ ಹಾರ್ದಿಕ್ ಪಾಂಡ್ಯ?

BCCI Alters Slow Over Rate Rule for IPL 2025: ಬಿಸಿಸಿಐ, 2025 ರ ಐಪಿಎಲ್​ ಆರಂಭಕ್ಕೂ ಮುನ್ನ ನಿಧಾನಗತಿಯ ಓವರ್ ರೇಟ್ ನಿಯಮದಲ್ಲಿ ಬದಲಾವಣೆ ಮಾಡಿದೆ. ಮೊದಲು ನಾಯಕರನ್ನು ಪಂದ್ಯದಿಂದ ನಿಷೇಧಿಸಲಾಗುತ್ತಿತ್ತು, ಆದರೆ ಈಗ ದಂಡ ಮತ್ತು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಹಾರ್ದಿಕ್ ಪಾಂಡ್ಯ ಕಳೆದ ಸೀಸನ್ ನಲ್ಲಿ ನಿಯಮ ಉಲ್ಲಂಘಿಸಿದ್ದರಿಂದ ಶಿಕ್ಷೆ ಅನುಭವಿಸಬೇಕಾಗಿದೆ, ಆದರೆ ಹೊಸ ನಿಯಮ ಈ ಸೀಸನ್ ನಿಂದ ಜಾರಿಯಲ್ಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ನಿಯಮಗಳಿಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ.

IPL 2025: ನಾಯಕರ ನಿಷೇಧ ರದ್ದು; ಸಿಎಸ್​ಕೆ ವಿರುದ್ಧ ಆಡ್ತಾರಾ ಹಾರ್ದಿಕ್ ಪಾಂಡ್ಯ?
Hardik Pandya
Follow us
ಪೃಥ್ವಿಶಂಕರ
|

Updated on: Mar 21, 2025 | 2:57 PM

2025 ರ ಐಪಿಎಲ್ (IPL 2025) ಸೀಸನ್ ಆರಂಭವಾಗುವ ಮುನ್ನ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬಿಸಿಸಿಐ (BCCI) ಹಲವು ನಿಯಮಗಳಲ್ಲಿ ಬದಲಾವಣೆ ಮಾಡಿದರೆ, ಮತ್ತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಹೀಗೆ ಕೊಂಚ ಬದಲಾವಣೆ ಕಂಡ ನಿಯಮಗಳ ಪೈಕಿ ನಿಧಾನಗತಿಯ ಓವರ್ ರೇಟ್ ನಿಯಮವು ಒಂದಾಗಿದೆ. ವಾಸ್ತವವಾಗಿ ಕಳೆದ ಆವೃತ್ತಿಯಿಂದ ಜಾರಿಗೆ ಬಂದಿದ್ದ ಈ ನಿಯಮದ ಪ್ರಕಾರ, ಒಂದು ತಂಡ ಒಂದು ಆವೃತ್ತಿಯಲ್ಲಿ ಮೂರು ಬಾರಿ ನಿಧಾನಗತಿಯ ಓವರ್ ರೇಟ್ ನಿಯಮವನ್ನು ಮುರಿದರೆ ಆ ತಂಡದ ನಾಯಕನನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತಿತ್ತು. ಆದರೀಗ ಆ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ನಾಯಕರು ತಂಡದಿಂದ ನಿಷೇಧಿಸುವುದನ್ನು ರದ್ದುಗೊಳಿಸಲಾಗಿದೆ.

ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೂರು ಬಾರಿ ನಿಧಾನಗತಿಯ ಓವರ್ ರೇಟ್ ನಿಯಮವನ್ನು ಮುರಿದಿದ್ದರ ಪರಿಣಾಮವಾಗಿ ಹಾರ್ದಿಕ್ ಪಾಂಡ್ಯರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿತ್ತು. ಇದೀಗ ಬಿಸಿಸಿಐ ಈ ನಿಯಮವನ್ನು ರದ್ದುಗೊಳಿಸಿರುವುದರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಬಿಸಿಸಿಐ ನಿಯಮವನ್ನು ಬದಲಿಸಿದ ಹೊರತಾಗಿಯೂ ಹಾರ್ದಿಕ್, ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲ್ಲಿರುವ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಪಾಂಡ್ಯಗೆ ನಿಯಮ ಅನ್ವಯವಾಗುತ್ತಾ?

