IPL 2026 Qualifier-1 RCB vs GT Highlights: ಗುಜರಾತ್ ವಿರುದ್ಧ ಗೆದ್ದು ಫೈನಲ್‌ಗೇರಿದ ಆರ್‌ಸಿಬಿ
IPL 2026 Qualifier-1 RCB vs GT Highlights: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ 2026 ರ ಕ್ವಾಲಿಫೈಯರ್ 1 ಪಂದ್ಯ ನಡೆಯಿತು. ಈ ಪಂದ್ಯವನ್ನು ಆರ್‌ಸಿಬಿ 92 ರನ್‌ಗಳಿಂದ ಗೆದ್ದು ಸತತ ಎರಡನೇ ಬಾರಿಗೆ ಫೈನಲ್‌ಗೇರಿತು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ 2026 ರ ಕ್ವಾಲಿಫೈಯರ್ 1 ಪಂದ್ಯ ನಡೆಯಿತು. ಈ ಪಂದ್ಯವನ್ನು ಆರ್‌ಸಿಬಿ 92 ರನ್‌ಗಳಿಂದ ಗೆದ್ದು ಸತತ ಎರಡನೇ ಬಾರಿಗೆ ಫೈನಲ್‌ಗೇರಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 254 ರನ್ ಗಳಿಸಿತು. ಉತ್ತರವಾಗಿ, ಗುಜರಾತ್ ಟೈಟಾನ್ಸ್ 162 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಪರ ಜಾಕೋಬ್ ಡಫಿ ಗರಿಷ್ಠ 3 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಂ ದಾರ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಇವರಲ್ಲದೆ, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.
LIVE NEWS & UPDATES
-
IPL 2026 Qualifier-1 RCB vs GT: ಫೈನಲ್‌ಗೇರಿದ ಆರ್‌ಸಿಬಿ
ಗುಜರಾತ್ ಟೈಟಾನ್ಸ್ 162 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 92 ರನ್‌ಗಳಿಂದ ಪಂದ್ಯವನ್ನು ಗೆದ್ದು ಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿತು. ಈ ಪಂದ್ಯದಲ್ಲಿ ಆರ್‌ಸಿಬಿ ಅದ್ಭುತ ಬೌಲಿಂಗ್ ಮಾಡಿತು. ಜಾಕೋಬ್ ಡಫಿ ಮೂರು ವಿಕೆಟ್‌ಗಳನ್ನು ಪಡೆದರೆ, ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಂ ದಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಕೂಡ ಒಂದು ವಿಕೆಟ್ ಪಡೆದರು.
-
IPL 2026 Qualifier-1 RCB vs GT: 9ನೇ ವಿಕೆಟ್
ಗುಜರಾತ್ ಟೈಟಾನ್ಸ್ 156 ರನ್‌ಗಳಿಗೆ ಒಂಬತ್ತನೇ ವಿಕೆಟ್ ಕಳೆದುಕೊಂಡಿತು. ರಾಹುಲ್ ತೆವಾಟಿಯಾ 43 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು.
-
-
IPL 2026 Qualifier-1 RCB vs GT: ತೆವಾಟಿಯಾ ಅರ್ಧಶತಕ
ರಾಹುಲ್ ತೆವಾಟಿಯಾ ಹೋರಾಟದ ಇನ್ನಿಂಗ್ಸ್ ಆಡಿ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರೊಂದಿಗೆ, ಗುಜರಾತ್ 17 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 143 ರನ್ ಕಲೆಹಾಕಿದೆ.
-
IPL 2026 Qualifier-1 RCB vs GT: 15 ಓವರ್‌ಗಳು ಪೂರ್ಣ
ಗುಜರಾತ್ ಟೈಟಾನ್ಸ್ ತಂಡ 15 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‌ಗಳಿಗೆ 123 ರನ್ ಗಳಿಸಿದೆ. ಈಗ 5 ಓವರ್‌ಗಳಲ್ಲಿ 132 ರನ್‌ಗಳ ಅವಶ್ಯಕತೆಯಿದೆ. ಏತನ್ಮಧ್ಯೆ, ಆರ್‌ಸಿಬಿ ಗೆಲುವಿಗೆ 2 ವಿಕೆಟ್‌ಗಳ ದೂರದಲ್ಲಿದೆ.
