
ಐಪಿಎಲ್ನಲ್ಲಿ (IPL) ಪಂದ್ಯ ನಡೆಯುವ ವೇಳೆ ಟೀಂ ಇಂಡಿಯಾ ಆಟಗಾರರೇ ಪರಸ್ಪರ ಜಗಳ ಮಾಡಿಕೊಂಡಿರುವ ಘಟನೆಗಳನ್ನು ನಾವು ಸಾಕಷ್ಟು ಭಾರಿ ನೋಡಿದ್ದೇವೆ. ಈ ಬಾರಿಯ ಐಪಿಎಲ್ನಲ್ಲೂ ಇದೇ ರೀತಿಯ ಸಾಕಷ್ಟು ಘಟನೆಗಳು ನಡೆದಿದ್ದವು. ಇದೀಗ ಆ ರೀತಿಯ ಘಟನೆ ನಿನ್ನೆಯ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ (GT vs MI) ನಡುವಿನ ಪಂದ್ಯದಲ್ಲಿ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಸುದ್ದಿಯ ಪ್ರಕಾರ ಗುಜರಾತ್ ಟೈಟನ್ಸ್ ನಾಯಕ ಶುಭ್ಮನ್ ಗಿಲ್ (Shubman Gill) ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ನಡುವಿನ ಸ್ನೇಹದಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೀಗ ಹಬ್ಬಿರುವ ವದಂತಿಯ ಬಗ್ಗೆ ಸ್ವತಃ ಶುಭ್ಮನ್ ಗಿಲ್ ಅವರೇ ಮೌನ ಮುರಿದಿದ್ದಾರೆ.
ವಾಸ್ತವವಾಗಿ, ಶುಕ್ರವಾರ, ಮೇ 30 ರಂದು, ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತು. ಪಂದ್ಯ ಪ್ರಾರಂಭವಾಗುವ ಮೊದಲು ಟಾಸ್ ನಡೆದಾಗ, ಶುಭ್ಮನ್ ಗಿಲ್ ನಾಣ್ಯವನ್ನು ಚಿಮ್ಮಿಸಿದರು ಮತ್ತು ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದರು. ಟಾಸ್ ನಡೆದಾಗಲೆಲ್ಲಾ ಇಬ್ಬರೂ ನಾಯಕರು ಕೈಕುಲುಕಿ ನಂತರ ತಮ್ಮ ನಿರ್ಧಾರಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿ ಸಂಭವಿಸುತ್ತದೆ. ಆದರೆ ಇಲ್ಲಿ, ಟಾಸ್ ಸೋತ ನಂತರ, ಗಿಲ್ ಮತ್ತು ಹಾರ್ದಿಕ್ ಕೈಕುಲುಕದೆ ಹೊರಟುಹೋದರು. ಇದು ಕ್ಯಾಮರಾದಲ್ಲಿ ರೆಕಾರ್ಡ್ ಕೂಡ ಆಗಿತ್ತು. ಇದರ ವಿಡಿಯೋ ‘ಎಕ್ಸ್’ ನಿಂದ ಇನ್‌ಸ್ಟಾಗ್ರಾಮ್‌ವರೆಗೆ ಎಲ್ಲಾ ಕಡೆ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದವರು ಇಬ್ಬರ ನಡುವೆ ಬಿರುಕು ಮೂಡಿದೆ ಎಂದು ಹೇಳಲಾರಂಭಿಸಿದರು.
