IPL 2025: ಮುಂಬೈ-ಪಂಜಾಬ್ ಪಂದ್ಯ ರದ್ದಾದರೆ ಯಾವೆರಡು ತಂಡಗಳಿಗೆ ಟಾಪ್ 2 ಸ್ಥಾನ?
IPL 2025 Playoffs: ಐಪಿಎಲ್ 2025ರ ಲೀಗ್ ಹಂತ ಅಂತಿಮ ಹಂತ ತಲುಪಿದೆ. ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪಿವೆ. ಆದರೆ ಟಾಪ್ 2 ಸ್ಥಾನಕ್ಕಾಗಿ ಪಂಜಾಬ್, ಆರ್‌ಸಿಬಿ ಮತ್ತು ಮುಂಬೈ ನಡುವೆ ಭಾರೀ ಸ್ಪರ್ಧೆ ಇದೆ. ಮುಂಬೈ-ಪಂಜಾಬ್ ಪಂದ್ಯದ ಫಲಿತಾಂಶ ಮತ್ತು ಆರ್‌ಸಿಬಿಯ ಕೊನೆಯ ಪಂದ್ಯದ ಫಲಿತಾಂಶ ಟಾಪ್ 2 ನಿರ್ಧರಿಸುತ್ತದೆ. ಮಳೆಯಿಂದ ಪಂದ್ಯ ರದ್ದಾದರೆ ಪಂಜಾಬ್ 18 ಅಂಕಗಳೊಂದಿಗೆ ಟಾಪ್ 2 ರಲ್ಲಿ ಸ್ಥಾನ ಪಡೆಯುತ್ತದೆ.

ಐಪಿಎಲ್ 2025 (IPL 2025) ರ ಲೀಗ್ ಹಂತವು ಅಂತಿಮ ಹಂತವನ್ನು ತಲುಪಿದ್ದು, ಪ್ಲೇಆಫ್ ಆಡುವ ನಾಲ್ಕು ತಂಡಗಳು ಯಾವುವು ಎಂಬುದು ಕೂಡ ನಿರ್ಧಾರವಾಗಿದೆ. ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ (PBKS), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ ಈಗಾಗಲೇ ಅಗ್ರ ನಾಲ್ಕರಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಆದರೆ, ಯಾವ ತಂಡಗಳು ಲೀಗ್ ಹಂತವನ್ನು ಟಾಪ್-2 ರಲ್ಲಿ ಮುಗಿಸುತ್ತವೆ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್-1 ರಲ್ಲಿ ಮುಖಾಮುಖಿಯಾಗುತ್ತವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೇರುತ್ತದೆ. ಹೀಗಾಗಿ ಲೀಗ್ ಹಂತದಲ್ಲಿ ಉಳಿದಿರುವ 69 ನೇ ಪಂದ್ಯ ಮತ್ತು ಆರ್‌ಸಿಬಿಯ ಕೊನೆಯ ಲೀಗ್ ಪಂದ್ಯ ಮೊದಲೆರಡು ಸ್ಥಾನಗಳನ್ನು ನಿರ್ಧರಿಸಲಿವೆ.
ಮುಂಬೈ-ಪಂಜಾಬ್ ಪಂದ್ಯ ರದ್ದಾದರೆ ಏನಾಗುತ್ತದೆ?
ಲೀಗ್ ಹಂತದ ಪ್ರಸ್ತುತ ಅಂಕಪಟ್ಟಿಯ ಪ್ರಕಾರ, ಗುಜರಾತ್ ಟೈಟನ್ಸ್ 14 ಪಂದ್ಯಗಳಿಂದ 9 ಗೆಲುವು ಮತ್ತು 18 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ 13 ಪಂದ್ಯಗಳಿಂದ 8 ಗೆಲುವುಗಳೊಂದಿಗೆ ತಲಾ 17 ಅಂಕಗಳನ್ನು ಹೊಂದಿವೆ. ಪಂಜಾಬ್‌ನ ಎನ್‌ಆರ್‌ಆರ್ +0.327 ಆಗಿದ್ದರೆ, ಆರ್‌ಸಿಬಿ +0.255 ಆಗಿದೆ. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ 8 ಗೆಲುವು ಮತ್ತು 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಐಪಿಎಲ್ 2025 ರ 69 ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಈ ಪಂದ್ಯವು ಅಗ್ರ-2 ಸ್ಥಾನದ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪಂದ್ಯ ಮಳೆಯಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ರದ್ದಾದರೆ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆಯುತ್ತವೆ.