-
IPL 2026 Qualifier-1 RCB vs GT: ಆರನೇ ವಿಕೆಟ್ ಪತನ
ಗುಜರಾತ್ ಟೈಟಾನ್ಸ್ 65 ರನ್‌ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿತು. ವಾಷಿಂಗ್ಟನ್ ಸುಂದರ್ ಕೂಡ 8 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು.
-
-
IPL 2026 Qualifier-1 RCB vs GT: 4ನೇ ವಿಕೆಟ್ ಪತನ
ಗುಜರಾತ್ ಟೈಟಾನ್ಸ್ ಕೇವಲ 51 ರನ್‌ಗಳಿಗೆ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು. ನಿಶಾಂತ್ ಸಿಂಧು ಮೂರು ಎಸೆತಗಳಲ್ಲಿ ಐದು ರನ್ ಗಳಿಸಿ ಔಟಾದರು.
-
IPL 2026 Qualifier-1 RCB vs GT: ಸುದರ್ಶನ್ ಔಟ್
ಗುಜರಾತ್ ಟೈಟಾನ್ಸ್ ತಂಡವು 17 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಸಾಯಿ ಸುದರ್ಶನ್ 9 ಎಸೆತಗಳಲ್ಲಿ 14 ರನ್ ಗಳಿಸಿ ಹಿಟ್ ವಿಕೆಟ್ ಆಗಿ ಔಟಾದರು.
-
IPL 2026 Qualifier-1 RCB vs GT: ಗುಜರಾತ್ಗೆ 255 ರನ್ ಗುರಿ
ಕ್ವಾಲಿಫೈಯರ್ 1 ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕ ರಜತ್ ಪಾಟಿದಾರ್ ಅವರ ಬಲಿಷ್ಠ ಇನ್ನಿಂಗ್ಸ್ನಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ 255 ರನ್‌ಗಳ ಗುರಿ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ಆರ್‌ಸಿಬಿ ತಂಡವು 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಪಾಟಿದಾರ್ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ ಗಳನ್ನು ಒಳಗೊಂಡಂತೆ ಅಜೇಯ 93 ರನ್ ಗಳಿಸಿ ತಂಡವು ಬೃಹತ್ ಗುರಿಯನ್ನು ತಲುಪಲು ಸಹಾಯ ಮಾಡಿತು.
-
IPL 2026 Qualifier-1 RCB vs GT: ಡೇವಿಡ್ ಔಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 214 ರನ್‌ಗಳಿಗೆ ಐದನೇ ವಿಕೆಟ್ ಕಳೆದುಕೊಂಡಿತು. ಟಿಮ್ ಡೇವಿಡ್ 5 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು.
-
IPL 2026 Qualifier-1 RCB vs GT: ಪಾಟಿದಾರ್ ಅರ್ಧಶತಕ
ನಾಯಕನ ಇನ್ನಿಂಗ್ಸ್ ಆಡಿದ ರಜತ್ ಪಾಟಿದಾರ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತು.
-
IPL 2026 Qualifier-1 RCB vs GT: 150 ರನ್ ಪೂರ್ಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ ಗಳ ಗಡಿ ದಾಟಿತು. ರಜತ್ ಪಾಟಿದಾರ್ ಮತ್ತು ಕೃನಾಲ್ ಪಾಂಡ್ಯ ತಂಡವನ್ನು ದೊಡ್ಡ ಸ್ಕೋರ್ ನತ್ತ ಕೊಂಡೊಯ್ಯುತ್ತಿದ್ದಾರೆ.
-
IPL 2026 Qualifier-1 RCB vs GT: ಆರ್‌ಸಿಬಿ 100 ರನ್ ಪೂರ್ಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಓವರ್‌ಗಳ ನಂತರ 3 ವಿಕೆಟ್‌ಗಳಿಗೆ 112 ರನ್ ಗಳಿಸಿದೆ. ರಜತ್ ಪಾಟಿದಾರ್ 11 ರನ್ ಮತ್ತು ಕೃನಾಲ್ ಪಾಂಡ್ಯ 8 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
-
IPL 2026 Qualifier-1 RCB vs GT: ಕೊಹ್ಲಿ ಔಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 93 ರನ್‌ಗಳಿಗೆ 2ನೇ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 43 ರನ್ ಗಳಿಸಿ ಔಟಾದರು. ಜೇಸನ್ ಹೋಲ್ಡರ್ ವಿಕೆಟ್ ಪಡೆದರು.