🚨 Toss 🚨@mipaltan won the toss and elected to bat first against @gujarat_titans
Updates ▶️ https://t.co/R4RTzjQfph #TATAIPL | #GTvMI | #Eliminator | #TheLastMile pic.twitter.com/E3G3NU0FXK
— IndianPremierLeague (@IPL) May 30, 2025
ಸಾಮಾನ್ಯವಾಗಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಪ್ರತಿಕ್ರಿಯಿಸುವುದರಿಂದ ದೂರವಿರುತ್ತಾರೆ. ಆದರೆ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಸಾಕಷ್ಟು ವೇಗ ಪಡೆದುಕೊಂಡಿರುವುದನ್ನು ಗಮನಿಸಿದ ಶುಭ್ಮನ್ ಗಿಲ್, ಪಂದ್ಯಾವಳಿಯಿಂದ ತಂಡ ಹೊರನಡೆದ ನೋವಿನ ನಡುವೆಯೂ ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಗಿಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾರ್ದಿಕ್ ಜೊತೆಗಿನ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ, “ಜಸ್ಟ್ ಲವ್, ಬೇರೇನೂ ಇಲ್ಲ (ಇಂಟರ್‌ನೆಟ್‌ನಲ್ಲಿ ನೋಡುವ ಎಲ್ಲವನ್ನೂ ನಂಬಬೇಡಿ)” ಎಂದು ಬರೆದಿದ್ದಾರೆ. ಅಲ್ಲದೆ ಗಿಲ್, ಹಾರ್ದಿಕ್ ಪಾಂಡ್ಯ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯಕ್ಕೆ ಕೂಡ ಗಿಲ್ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
A cute reply from Hardik Pandya to Gill. ❤️ pic.twitter.com/rmxsKj10YE
— Johns. (@CricCrazyJohns) May 31, 2025
ಹಾರ್ದಿಕ್ ಮತ್ತು ಗಿಲ್ ಟೀಂ ಇಂಡಿಯಾದಲ್ಲಿ ಒಟ್ಟಿಗೆ ಆಡುವುದಲ್ಲದೆ, ಮೈದಾನದ ಹೊರಗೆಯೂ ಉತ್ತಮ ಸ್ನೇಹಿತರಾಗಿದ್ದಾರೆ. ಇಷ್ಟೇ ಅಲ್ಲ, ಕಳೆದ ಸೀಸನ್‌ನಲ್ಲಿ ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ಮರಳುವ ಮೊದಲು, ಅವರು ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದರು. ಅಲ್ಲಿ ಅವರ ನಾಯಕತ್ವದಲ್ಲಿ, ಶುಭ್ಮನ್ ಗಿಲ್ ಈ ಹೊಸ ತಂಡದ ಮೊದಲ ಎರಡು ಸೀಸನ್‌ನಲ್ಲಿ ಪ್ರಮುಖ ಭಾಗವಾಗಿದ್ದರು. ಹಾರ್ದಿಕ್ ನಾಯಕತ್ವದಲ್ಲಿ ಗಿಲ್ ಎರಡೂ ಸೀಸನ್ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ ಒಮ್ಮೆ ಪ್ರಶಸ್ತಿ ಗೆದ್ದಿದ್ದಲ್ಲದೆ, ತಂಡವನ್ನು ಎರಡನೇ ಬಾರಿಗೆ ಫೈನಲ್‌ಗೆ ಕೊಂಡೊಯ್ದರು. ಹಾರ್ದಿಕ್ ಮುಂಬೈಗೆ ಹೋದ ನಂತರ, ಗಿಲ್ ಅವರನ್ನು ಗುಜರಾತ್ ತಂಡದ ನಾಯಕರನ್ನಾಗಿ ಮಾಡಲಾಗಿದೆ.
IPL 2025: ಮುಂಬೈ-ಪಂಜಾಬ್ ನಡುವಿನ ಕ್ವಾಲಿಫೈಯರ್-2 ರದ್ದಾದರೆ ಯಾವ ತಂಡ ಫೈನಲ್‌ಗೇರುತ್ತದೆ?
ಇಷ್ಟೇ ಅಲ್ಲದೆ ಟಾಸ್ ಬಳಿಕ ಇಬ್ಬರು ಶೇಕ್ ಹ್ಯಾಂಡ್ ಮಾಡದಿರಬಹುದು. ಆದರೆ ಗಿಲ್ ಮಾತು ಮುಗಿಸಿದ ಬಳಿಕ ಇವರಿಬ್ಬರು ಪರಸ್ಪರ ಕೈಕುಲಿಕೆ ಅಲ್ಲಿಂದ ತೆರಳಿದರು. ಅದರ ವಿಡಿಯೋ ಕೂಡ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಲ್ಲದೆ ಇಬ್ಬರು ಟಾಸ್ಗು ಮುನ್ನ ಹಾಗೂ ಟಾಸ್ ನಂತರದ ಫೋಟೋ ಶೂಟ್ನಲ್ಲೂ ಆತ್ಮೀಯವಾಗಿಯೇ ಪಾಲ್ಗೊಂಡಿದ್ದರು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿ ಎಂತಲೇ ಹೇಳಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Sat, 31 May 25