AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ನೋಡುವವರಿಲ್ಲ, ಟಿಆರ್​ಪಿಯೂ ಇಲ್ಲ..! ಕಳೆಗುಂದಿದ ಐಪಿಎಲ್ ಜನಪ್ರಿಯತೆ

IPL 2026 Popularity Decline: 2026ರ ಐಪಿಎಲ್ ಜನಪ್ರಿಯತೆ ಕುಸಿಯುತ್ತಿದ್ದು, ಟಿಆರ್‌ಪಿ ಶೇ. 18.8, ವೀಕ್ಷಕರ ಸಂಖ್ಯೆ ಶೇ. 26ರಷ್ಟು ಕಡಿಮೆಯಾಗಿದೆ. ಜಾಹೀರಾತುದಾರರ ಸಂಖ್ಯೆಯೂ ಕುಸಿದಿದೆ. ಲೀಗ್‌ನ ದೀರ್ಘಾವಧಿ, ಫ್ಲಾಟ್ ಪಿಚ್‌ಗಳು, ಫ್ಯಾಂಟಸಿ ಆ್ಯಪ್ ನಿಷೇಧ ಹಾಗೂ ವೀಕ್ಷಕರ ಅಭ್ಯಾಸ ಬದಲಾವಣೆಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ.

IPL 2026: ನೋಡುವವರಿಲ್ಲ, ಟಿಆರ್​ಪಿಯೂ ಇಲ್ಲ..! ಕಳೆಗುಂದಿದ ಐಪಿಎಲ್ ಜನಪ್ರಿಯತೆ
Ipl
ಪೃಥ್ವಿಶಂಕರ
|

Updated on:May 04, 2026 | 4:36 PM

Share

2026 ರ ಐಪಿಎಲ್‌ನಲ್ಲಿ (IPL 2026) ಈಗಾಗಲೇ 47 ಪಂದ್ಯಗಳು ಮುಗಿದಿವೆ. ಅಂದರೆ ಐಪಿಎಲ್​ನ ಅರ್ಧ ಪ್ರಯಾಣ ಮುಗಿದಂತ್ತಾಗಿದೆ. ಆರಂಭದಲ್ಲಿ ಐಪಿಎಲ್​ಗೆ ಸಿಕ್ಕ ಬೆಂಬಲ ಪಂದ್ಯಗಳು ಮುಂದುವರೆದಂತೆ ಕಳೆಗುಂದಿದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಕಳೆದ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಬರಿ ಬ್ಯಾಟರ್​ಗಳ ಪಾರುಪತ್ಯವೇ ಹೆಚ್ಚಾಗಿರುವುದು. ಇದರ ಜೊತೆಗೆ ಇನ್ನು ಅನೇಕ ಕಾರಣಗಳು ಐಪಿಎಲ್​ ಮೇಲೆ ಅಭಿಮಾನಿಗಳು ಉತ್ಸಾಹ ಕಳೆದುಕೊಳ್ಳುವಂತೆ ಮಾಡುತ್ತಿವೆ. ಇದೀಗ ಅದಕ್ಕೆ ಪೂರಕವೆಂಬಂತೆ ಹೊರಬಿದ್ದಿರುವ ವರದಿಯೊಂದು ಐಪಿಎಲ್ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, 2026 ರ ಐಪಿಎಲ್​ನ ಟಿಆರ್​ಪಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಮಾತ್ರವಲ್ಲದೆ ಐಪಿಎಲ್ ವೀಕ್ಷಿಸುವವರ ಸಂಖ್ಯೆಯಲ್ಲೂ ಇಳಿಮುಖ ಕಂಡುಬಂದಿದೆ. ಇದರ ಪರಿಣಾಮವೆಂಬಂತೆ ಜಾಹೀರಾತುದಾರರ ಸಂಖ್ಯೆಯೂ ಕಡಿಮೆಯಾಗಿದೆ.

