IPL 2025: ಬದಲಾದ ನಿಯಮ: ಒಂದೇ ಗ್ರೂಪ್ನ 4 ತಂಡಗಳು ಪ್ಲೇಆಫ್ ಪ್ರವೇಶಿಸಿದರೂ ಅಚ್ಚರಿಯಿಲ್ಲ..!
IPL 2025 Schedule: ಐಪಿಎಲ್ 2025 ರಲ್ಲಿ 10 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು 2 ಗ್ರೂಪ್ಗಳಲ್ಲಿ ವಿಂಗಡಿಸಲಾಗಿದೆ. ಹೀಗೆ ವಿಂಗಡಿಸಲಾದ ಗ್ರೂಪ್ಗಳ ಮೂಲಕವೇ ಈ ಬಾರಿ ವೇಳಾಪಟ್ಟಿ ರೂಪಿಸಲಾಗಿದೆ. ಇದರಿಂದ ಒಂದು ತಂಡವು 4 ಟೀಮ್ಗಳ ವಿರುದ್ಧ ಏಕೈಕ ಪಂದ್ಯಗಳನ್ನು ಮಾತ್ರ ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ ವೇಳಾಪಟ್ಟಿ ಪ್ರಕಟಗೊಂಡಿದೆ. ಈ ವೇಳಾಪಟ್ಟಿ ರೂಪಿಸಲು 10 ತಂಡಗಳನ್ನು 2 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಈ ಬಾರಿ ಪ್ರತಿ ತಂಡಗಳು ತನ್ನದೇ ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ ಮತ್ತೊಂದು ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ದ 2 ಪಂದ್ಯಗಳನ್ನಾಡಲಾಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಇದಾಗ್ಯೂ ಈ ಬಾರಿ ಕೂಡ ಈ ಹಿಂದಿನಂತೆ ಪಾಯಿಂಟ್ ಟೇಬಲ್ ಇರಲಿದೆ. ಅಂದರೆ 10 ತಂಡಗಳ ನೇರ ಅಂಕ ಪಟ್ಟಿ ಇರಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇಆಫ್ ಪ್ರವೇಶಿಸಲಿದೆ.
2011 ರಲ್ಲೂ ಇದೇ ಮಾದರಿಯಲ್ಲಿ ಐಪಿಎಲ್ ನಡೆಸಲಾಗಿತ್ತು. ವಿಶೇಷ ಎಂದರೆ ಇಲ್ಲಿ ಪಾಯಿಂಟ್ ಲೆಕ್ಕಚಾರಗಳ ಮೂಲಕ ಅಗ್ರ ನಾಲ್ಕು ತಂಡಗಳನ್ನು ನಿರ್ಧರಿಸುವುದರಿಂದ ಪ್ಲೇಆಫ್ಗೆ ಒಂದೇ ಗ್ರೂಪ್ನ ತಂಡಗಳೇ ಬಂದರೂ ಅಚ್ಚರಿಪಡಬೇಕಿಲ್ಲ.
2011ರ ಐಪಿಎಲ್ ತಂಡಗಳ ಗ್ರೂಪ್:
- ಗ್ರೂಪ್- A
- ಡೆಕ್ಕನ್ ಚಾರ್ಜರ್ಸ್
- ಡೆಲ್ಲಿ ಡೇರ್ ಡೆವಿಲ್ಸ್
- ಕಿಂಗ್ಸ್ ಇಲೆವೆನ್ ಪಂಜಾಬ್
- ಮುಂಬೈ ಇಂಡಿಯನ್ಸ್
- ಪುಣೆ ವಾರಿಯರ್ಸ್ ಇಂಡಿಯಾ
_____________________________
- ಗ್ರೂಪ್- B
- ರಾಯಲ್ ಚಾಲೆಂಜರ್ಸ್ ಬೆಂಗಳೂರು
- ಚೆನ್ನೈ ಸೂಪರ್ ಕಿಂಗ್ಸ್
- ಕೊಚ್ಚಿ ಟಸ್ಕರ್ಸ್ ಕೇರಳ
- ಕೋಲ್ಕತ್ತಾ ನೈಟ್ ರೈಡರ್ಸ್
- ರಾಜಸ್ಥಾನ್ ರಾಯಲ್ಸ್
ಇಲ್ಲಿ 10 ತಂಡಗಳನ್ನು 2 ಗುಂಪುಗಳಾಗಿ ಕಣಕ್ಕಿಳಿಸಲಾಗಿತ್ತು. ಈ ವೇಳೆ ಟಾಪ್ 10 ಪಾಯಿಂಟ್ ಟೇಬಲ್ನಲ್ಲಿ ಆರ್ಸಿಬಿ ತಂಡವು 14 ಪಂದ್ಯಗಳಲ್ಲಿ 9 ಜಯ ಸಾಧಿಸಿ ಅಗ್ರಸ್ಥಾನ ಪಡೆದುಕೊಂಡಿತ್ತು. ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ತೃತೀಯ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳಿದ್ದವು. ಇನ್ನು ನಾಲ್ಕನೇ ಸ್ಥಾನವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಅಲಂಕರಿಸಿತು. ಈ ಮೂಲಕ ಆರ್ಸಿಬಿ, ಸಿಎಸ್ಕೆ, ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಪ್ಲೇ ಆಫ್ ಪ್ರವೇಶಿಸಿತ್ತು.
