ಅಹಮದಾಬಾದ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 9ನೇ ಪಂದ್ಯವು ಆಘಾತಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಪ್ರಸಿದ್ಧ್ ಕೃಷ್ಣ ಎಸೆದ ಬೌನ್ಸರ್ ಎಸೆತವು ಸೂರ್ಯಕುಮಾರ್ ಯಾದವ್ ಅವರ ಹೆಲ್ಮೆಟ್ಗೆ ಬಡಿದಿತ್ತು. ಈ ಬೌನ್ಸರ್ ಹೊಡೆತದಿಂದ ಸೂರ್ಯಕುಮಾರ್ ಯಾದವ್ ತಕ್ಷಣವೇ ಕುಸಿದು ಬಿದ್ದರು.
ಇತ್ತ ಸೂರ್ಯಕುಮಾರ್ ಯಾದವ್ ಕುಸಿದು ಬಿದ್ದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡದ ಆಟಗಾರ ಮೊಹಮ್ಮದ್ ಸಿರಾಜ್ ಓಡಿ ಬಂದರು. ಆದರೆ ಬೌನ್ಸರ್ ಹೊಡೆತದಿಂದ ವಿಚಲಿತರಾಗಿದ್ದ ಸೂರ್ಯಕುಮಾರ್ ಯಾದವ್ ಕೆಲ ಕ್ಷಣಗಳ ಕಾಲ ಹಾಗೆಯೇ ಮಲಗಿದ್ದರು. ಇದರಿಂದ ಪ್ರೇಕ್ಷಕರು ಕೂಡ ಆತಂಕಕ್ಕೆ ಒಳಗಾದರು.
Suryakumar Yadav Falls On Ground After A Deadly Prasidh Krishna Bouncer#IPL2025 #SuryakumarYadav pic.twitter.com/RQwolDCySC
— Zsports (@_Zsports) March 30, 2025
ಆ ಬಳಿಕ ಮುಂಬೈ ಇಂಡಿಯನ್ಸ್‌ನ ಫಿಸಿಯೋ ಕೂಡ ಮೈದಾನಕ್ಕೆ ಓಡಿ ಬಂದಿದ್ದು, ಕನ್ಕ್ಯುಶನ್ ಪರೀಕ್ಷೆ ನಡೆಸಿ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಇದಾದ ಬಳಿಕ ಮತ್ತೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮುಂದುವರೆಸಿದರು. ಮುಂಬೈ ಇಂಡಿಯನ್ಸ್ ಇನಿಂಗ್ಸ್ನ 16ನೇ ಓವರ್ನಲ್ಲಿ ನಡೆದ ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 196 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 48 ರನ್ ಬಾರಿಸಿದರು.
ಈ ಸ್ಪೋಟಕ ಇನಿಂಗ್ಸ್ ಹೊರತಾಗಿಯೂ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 36 ರನ್ಗಳ ಜಯ ಸಾಧಿಸಿತು.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ , ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ , ಹಾರ್ದಿಕ್ ಪಾಂಡ್ಯ (ನಾಯಕ) , ನಮನ್ ಧೀರ್ , ಮಿಚೆಲ್ ಸ್ಯಾಂಟ್ನರ್ , ದೀಪಕ್ ಚಹರ್ , ಟ್ರೆಂಟ್ ಬೌಲ್ಟ್ , ಮುಜೀಬ್ ಉರ್ ರೆಹಮಾನ್ , ಸತ್ಯನಾರಾಯಣ ರಾಜು.
ಇದನ್ನೂ ಓದಿ: ಪಾಕ್ ವಿರುದ್ಧ ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಪುತ್ರ..!
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಶುಭ್ಮನ್ ಗಿಲ್ (ನಾಯಕ) , ಸಾಯಿ ಸುದರ್ಶನ್ , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ಶೆರ್ಫೇನ್ ರುದರ್ಫೋರ್ಡ್ , ಶಾರುಖ್ ಖಾನ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಸಾಯಿ ಕಿಶೋರ್ , ಕಗಿಸೋ ರಬಾಡ , ಮೊಹಮ್ಮದ್ ಸಿರಾಜ್ , ಪ್ರಸಿದ್ಧ್ ಕೃಷ್ಣ , ಇಶಾಂತ್ ಶರ್ಮಾ.