ಟಿಆರ್​ಪಿಯಲ್ಲಿ ಕುಸಿತ

ಮೊದಲಿಗೆ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ ಬಗ್ಗೆ ಹೇಳುವುದಾದರೆ.. TAM ಸ್ಪೋರ್ಟ್ಸ್ ಮತ್ತು BARC ಇಂಡಿಯಾ ನೀಡಿರುವ ವರದಿ ಪ್ರಕಾರ, ಐಪಿಎಲ್ 2026 ರ ಟಿಆರ್​ಪಿ ಶೇಕಡಾ 18.8 ರಷ್ಟು ಕಡಿಮೆಯಾಗಿದೆ. ಅಂದರೆ ಐಪಿಎಲ್ 2026 ರ ಟಿಆರ್​ಪಿ 4.57 ರಿಂದ 3.71 ಕ್ಕೆ ಇಳಿದಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ವೀಕ್ಷಕರ ಸಂಖ್ಯೆಯೂ ಶೇ.26 ರಷ್ಟು ಕಡಿಮೆಯಾಗಿದೆ. ಅಂದರೆ ಐಪಿಎಲ್ ವೀಕ್ಷಕರ ಸಂಖ್ಯೆ 124 ಮಿಲಿಯನ್‌ನಿಂದ 113.6 ಮಿಲಿಯನ್‌ಗೆ ಕುಸಿದಿದೆ.

ಜಾಹೀರಾತುದಾರರ ನಿರಾಸಕ್ತಿ

ಐಪಿಎಲ್ 2026 ರಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾದ್ದರ ಪರಿಣಾಮವಾಗಿ ಜಾಹೀರಾತುದಾರರು ಸಹ ಆಸಕ್ತಿ ಕಳೆದುಕೊಳ್ಳುತ್ತಿರುವಂತೆ ತೋರುತ್ತಿದೆ. ಐಪಿಎಲ್ 2026 ಜಾಹೀರಾತುದಾರರು ಶೇಕಡಾ 31 ರಷ್ಟು ಕುಸಿತ ಕಂಡಿದ್ದಾರೆ. ಹಿಂದೆ, ಜಾಹೀರಾತುದಾರರ ಸಂಖ್ಯೆ 65 ಮೀರಿತ್ತು, ಆದರೆ ಈಗ ಅದು 45 ಕ್ಕೆ ಕುಸಿದಿದೆ.

ಇಂತಹ ಪರಿಸ್ಥಿತಿಗೆ ಕಾರಣವೇನು?

ಈಗ ಪ್ರಶ್ನೆ ಏನೆಂದರೆ, ಟಿಆರ್‌ಪಿ, ವೀಕ್ಷಕರ ಸಂಖ್ಯೆ ಮತ್ತು ಜಾಹೀರಾತುದಾರರ ಸಂಖ್ಯೆಯಲ್ಲಿನ ಕುಸಿತಕ್ಕೆ ಕಾರಣವೇನು? ಎಂಬುದು. ಇದಕ್ಕೆ ಕಾರಣ, ಲೀಗ್‌ನ ಸ್ವರೂಪದ ದೀರ್ಘೀಕರಣ, ಪಂದ್ಯಗಳನ್ನು ಫ್ಲಾಟ್ ಪಿಚ್‌ಗಳಲ್ಲಿ ಆಡಿಸುತ್ತಿರುವುದು ಮತ್ತು ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿಷೇಧ ಸೇರಿದಂತೆ ಹಲವಾರು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಫ್ಲಾಟ್ ಪಿಚ್‌ಗಳಲ್ಲಿ ಪಂದ್ಯಗಳನ್ನು ಆಯೋಜನೆ ಮಾಡುತ್ತಿರುವುದರಿಂದ ಕೇವಲ ಬ್ಯಾಟರ್​ಗಳ ಅಬ್ಬರವೇ ಹೆಚ್ಚಿದೆ. ಇದರಿಂದ ಆಟದಲ್ಲಿನ ಸಮತೋಲನೆ ಮಾಯಾವಾಗಿರುವುದು ಅಭಿಮಾನಿಗಳ ನಿರಾಸಕ್ತಿಗೆ ಕಾರಣವಾಗಿದೆ.

SRH vs KKR: ಸುನಿಲ್ ನರೈನ್ ಡಬಲ್ ಸೆಂಚುರಿ; ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿಗ

ಹಾಗೆಯೇ ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿಷೇಧವು ಐಪಿಎಲ್‌ನಲ್ಲಿ ಆಸಕ್ತಿಯನ್ನು ಕಡಿಮೆ ಮಾಡಿದೆ. ಇದಲ್ಲದೆ, ವೀಕ್ಷಕರ ಅಭ್ಯಾಸದಲ್ಲಿನ ಇತ್ತೀಚಿನ ಬದಲಾವಣೆಗಳು ಟಿಆರ್‌ಪಿಗಳಲ್ಲಿನ ಕುಸಿತಕ್ಕೆ ಪ್ರಮುಖ ಕಾರಣ. ಹೆಚ್ಚಿನ ವೀಕ್ಷಕರು ಈಗ ತಾವು ಬೆಂಬಲಿಸುವ ತಂಡಗಳನ್ನು ಒಳಗೊಂಡ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ಹೊರತುಪಡಿಸಿ ಉಳಿದ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಐಪಿಎಲ್​ನ​ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Mon, 4 May 26