-
IPL 2026 Qualifier-1 RCB vs GT: 8 ಓವರ್‌ಗಳು ಪೂರ್ಣ
ಮೊದಲ ಎಂಟು ಓವರ್‌ಗಳ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ವಿಕೆಟ್‌ಗೆ 92 ರನ್ ಗಳಿಸಿದೆ. ವಿರಾಟ್ ಕೊಹ್ಲಿ 43 ಮತ್ತು ದೇವದತ್ ಪಡಿಕ್ಕಲ್ 29 ರನ್ ಗಳಿಸಿದ್ದಾರೆ.
-
IPL 2026 Qualifier-1 RCB vs GT: 50 ರನ್ ಪೂರ್ಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ. ವಿರಾಟ್ ಕೊಹ್ಲಿ 14 ಮತ್ತು ದೇವದತ್ ಪಡಿಕ್ಕಲ್ 17 ರನ್ ಗಳಿಸಿದ್ದಾರೆ.
-
IPL 2026 Qualifier-1 RCB vs GT: ಅಯ್ಯರ್ ಔಟ್
ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಆರ್‌ಸಿಬಿ ವಿಕೆಟ್ ಕಳೆದುಕೊಂಡಿತು. ರಬಾಡ, ವೆಂಕಟೇಶ್ ಅಯ್ಯರ್ ಅವರನ್ನು ಔಟ್ ಮಾಡಿದರು. ಅಯ್ಯರ್ ದೊಡ್ಡ ಹೊಡೆತಕ್ಕೆ ಮುಂದಾದರು ಆದರೆ ಗಿಲ್ ಅವರಿಗೆ ಕ್ಯಾಚ್ ನೀಡಿದರು. ಅವರು ಏಳು ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 19 ರನ್ ಗಳಿಸಿ ಔಟಾದರು.
-
IPL 2026 Qualifier-1 RCB vs GT: ಉತ್ತಮ ಆರಂಭ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ಸಿಕ್ಕಿದೆ. ವೆಂಕಟೇಶ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಮೊದಲ ಓವರ್‌ನಲ್ಲಿ 14 ರನ್ ಗಳಿಸಿದರು.
-
IPL 2026 Qualifier-1 RCB vs GT:ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ 11
ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಾಸಿಖ್ ಸಲಾಮ್ ದಾರ್.
-
IPL 2026 Qualifier-1 RCB vs GT: ಗುಜರಾತ್ ಟೈಟಾನ್ಸ್ ಆಡುವ 11
ಸಾಯಿ ಸುದರ್ಶನ್, ಶುಬ್ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
-
IPL 2026 Qualifier-1 RCB vs GT: ಟಾಸ್ ಗೆದ್ದ ಗುಜರಾತ್
ಟಾಸ್ ಗೆದ್ದ ಗುಜರಾತ್ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.
-
IPL 2026 Qualifier-1 RCB vs GT: ಮುಖಾಮುಖಿ ದಾಖಲೆ
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಇದುವರೆಗೆ ಒಟ್ಟು 8 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಎರಡೂ ತಂಡಗಳು ತಲಾ ತಲಾ 4 ಪಂದ್ಯಗಳನ್ನು ಗೆದ್ದಿವೆ. ಎರಡೂ ತಂಡಗಳು ಸಮಾನವಾಗಿ ಬಲಿಷ್ಠವಾಗಿವೆ ಎಂಬುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.
-
IPL 2026 Qualifier-1 RCB vs GT: ಮೊದಲ ಫೈನಲಿಸ್ಟ್ ನಿರ್ಧಾರ
ಐಪಿಎಲ್ 2026 ರ ಕ್ವಾಲಿಫೈಯರ್ 1 ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಧರ್ಮಶಾಲಾದ ಸುಂದರ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ.
Published On - May 26,2026 6:23 PM




