IPL 2026: ಐಪಿಎಲ್​ನಲ್ಲಿ ಅಂಪೈರ್​ಗೆ ಸಿಗುವ ವೇತನ ಎಷ್ಟು ಗೊತ್ತಾ?

IPL 2026 Schedule: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಮಾರ್ಚ್ 28 ರಿಂದ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.

IPL 2026: ಐಪಿಎಲ್​ನಲ್ಲಿ ಅಂಪೈರ್​ಗೆ ಸಿಗುವ ವೇತನ ಎಷ್ಟು ಗೊತ್ತಾ?
Ipl Umpire

Updated on: Mar 18, 2026 | 1:41 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಟಗಾರರಿಗೆ ಕೋಟಿ ಕೋಟಿ ರೂ. ಸಂಭಾವನೆ ಸಿಗುವುದು ಗೊತ್ತೇ ಇದೆ. ಆದರೆ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಅಂಪೈರ್​ಗಳಿಗೂ ಲಕ್ಷ ಲಕ್ಷ ರೂ. ವೇತನ ಸಿಗುತ್ತಿರುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಅಂದರೆ ಐಪಿಎಲ್ ಕೇವಲ ಆಟಗಾರರಿಗೆ ಮಾತ್ರವಲ್ಲದೆ, ಪಂದ್ಯದ ನಿರ್ಣಾಯಕರಿಗೂ ಕೂಡ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿದೆ. ಹಾಗಿದ್ರೆ ಐಪಿಎಲ್​ನಲ್ಲಿ ಅಂಪೈರ್​ಗಳು ಪಡೆಯುವ ವೇತನ ಎಷ್ಟು ಎಂದು ನೋಡೋಣ..

ಐಪಿಎಲ್ 2026ರ ಅಂಪೈರ್ ವೇತನ:

ಅಂಪೈರ್‌ಗಳ ಅನುಭವ ಮತ್ತು ಅವರ ಜವಾಬ್ದಾರಿಗೆ ಅನುಗುಣವಾಗಿ ಪ್ರತಿ ಪಂದ್ಯಕ್ಕೆ ಸಂಭಾವನೆಯನ್ನು ನೀಡಲಾಗುತ್ತದೆ.

  • ಐಸಿಸಿಯಿಂದ ಮಾನ್ಯತೆ ಹೊಂದಿರುವ ಎಲೈಟ್ ಪ್ಯಾನಲ್ ಅಂಪೈರ್‌ಗಳಿಗೆ ಪ್ರತಿ ಪಂದ್ಯಕ್ಕೆ ₹3.7 ಲಕ್ಷ ರೂ. ಸಿಗುತ್ತದೆ.
  • ಫೀಲ್ಡ್​ ಅಂಪೈರ್‌ಗಳು ಪ್ರತಿ ಮ್ಯಾಚ್​ಗೆ  ₹3 ಲಕ್ಷ ರೂ ಪಡೆಯುತ್ತಾರೆ.
  •   ಟಿವಿ / ಮೂರನೇ ಅಂಪೈರ್ ಪ್ರತಿ ಮ್ಯಾಚ್​  ₹2 ಲಕ್ಷ ರೂ. ಪಡೆಯುತ್ತಾರೆ.
  • ನಾಲ್ಕನೇ ಅಂಪೈರ್ ಹಾಗೂ ಆಫ್​ ಫೀಲ್ಡ್​ ಅಂಪೈರ್​ಗಳಿಗೆ ಪ್ರತಿ ಮ್ಯಾಚ್​ಗೆ ₹2 ಲಕ್ಷ ರೂ. ನೀಡಲಾಗುತ್ತದೆ.
  • ದೇಶೀಯ ಅಂಪೈರ್​ಗಳಿಗೆ ಪ್ರತಿ ಮ್ಯಾಚ್​ಗೆ ₹60,000 ನೀಡಲಾಗುತ್ತದೆ.

ಪ್ರಮುಖ ಸೌಲಭ್ಯಗಳು ಮತ್ತು ಭತ್ಯೆಗಳು

ಕೇವಲ ಪಂದ್ಯದ ಶುಲ್ಕವಲ್ಲದೆ, ಬಿಸಿಸಿಐ ಅಂಪೈರ್‌ಗಳಿಗೆ ಇತರೆ ಸೌಲಭ್ಯಗಳನ್ನು ಸಹ ಒದಗಿಸುತ್ತದೆ.