ವಿಶೇಷ ಎಂದರೆ ಪ್ಲೇ ಆಫ್ ಆಡಿದ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಗ್ರೂಪ್-ಬಿ ನಿಂದ ಆಯ್ಕೆಯಾಗಿದ್ದವು. ಅಂದರೆ ಆರ್ಸಿಬಿ, ಸಿಎಸ್ಕೆ, ಕೆಕೆಆರ್ ಒಂದೇ ಗ್ರೂಪ್ನಲ್ಲಿದ್ದರೂ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತ್ತು. ಇನ್ನು ಗ್ರೂಪ್-ಎ ನಿಂದ ಪ್ಲೇಆಫ್ ಪ್ರವೇಶಿಸಿದ ಏಕೈಕ ತಂಡವೆಂದರೆ ಮುಂಬೈ ಇಂಡಿಯನ್ಸ್ ಮಾತ್ರ.
ಇಲ್ಲಿ ಟೂರ್ನಿ ರೌಂಡ್ ರಾಬಿನ್ ಫಾರ್ಮಾಟ್ನಲ್ಲಿ ಟೂರ್ನಿ ಆಯೋಜಿಸುತ್ತಿರುವುದರಿಂದ ಪ್ರತಿ ತಂಡಗಳು 5 ತಂಡಗಳ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ 4 ತಂಡಗಳ ವಿರುದ್ದ ಒಂದೊಂದು ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ 9 ತಂಡಗಳ ವಿರುದ್ದ ಒಂದೊಂದು ಪಂದ್ಯ ಹಾಗೂ ಅದರಲ್ಲಿ 5 ತಂಡಗಳ ವಿರುದ್ದ 2ನೇ ಬಾರಿ ಸೆಣಸಲಿದೆ. ಇದರಿಂದ ಪಾಯಿಂಟ್ ಟೇಬಲ್ನಲ್ಲಿ ಆಗಾಗ್ಗೆ ಬದಲಾವಣೆ ಕಂಡು ಬರಲಿದೆ.
ಹೀಗಾಗಿ ಲೀಗ್ ಹಂತದ ಮುಕ್ತಾಯದ ವೇಳೆಗೆ ಒಂದೇ ಗ್ರೂಪ್ನ ನಾಲ್ಕು ತಂಡಗಳಿಗೂ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಇದಕ್ಕೆ ಉತ್ತಮ ಉದಾಹರಣೆ 2011 ರಲ್ಲಿ ಗ್ರೂಪ್-ಬಿನಲ್ಲಿದ್ದ ಆರ್ಸಿಬಿ, ಸಿಎಸ್ಕೆ, ಕೆಕೆಆರ್ ಪ್ಲೇಆಫ್ಗೆ ಎಂಟ್ರಿ ಕೊಟ್ಟಿರುವುದು. ಹೀಗಾಗಿ ಈ ಬಾರಿ ಕೂಡ ಬಲಿಷ್ಠ ತಂಡಗಳ ಲೆಕ್ಕಚಾರಗಳು ತಲೆಕೆಳಗಾದರೆ ಅಚ್ಚರಿಪಡಬೇಕಿಲ್ಲ.
IPL 2025ರ ಗ್ರೂಪ್ಗಳು:
- ಗ್ರೂಪ್-1 ತಂಡಗಳು
- ಕೊಲ್ಕತ್ತಾ ನೈಟ್ ರೈಡರ್ಸ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು
- ರಾಜಸ್ಥಾನ್ ರಾಯಲ್ಸ್
- ಚೆನ್ನೈ ಸೂಪರ್ ಕಿಂಗ್ಸ್
- ಪಂಜಾಬ್ ಕಿಂಗ್ಸ್
ಇದನ್ನೂ ಓದಿ: IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ
- ಗ್ರೂಪ್- 2 ತಂಡಗಳು
- ಸನ್ರೈಸರ್ಸ್ ಹೈದರಾಬಾದ್
- ಲಕ್ನೋ ಸೂಪರ್ ಜೈಂಟ್ಸ್
- ಮುಂಬೈ ಇಂಡಿಯನ್ಸ್
- ಡೆಲ್ಲಿ ಕ್ಯಾಪಿಟಲ್ಸ್
- ಗುಜರಾತ್ ಟೈಟಾನ್ಸ್