ಇದರಿಂದ ಪಂಜಾಬ್ ಕಿಂಗ್ಸ್ ತಂಡವು 14 ಪಂದ್ಯಗಳಿಂದ 18 ಅಂಕಗಳನ್ನು ಗಳಿಸಲಿದ್ದು, ಗುಜರಾತ್ ಟೈಟನ್ಸ್ ತಂಡಕ್ಕೆ ಸಮನಾಗಿರುತ್ತದೆ. ಆದರೆ ಗುಜರಾತ್ ಟೈಟನ್ಸ್, ಪಂಜಾಬ್ಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿದೆ, ಆದ್ದರಿಂದ ಗುಜರಾತ್ ಅಗ್ರ -2 ರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದು, ಕ್ವಾಲಿಫೈಯರ್ -1 ಗೆ ಅರ್ಹತೆ ಪಡೆಯುತ್ತದೆ. ಮತ್ತೊಂದೆಡೆ, ಪಂಜಾಬ್ ಈ ಪಂದ್ಯವನ್ನು ಗೆದ್ದರೆ, 14 ಪಂದ್ಯಗಳಲ್ಲಿ 19 ಅಂಕಗಳನ್ನು ಗಳಿಸುವ ಮೂಲಕ ಅಗ್ರ -2 ರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಒಂದು ವೇಳೆ ಮುಂಬೈ, ಪಂಜಾಬ್ ವಿರುದ್ಧ ಗೆದ್ದರೆ ಅಗ್ರ-2 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
IPL 2025: ಲೀಗ್ನಿಂದ ಹೊರಬಿದ್ದ ಬೆನ್ನಲ್ಲೇ ಕಾವ್ಯಾ ತಂಡದಿಂದ ಸ್ಟಾರ್ ಆಟಗಾರರಿಗೆ ಗೇಟ್ಪಾಸ್..!
ಆರ್‌ಸಿಬಿಯ ಭವಿಷ್ಯ ನಿರ್ಧಾರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಒಂದು ಪಂದ್ಯ ಬಾಕಿ ಇದ್ದು, ಅಗ್ರ-2 ಸ್ಥಾನ ಪಡೆಯುವ ಸುವರ್ಣಾವಕಾಶ ತಂಡಕ್ಕಿದೆ. ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೆ, 14 ಪಂದ್ಯಗಳಿಂದ 19 ಅಂಕಗಳನ್ನು ಸಂಪಾಧಿಸುವ ಮೂಲಕ ಅಗ್ರ -2 ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಆದರೆ ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತರೆ ತಂಡದ ಬಳಿ ಕೇವಲ 17 ಅಂಕಗಳು ಮಾತ್ರ ಉಳಿಯುತ್ತವೆ. ಆಗ ಗುಜರಾತ್ ಅಗ್ರ -2 ರಲ್ಲಿ ಸ್ಥಾನ ಪಡೆಯುತ್ತದೆ. ಮತ್ತೊಂದೆಡೆ, ಮುಂಬೈ ವಿರುದ್ಧದ ಪಂಜಾಬ್ ಕಿಂಗ್ಸ್ ಪಂದ್ಯ ರದ್ದಾದರೂ, 18 ಅಂಕಗಳೊಂದಿಗೆ ಅಗ್ರ -2 ರಲ್ಲಿ ಸ್ಥಾನ ಪಡೆಯುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