ಬಿಸಿಸಿಐ ನಿಧಾನಗತಿಯ ಓವರ್ ರೇಟ್ ನಿಯಮವನ್ನು ಬದಲಾಯಿಸಿ ನಾಯಕರ ಮೇಲಿನ ನಿಷೇಧವನ್ನು ತೆಗೆದುಹಾಕಿದ್ದರೂ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಏಕೆಂದರೆ ಬಿಸಿಸಿಐ, ಐಪಿಎಲ್ 2025 ರಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರರ್ಥ ನಾಯಕರು ಈ ಸೀಸನ್​ನಲ್ಲಿ ನಿಧಾನಗತಿಯ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದರೆ ಅವರು ನಿಷೇಧಕ್ಕೊಳಗಾಗುವುದಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಕಳೆದ ಸೀಸನ್​ನಲ್ಲಿ ಈ ನಿಯಮವನ್ನು ಮುರಿದಿರುವ ಕಾರಣ ಅವರು ನಿಷೇಧದ ಶಿಕ್ಷೆಯನ್ನು ಅನುಭವಿಸಲೇಬೇಕಾಗಿದೆ.

ಇದನ್ನೂ ಓದಿ
Image
ನಾಯಕರ ನಿಷೇಧಕ್ಕೆ ಬ್ರೇಕ್ ಹಾಕಿದ ಬಿಸಿಸಿಐ ಬದಲಿಯಾಗಿ ತಂದಿದ್ದು ಯಾವ ನಿಯಮ?
Image
ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ; ಗುವಾಹಟಿಗೆ ಪಂದ್ಯ ಶಿಫ್ಟ್
Image
ಐಪಿಎಲ್ ಆಟಗಾರರ ಖಾತೆಗೆ ಬಿಳಲಿದೆ ಮತ್ತಷ್ಟು ಹಣ
Image
2ನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಬಿಸಿಸಿಐ ಬಂಪರ್ ಗಿಫ್ಟ್

IPL 2025: ನಾಯಕರ ನಿಷೇಧಕ್ಕೆ ಬ್ರೇಕ್ ಹಾಕಿ ನೇರವಾಗಿ ಅವರ ಖಜಾನೆಗೆ ಕೈ ಹಾಕಿದ ಬಿಸಿಸಿಐ

ನಿಷೇಧದ ಬದಲು ಬೇರೆ ಏನು?

ಬಿಸಿಸಿಐ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅನುಗುಣವಾಗಿ ನಿಧಾನಗತಿಯ ಓವರ್ ರೇಟ್ ನಿಯಮ ಉಲ್ಲಂಘನೆಗೆ ಶಿಕ್ಷೆಯನ್ನು ವಿಧಿಸಿದೆ. ಇದರರ್ಥ ಈಗ ಹೊಸ ನಿಯಮಗಳ ಅಡಿಯಲ್ಲಿ, ನಾಯಕ ತಪ್ಪಿತಸ್ಥನೆಂದು ಕಂಡುಬಂದರೆ, ದಂಡ ವಿಧಿಸಲಾಗುತ್ತದೆ ಮತ್ತು ಡಿಮೆರಿಟ್ ಅಂಕಗಳನ್ನು ಸಹ ಸೇರಿಸಲಾಗುತ್ತದೆ. ಆದಾಗ್ಯೂ ಒಂದು ತಂಡ ಅಧಿಕ ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ಆಗ ಆ ತಂಡದ ನಾಯಕನನ್ನು ಲೆವೆಲ್-2 ತಪ್ಪಿತಸ್ಥನೆಂದು ಪರಿಗಣಿಸಲಿದ್ದು, 4 ಡಿಮೆರಿಟ್ ಅಂಕಗಳನ್ನು ನೇರವಾಗಿ ನೀಡಲಾಗುತ್ತದೆ. ಒಬ್ಬ ನಾಯಕ 4 ಡಿಮೆರಿಟ್ ಅಂಕಗಳನ್ನು ಪಡೆದ ತಕ್ಷಣ, ಮ್ಯಾಚ್ ರೆಫರಿ ನಾಯಕನ ಪಂದ್ಯ ಶುಲ್ಕದ 100 ಪ್ರತಿಶತ ಹಣವನ್ನು ಕಡಿತಗೊಳಿಸಬಹುದು ಅಥವಾ ಹೆಚ್ಚುವರಿ ಡಿಮೆರಿಟ್ ಅಂಕಗಳನ್ನು ನೀಡಬಹುದು. ಆದಾಗ್ಯೂ, ಒಬ್ಬ ನಾಯಕ ಹೆಚ್ಚು ಡಿಮೆರಿಟ್ ಅಂಕಗಳನ್ನು ಪಡೆದರೆ, ಭವಿಷ್ಯದಲ್ಲಿ ಅವನ ಮೇಲೆ ನಿಷೇಧ ಹೇರಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