
2026 ರ ಐಪಿಎಲ್‌ನ (IPL 2026) ಲೀಗ್ ಹಂತಕ್ಕೆ ಇನ್ನೇನು ತೆರೆ ಬೀಳಲಿದೆ. ಅದಾದ ಬಳಿಕ ಪ್ಲೇಆಫ್ ಸುತ್ತು ಶುರುವಾಗಲಿದೆ. ಆದಾಗ್ಯೂ ಈವರೆಗೆ ಯಾವ ತಂಡಕ್ಕೂ ಪ್ಲೇಆಫ್ ಟಿಕೆಟ್ ಸಿಕ್ಕಿಲ್ಲ. ಕೆಲವು ತಂಡಗಳ ಸ್ಥಾನ ಖಚಿತವಾದರೂ ಇನ್ನು ಕೆಲವು ತಂಡಗಳು ತೀವ್ರಪೈಪೋಟಿ ನಡೆಸುತ್ತಿವೆ. ಅಂತಹ ತಂಡಗಳಲ್ಲಿ ಆರ್ಸಿಬಿಗೆ (RCB) ಪ್ಲೇಆಫ್ ಸ್ಥಾನ ಭಾಗಶಃ ಖಚಿತವಾಗಿದ್ದರೆ, ಇತ್ತ ಸಿಎಸ್ಕೆಗೂ (CSK) ಪ್ಲೇಆಫ್ಗೇರುವ ಅವಕಾಶವಿದೆ. ಇದೀಗ ಈ ಎರಡೂ ತಂಡಗಳಿಗೆ ಹೊಸ ಆಟಗಾರರ ಆಗಮನವಾಗಿದೆ.
ವಾಸ್ತವವಾಗಿ ಈ ಸೀಸನ್ನಲ್ಲಿ ಆಟಗಾರರ ಇಂಜುರಿಯಿಂದ ಅತಿ ಹೆಚ್ಚು ಸಮಸ್ಯೆಗೆ ಗುರಿಯಾದ ತಂಡಗಳಲ್ಲಿ ಸಿಎಸ್‌ಕೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸಿಎಸ್‌ಕೆ ತಂಡದ ಐದರಿಂದ ಆರು ಆಟಗಾರರು ಗಾಯದ ಕಾರಣದಿಂದಾಗಿ ಇಡೀ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಫ್ರಾಂಚೈಸಿ ಅವರ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಅದರಂತೆ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಬದಲಿಗೆ ಸಿಎಸ್‌ಕೆ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಏತನ್ಮಧ್ಯೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಇಂಗ್ಲೆಂಡ್‌ನ ರಿಚರ್ಡ್ ಗ್ಲೀಸನ್ ಅವರನ್ನು ನುವಾನ್ ತುಷಾರ ಬದಲಿಗೆ ತಂಡಕ್ಕೆ ಸೇರಿಸಿಕೊಂಡಿದೆ.
ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಎರಡೂ ತಂಡಗಳಲ್ಲಿ ಮಾಡಲಾದ ಬದಲಾವಣೆಗಳನ್ನು ವಿವರಿಸಲಾಗಿದೆ. ಪ್ರಕಟಣೆಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಖಲೀಲ್ ಬದಲಿಗೆ ದೆಹಲಿ ವೇಗದ ಬೌಲರ್ ಕುಲದೀಪ್ ಯಾದವ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ತಂಡಕ್ಕೆ ಕರತಂದಿದೆ. ಸಿಎಸ್‌ಕೆ ಪರ ಆರಂಭಿಕ ಐದು ಪಂದ್ಯಗಳನ್ನಾಡಿದ ಬಳಿಕ ಖಲೀಲ್, ಗಾಯಗೊಂಡು ಇಡೀ ಐಪಿಎಲ್ನಿಂದ ಹೊರಗುಳಿದಿದ್ದರು. ಇದೀಗ ಅವರ ಬದಲಿಗೆ ಬಂದ ಕುಲ್ದೀಪ್ ಈ ಹಿಂದೆ 2021 ಮತ್ತು 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದರು, ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.
🚨 News 🚨
Kuldip Yadav and Richard Gleeson named injury replacements for Khaleel Ahmed and Nuwan Thushara.
More Details 🔽 | #TATAIPL | @ChennaiIPL | @RCBTweetshttps://t.co/WLoqIp6oVa
— IndianPremierLeague (@IPL) May 15, 2026
ಮತ್ತೊಂದೆಡೆ, ಹಾಲಿ ಚಾಂಪಿಯನ್ ಆರ್‌ಸಿಬಿ ಕೂಡ, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಈ ಸೀಸನ್ನಲ್ಲಿ ಆರ್‌ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲಿಯವರೆಗೆ 12 ಲೀಗ್ ಪಂದ್ಯಗಳನ್ನು ಆಡಿರುವ ಆರ್‌ಸಿಬಿ, 38 ವರ್ಷದ ಇಂಗ್ಲಿಷ್ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಗ್ಲೀಸನ್, ಈ ಹಿಂದೆ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದು, ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