IPL 2026: CSK ತಂಡಕ್ಕೆ ಮೇಜರ್ ಸರ್ಜರಿ: ಮತ್ತೆ ಸುರೇಶ್ ರೈನಾ ಎಂಟ್ರಿ?

IPL 2025 CSK: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್ 2025) ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆದ್ದಿರುವುದು ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ. ಅಂದರೆ 10 ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿದೆ. ಹೀಗಾಗಿಯೇ ಮುಂದಿನ ಸೀಸನ್​ಗೂ ಮುನ್ನ ಸಿಎಸ್​ಕೆ ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತ.

IPL 2026: CSK ತಂಡಕ್ಕೆ ಮೇಜರ್ ಸರ್ಜರಿ: ಮತ್ತೆ ಸುರೇಶ್ ರೈನಾ ಎಂಟ್ರಿ?
Suresh Raina

Updated on: May 26, 2025 | 11:32 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮುಕ್ತಾಯದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತವಾಗಿದೆ. ಇಲ್ಲಿ ಕೆಲ ಆಟಗಾರರೊಂದಿಗೆ ತಂಡದ ಕೋಚಿಂಗ್ ಸಿಬ್ಬಂದಿಗಳಿಗೂ ಗೇಟ್ ಪಾಸ್ ನೀಡಲು ಸಿಎಸ್​ಕೆ ಫ್ರಾಂಚೈಸಿ ಬಯಸಿದೆ. ಅದರಂತೆ ಮುಂದಿನ ಸೀಸನ್​ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಬದಲಾಗುವುದು ಬಹುತೇಕ ಖಚಿತ.

ಪ್ರಸ್ತುತ ಬ್ಯಾಟಿಂಗ್ ಕೋಚ್ ಆಸ್ಟ್ರೇಲಿಯಾದ ಮೈಕಲ್ ಹಸ್ಸಿ ಅವರನ್ನು ಕೈ ಬಿಡಲು ಫ್ರಾಂಚೈಸಿ ಬಯಸಿದೆ ಎಂಬ ಸುಳಿವನ್ನು ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವಣ ಪಂದ್ಯದ ವೇಳೆ ಚಾನೆಲ್​ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದ ರೈನಾ, ಸಿಎಸ್​ಕೆ ಫ್ರಾಂಚೈಸಿಯು ಮುಂದಿನ ಸೀಸನ್‌ಗೆ ಹೊಸ ಬ್ಯಾಟಿಂಗ್ ಕೋಚ್ ಅನ್ನು ನೇಮಿಸಿಕೊಳ್ಳಲು ಚರ್ಚೆಯಲ್ಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ಯಾನೆಲ್ ಚರ್ಚೆಯಲ್ಲಿದ್ದ ಆಕಾಶ್ ಚೋಪ್ರಾ ಆ ಕೋಚ್ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅಲ್ಲದೆ ಕೋಚ್ ಹೆಸರಿನ ಮೊದಲಕ್ಷರ ‘S’ ನಿಂದ ಪ್ರಾರಂಭವಾಗುತ್ತವೆಯೇ ಎಂದು ಪ್ರಶ್ನಿಸಿದರು. ಇದಾಗ್ಯೂ ಹೆಸರು ಹೇಳದ ಸುರೇಶ್ ರೈನಾ, “ಅವರು ಅತ್ಯಂತ ವೇಗದ ಅರ್ಧಶತಕ ಗಳಿಸಿದ್ದಾರೆ ಎಂಬ ಸುಳಿವನ್ನು ನೀಡಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯಂತ ವೇಗದ ಅರ್ಧಶತಕ ಬಾರಿಸಿರುವುದು ಸುರೇಶ್ ರೈನಾ. 2014 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದು ಚೆನ್ನೈ ಸೂಪರ್ ಕಿಂಗ್ಸ್ ಪರ ಮೂಡಿಬಂದ ಅತ್ಯಂತ ವೇಗದ ಅರ್ಧಶತಕವಾಗಿದೆ.

ಇದೀಗ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಬ್ಯಾಟರ್ ಚೆನ್ಣೈ ಸೂಪರ್ ಕಿಂಗ್ಸ್ ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಲಿದ್ದಾರೆ ಎಂದು ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ. ಈ ಬಹಿರಂಗಪಡಿಸುವಿಕೆಯೊಂದಿಗೆ ರೈನಾ ಸಿಎಸ್​ಕೆ ತಂಡಕ್ಕೆ ಕೋಚ್ ಆಗಿ ಮರಳಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದನ್ನೂ ಓದಿ: IPL 2025: ಬಂದ್ಬಿಟ್ಟ… RCB ತಂಡಕ್ಕೆ ರಣ ಬೇಟೆಗಾರ ಬಂದೇ ಬಿಟ್ಟ..!

ಅದರಂತೆ ಐಪಿಎಲ್ 2026 ರಲ್ಲಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಸಿಎಸ್​ಕೆ ಫ್ರಾಂಚೈಸಿ ಯುವ ಪಡೆಗಳಗಳೊಂದಿಗೆ ಹೊಸ ತಂಡವನ್ನು ಕಟ್ಟಲು ಮುಂದಾಗಿದ್ದು, ಅದರಂತೆ ಇದೀಗ ಯುವ ದಾಂಡಿಗರ ದಂಡೇ ಸಿಎಸ್​ಕೆ ಬಳಗದಲ್ಲಿದೆ. ಹೀಗಾಗಿ ಸುರೇಶ್ ರೈನಾ ಅವರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿ ಹೊಸ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚಿದೆ.