AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: RCB ಪ್ಲೇಯಿಂಗ್ ಇಲೆವೆನ್​ನಲ್ಲಿ 2 ಬದಲಾವಣೆ ಖಚಿತ

IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್​ಗೇರಿದರೆ, ಸೋತ ತಂಡವು ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲಿದೆ.

IPL 2025: RCB ಪ್ಲೇಯಿಂಗ್ ಇಲೆವೆನ್​ನಲ್ಲಿ 2 ಬದಲಾವಣೆ ಖಚಿತ
RCB
ಝಾಹಿರ್ ಯೂಸುಫ್
|

Updated on: May 28, 2025 | 2:54 PM

Share

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಚಂಡೀಗಢ್​ನ ಮುಲ್ಲನ್​ಪುರ್​ನಲ್ಲಿ ನಡೆಯಲಿರುವ ಪ್ಲೇಆಫ್ ಸುತ್ತಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದ ತಂಡ ಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಈ ಪಂದ್ಯಕ್ಕಾಗಿ ಆರ್​ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ಕಣಕ್ಕಿಳಿಸುವುದು ಖಚಿತ. ಅದಕ್ಕಾಗಿ ಆರ್​ಸಿಬಿ ತನ್ನ ಆಡುವ ಬಳಗದಲ್ಲಿ 2 ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಏಕೆಂದರೆ ಭುಜದ ನೋವಿನ ಕಾರಣ ಕಳೆದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹೇಝಲ್​ವುಡ್​ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ನುವಾನ್ ತುಷಾರ ಪ್ಲೇಯಿಂಗ್ ಇಲೆವೆನ್​ನಿಂದ ಹೊರಬೀಳಬಹುದು.

ಹಾಗೆಯೇ ಮುಂದಿನ ಪಂದ್ಯಕ್ಕೂ ಮುನ್ನ ಟಿಮ್ ಡೇವಿಡ್ ಸಂಪೂರ್ಣ ಫಿಟ್ ಆದರೆ, ಲಿಯಾಮ್ ಲಿವಿಂಗ್​ಸ್ಟೋನ್ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ. ಒಂದು ವೇಳೆ ಟಿಮ್ ಡೇವಿಡ್ ಫಿಟ್ ಅಲ್ಲದಿದ್ದರೆ, ಟಿಮ್ ಸೈಫರ್ಟ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಏಕೆಂದರೆ ಲಿಯಾಮ್ ಲಿವಿಂಗ್​ಸ್ಟೋನ್ ಆರ್​ಸಿಬಿ ಪರ 8 ಪಂದ್ಯಗಳನ್ನಾಡಿದ್ದು, ಈ ವೇಳೆ ಕಲೆಹಾಕಿರುವುದು ಕೇವಲ 87 ರನ್​ಗಳು ಮಾತ್ರ. ಅದರಲ್ಲೂ ಎಲ್​ಎಸ್​ಜಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಲಿವಿಂಗ್​ಸ್ಟೋನ್ ಅವರನ್ನು ಕೈ ಬಿಡುವುದು ಖಚಿತ ಎನ್ನಬಹುದು.

ಇನ್ನುಳಿದಂತೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರೇ ಪಂಜಾಬ್ ಕಿಂಗ್ಸ್ ವಿರುದ್ಧ ಕೂಡ ಆಡಲಿದ್ದಾರೆ. ಅದರಂತೆ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಇನ್ನು ಟಿಮ್ ಡೇವಿಡ್ ಫಿಟ್ ಆಗಿರದಿದ್ದರೆ, ಮೂರನೇ ಕ್ರಮಾಂಕದಲ್ಲಿ ಟಿಮ್ ಸೈಫರ್ಟ್ ಅವರನ್ನು ಕಣಕ್ಕಿಳಿಸಬಹುದು.

ಇದನ್ನೂ ಓದಿ: ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು

ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಹಾಗೂ ಐದನೇ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್ ಬ್ಯಾಟ್ ಬೀಸಲಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ ಕಾಣಿಸಿಕೊಂಡರೆ, ಫಿನಿಶರ್ ಪಾತ್ರ ರೊಮಾರಿಯೊ ಶೆಫರ್ಡ್ ಕಣಕ್ಕಿಳಿಯಲಿದ್ದಾರೆ. ಇನ್ನು ಬೌಲರ್​ಗಳಾಗಿ ಜೋಶ್ ಹೇಝಲ್​ವುಡ್, ಯಶ್ ದಯಾಳ್ ಹಾಗೂ ಭುವನೇಶ್ವರ್ ಕುಮಾರ್ ಕಣಕ್ಕಿಳಿಯುವುದು ಖಚಿತ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ…

  • ವಿರಾಟ್ ಕೊಹ್ಲಿ
  • ಫಿಲ್ ಸಾಲ್ಟ್
  • ಟಿಮ್ ಸೈಫರ್ಟ್​ (ಟಿಮ್ ಡೇವಿಡ್ ಹೊರಗುಳಿದರೆ)
  • ರಜತ್ ಪಾಟಿದಾರ್
  • ಮಯಾಂಕ್ ಅಗರ್ವಾಲ್
  • ಜಿತೇಶ್ ಶರ್ಮಾ
  • ಕೃನಾಲ್ ಪಾಂಡ್ಯ
  • ರೊಮಾರಿಯೊ ಶೆಫರ್ಡ್
  • ಜೋಶ್ ಹೇಝಲ್​ವುಡ್
  • ಯಶ್ ದಯಾಳ್
  • ಭುವನೇಶ್ವರ್ ಕುಮಾರ್.
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