
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಮೇ 29) ಮುಲ್ಲನ್ಪುರದ ಎಂವೈಎಸ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಫೈನಲ್ಗೆ ಎಂಟ್ರಿ ಕೊಡಲಿದೆ. ಅಂದರೆ ಇಂದಿನ ಮ್ಯಾಚ್ ವಿಜಯಿ ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಹೀಗಾಗಿ ಆರ್ಸಿಬಿ ಎದುರಾಳಿ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ. ಇಲ್ಲಿ ಯಾರೇ ಬಂದರೂ ಫೈನಲ್ ಪಂದ್ಯದ ರೋಚಕತೆ ಹೆಚ್ಚಲಿದೆ. ಏಕೆಂದರೆ ಆರ್ಆರ್ ತಂಡ ಜಯ ಸಾಧಿಸಿದರೆ ಎಲ್ಲರೂ ವೈಭವ್ ಸೂರ್ಯವಂಶಿಯ ಆರ್ಭಟ ಹಾಗೂ ಜೋಫ್ರಾ ಆರ್ಚರ್ನ ಮಿಂಚಿನ ದಾಳಿ ವೀಕ್ಷಿಸಲು ಸಜ್ಜಾಗಲಿದ್ದಾರೆ.
ಅತ್ತ ಗುಜರಾತ್ ಟೈಟಾನ್ಸ್ ಗೆದ್ದರೆ ತವರಿನಲ್ಲಿ ಫೈನಲ್ ಆಡಲಿದೆ. ಅಂದರೆ ಈ ಬಾರಿಯ ಫೈನಲ್ ಮ್ಯಾಚ್ ನಡೆಯಲಿರುವುದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ಈಗಾಗಲೇ ಈ ಪಂದ್ಯಕ್ಕಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿರುವ ಆರ್ಸಿಬಿ ತಂಡವು ತನ್ನ ಕೊನೆಯ ಎದುರಾಳಿಯನ್ನು ಎದುರು ನೋಡುತ್ತಿದೆ.
ಈ ಎದುರಾಳಿ ರಾಜಸ್ಥಾನ್ ರಾಯಲ್ಸ್ ಆಗಲಿದೆಯಾ ಅಥವಾ ಗುಜರಾತ್ ಟೈಟಾನ್ಸ್ ಆಗಲಿದ್ದಾರಾ ಎಂಬುದು ಇಂದು ನಿರ್ಧಾರವಾಗಲಿದೆ.
2022 ರಿಂದ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿರುವ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ ಕೇವಲ 10 ಬಾರಿ ಮಾತ್ರ ಮುಖಾಮುಖಿಯಾಗಿವೆ. ಈ ವೇಳೆ ಅತ್ಯಧಿಕ ಪಂದ್ಯಗಳನ್ನು ಗೆದ್ದಿರುವುದು ಗುಜರಾತ್ ಟೈಟಾನ್ಸ್.
ಉಭಯ ತಂಡಗಳ ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ 7 ಬಾರಿ ಜಯ ಸಾಧಿಸಿದರೆ, ರಾಜಸ್ಥಾನ್ ರಾಯಲ್ಸ್ ಕೇವಲ 3 ಬಾರಿ ಗೆಲುವು ದಾಖಲಿಸಿದೆ. ಈ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಗುಜರಾತ್ ಟೈಟಾನ್ಸ್ ಮೇಲುಗೈ ಹೊಂದಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಉಭಯ ತಂಡಗಳು ಪರಸ್ಪರ ಎರಡು ಪಂದ್ಯಗಳನ್ನಾಡಿದೆ.
ಅಂದರೆ ಈ ಬಾರಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸುವಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿದೆ. ಅತ್ತ ಆ ಸೋಲಿನ ಸೇಡನ್ನು ತೀರಿಸಿಕೊಳ್ಳುವಲ್ಲಿ ಗುಜರಾತ್ ಟೈಟಾನ್ಸ್ ಕೂಡ ಯಶಸ್ವಿಯಾಗಿದೆ. ಹೀಗಾಗಿ ಈ ಬಾರಿ ಉಭಯ ತಂಡಗಳ ಸಮಬಲ ಹೊಂದಿದೆ ಎನ್ನಬಹುದು.
ಇದನ್ನೂ ಓದಿ: ವಿಶ್ವ ದಾಖಲೆ… ಪೊಲಾರ್ಡ್ಗೆ 652 ಇನಿಂಗ್ಸ್, ವೈಭವ್ಗೆ ಜಸ್ಟ್ 33 ಇನಿಂಗ್ಸ್!
ಹೀಗಾಗಿ ಇಂದಿನ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಈ ಪೈಪೋಟಿಯೊಂದಿಗೆ ಈ ಬಾರಿ ಫೈನಲ್ಗೇರಿ ಆರ್ಸಿಬಿಯನ್ನು ಎದುರಿಸುವರು ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.