  • ಸೀಸನಲ್ ರಿಟೈನರ್ ಫೀ: ಅನುಭವಿ ಅಂಪೈರ್‌ಗಳು ಪಂದ್ಯಗಳ ಸಂಖ್ಯೆಯನ್ನು ಲೆಕ್ಕಿಸದೆ ಸುಮಾರು ₹7.33 ಲಕ್ಷ ನಿಶ್ಚಿತ ಮೊತ್ತವನ್ನು ಪಡೆಯುತ್ತಾರೆ.
  • ದೈನಂದಿನ ಭತ್ಯೆ: ಪಂದ್ಯದ ದಿನಗಳಲ್ಲಿ ಸುಮಾರು ₹12,500 ದೈನಂದಿನ ಭತ್ಯೆ ನೀಡಲಾಗುತ್ತದೆ.
  • ಪ್ರಯಾಣ ಮತ್ತು ವಾಸ್ತವ್ಯ: ಐಪಿಎಲ್ ಸಮಯದಲ್ಲಿ ಅಂಪೈರ್‌ಗಳಿಗೆ ಉಚಿತ ವಿಮಾನ ಪ್ರಯಾಣ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಇರುತ್ತದೆ.
  • ಪ್ರಾಯೋಜಕತ್ವದ ಆದಾಯ: ಅಂಪೈರ್‌ಗಳು ಧರಿಸುವ ಶರ್ಟ್‌ಗಳ ಮೇಲಿರುವ ಲೋಗೋ ಪ್ರಾಯೋಜಕತ್ವದಿಂದಲೂ ಸೀಸನ್‌ಗೆ ಸುಮಾರು ₹10 ಲಕ್ಷದವರೆಗೆ ಹೆಚ್ಚುವರಿ ಆದಾಯ ಗಳಿಸುತ್ತಾರೆ.

ಅಂತರಾಷ್ಟ್ರೀಯ ಪಂದ್ಯಗಳಿಗೆ ಹೋಲಿಕೆ:

ಐಪಿಎಲ್‌ನಲ್ಲಿ ಸಿಗುವ ಸಂಭಾವನೆಯು ಅಂತರಾಷ್ಟ್ರೀಯ ಟಿ20 (T20I) ಪಂದ್ಯಗಳಿಗಿಂತ ಸುಮಾರು 2.5 ಪಟ್ಟು ಹೆಚ್ಚು ಎಂಬುದು ವಿಶೇಷ. ಅಂತರಾಷ್ಟ್ರೀಯ ಟಿ20 ಪಂದ್ಯಕ್ಕೆ ಒಬ್ಬ ಅಂಪೈರ್ ಸುಮಾರು ₹1.13 ಲಕ್ಷದಿಂದ ₹1.25 ಲಕ್ಷ ಗಳಿಸಿದರೆ, ಐಪಿಎಲ್‌ನಲ್ಲಿ ಇದು ₹3 ಲಕ್ಷಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: Vaibhav Suryavanshi: ಕ್ರಿಸ್​ ಗೇಲ್​ನ ಆ ಒಂದು ದಾಖಲೆಯನ್ನು ಮುರಿಯಲೇಬೇಕು..!

ಅಂದರೆ ಐಪಿಎಲ್ ಸೀಸನ್​ವೊಂದರಲ್ಲಿ ಕಾರ್ಯ ನಿರ್ವಹಿಸುವ ಪ್ರಮುಖ ಅಂಪೈರ್​ಗಳು ಸರಾಸರಿ ₹30 ಲಕ್ಷದಿಂದ ₹60 ಲಕ್ಷದವರೆಗೆ ಸಂಪಾದಿಸುತ್ತಾರೆ. ಈ ಆದಾಯವು ಅವರು ಎಷ್ಟು ಪಂದ್ಯಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಅವರ ಅನುಭವದ ಮೇಲೆ ನಿರ್ಧಾರವಾಗುತ್ತದೆ. ಹೀಗಾಗಿ ಅಂಪೈರ್​ಗಳ ಪಾಲಿಗೆ ಐಪಿಎಲ್ ವಿಶ್ವದ ಅತ್ಯಂತ ಶ್ರೀಮಂತ ಲೀಗ್.

 

 

Published On - 1:41 pm, Wed, 18 March 26

Follow Us