Follow Us
ಶಾಮನೂರ ಮನೆತನದ 3ನೇ‌ ಪೀಳಿಗೆ ವಿಧಾನಸಭೆಗೆ
ಶಾಮನೂರ ಮನೆತನದ 3ನೇ‌ ಪೀಳಿಗೆ ವಿಧಾನಸಭೆಗೆ
ಬಂಗಾಳ ನೆಲದಲ್ಲಿ ಹೊಸ ಸೂರ್ಯೋದಯವಾಗಿದೆ: ಬದಲಾವಣೆ ಪರ್ವ ಶುರು ಎಂದ ಮೋದಿ
ಬಂಗಾಳ ನೆಲದಲ್ಲಿ ಹೊಸ ಸೂರ್ಯೋದಯವಾಗಿದೆ: ಬದಲಾವಣೆ ಪರ್ವ ಶುರು ಎಂದ ಮೋದಿ
ದಾವಣಗೆರೆ ದಕ್ಷಿಣ ಗೆಲುವಿನ ಕ್ರೆಡಿಟ್ ಯಾರಿಗೆ? ಸಲೀಂ ಅಹ್ಮದ್ ಹೇಳಿದ್ದಿಷ್ಟು
ದಾವಣಗೆರೆ ದಕ್ಷಿಣ ಗೆಲುವಿನ ಕ್ರೆಡಿಟ್ ಯಾರಿಗೆ? ಸಲೀಂ ಅಹ್ಮದ್ ಹೇಳಿದ್ದಿಷ್ಟು
ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಮೋದಿ
ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಮೋದಿ
ಮಮತಾ ಬ್ಯಾನರ್ಜಿ ನಿವಾಸದ ಹೊರಗೆ ಬಿಜೆಪಿ ಬೆಂಬಲಿಗರಿಂದ ಜೈ ಶ್ರೀ ರಾಮ್ ಘೋಷಣೆ
ಮಮತಾ ಬ್ಯಾನರ್ಜಿ ನಿವಾಸದ ಹೊರಗೆ ಬಿಜೆಪಿ ಬೆಂಬಲಿಗರಿಂದ ಜೈ ಶ್ರೀ ರಾಮ್ ಘೋಷಣೆ
ಜಯಭೇರಿ ಬಾರಿಸಿದ ಟಿವಿಕೆ: ದಳಪತಿ ವಿಜಯ್ ಮನೆ ಎದುರು ಪೊಲೀಸ್ ಬಿಗಿ ಭದ್ರತೆ
ಜಯಭೇರಿ ಬಾರಿಸಿದ ಟಿವಿಕೆ: ದಳಪತಿ ವಿಜಯ್ ಮನೆ ಎದುರು ಪೊಲೀಸ್ ಬಿಗಿ ಭದ್ರತೆ
ಪಶ್ಚಿಮ ಬಂಗಾಳ,ಅಸ್ಸಾಂ, ಪುದುಚೇರಿ ಫಲಿತಾಂಶ: ಮೋದಿ ಭಾಷಣದ ನೇರಪ್ರಸಾರ
ಪಶ್ಚಿಮ ಬಂಗಾಳ,ಅಸ್ಸಾಂ, ಪುದುಚೇರಿ ಫಲಿತಾಂಶ: ಮೋದಿ ಭಾಷಣದ ನೇರಪ್ರಸಾರ
18 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿದ್ದ ಫಿಸಿಯೋಗೆ ಭಾವುಕ ವಿದಾಯ
18 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿದ್ದ ಫಿಸಿಯೋಗೆ ಭಾವುಕ ವಿದಾಯ
ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಂದ ದನಕ್ಕೆ ಬೈಕ್​ ಡಿಕ್ಕಿ
ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಂದ ದನಕ್ಕೆ ಬೈಕ್​ ಡಿಕ್ಕಿ
ಯತ್ನಾಳ್​​ ಪ್ರಚಾರ ಮಾಡಿದ್ರೂ BJP ಗೆಲ್ಲಲಿಲ್ಲ: ತಿಮ್ಮಾಪುರ್ ಹೇಳಿದ್ದಿಷ್ಟು
ಯತ್ನಾಳ್​​ ಪ್ರಚಾರ ಮಾಡಿದ್ರೂ BJP ಗೆಲ್ಲಲಿಲ್ಲ: ತಿಮ್ಮಾಪುರ್ ಹೇಳಿದ್ದಿಷ್ಟು