
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 67ನೇ ಪಂದ್ಯವು ಕೇವಲ ರನ್‌ಗಳ ಮಳೆಯಿಂದಷ್ಟೇ ಅಲ್ಲ, ಇಬ್ಬರು ಜಾಗತಿಕ ಕ್ರಿಕೆಟ್ ದಿಗ್ಗಜರ ವಾಕ್ಸಮರದಿಂದ ಇಡೀ ವಿಶ್ವದ ಗಮನ ಸೆಳೆದಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಹಾಗೂ ಪಂದ್ಯದ ಬಳಿಕ ಕೊಹ್ಲಿ ನಡೆದುಕೊಂಡು ರೀತಿ ಇದೀಗ ಚರ್ಚಾ ವಿಷಯವಾಗಿದೆ.
🚨 HEATED ARGUMENT BETWEEN VIRAT KOHLI & TRAVIS HEAD 🚨
Virat Kohli Said 🗣️, “Come on, come bowl, and then I’ll show you sixes.”
Travis Head Said🗣️, “If I come to bowl, you’ll run back to the dressing room.” (Laugh)
pic.twitter.com/RjPg7RdKRa— lndian Sports Netwrk (@IS_Netwrk29) May 22, 2026
ಎಸ್‌ಆರ್‌ಎಚ್ ತಂಡ 55 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಕೊಹ್ಲಿ ಕಡೆಗೆ ಕೈ ಚಾಚಿದರು. ಆದರೆ ತೀವ್ರ ಕೋಪದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಅವರತ್ತ ಕಣ್ಣೆತ್ತಿಯೂ ನೋಡದೆ ನೇರವಾಗಿ ಮುಂದೆ ಸಾಗಿದರು!
ಆದರೆ, ಅವರ ಹಿಂದೆಯೇ ಇದ್ದ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಕೊಹ್ಲಿ ಅತ್ಯಂತ ಆತ್ಮೀಯವಾಗಿ ಹಸ್ತಲಾಘವ ಮಾಡಿ ಕೌತುಕ ಮೂಡಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕ್ರಿಕೆಟ್‌ನಲ್ಲಿ “ಮೈದಾನದ ಜಗಳ ಪಂದ್ಯದೊಂದಿಗೆ ಮುಗಿಯಬೇಕು” ಎಂಬ ಅಲಿಖಿತ ನಿಯಮವಿದೆ. ಪಂದ್ಯ ಮುಗಿದ ಮೇಲೆ ಹಸ್ತಲಾಘವ ಮಾಡುವುದು ಪರಸ್ಪರ ಗೌರವದ ಸಂಕೇತ. ಅದನ್ನು ನಿರಾಕರಿಸುವುದು ಕ್ರೀಡಾ ಸಂಸ್ಕೃತಿಗೆ ವಿರುದ್ಧವಾಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಟ್ರಾವಿಸ್ ಹೆಡ್ ಶೇಕ್ ಹ್ಯಾಂಡ್ ನೀಡದೇ ಕ್ರೀಡಾ ಸ್ಫೂರ್ತಿಯನ್ನೇ ಮರೆತಿದ್ದಾರೆ.
ಅದರಲ್ಲೂ 2023ರ ಐಪಿಎಲ್‌ನಲ್ಲಿ ಲಕ್ನೋ ವಿರುದ್ಧದ ರೋಚಕ ಪಂದ್ಯ ಮುಗಿದ ಬಳಿಕ ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಅವರೊಂದಿಗೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದ್ದರು. ಆ ಪಂದ್ಯ ಗೆದ್ದು ಡ್ರೆಸ್ಸಿಂಗ್ ರೂಮ್‌ಗೆ ಬಂದ ನಂತರ ಕೊಹ್ಲಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು, “ನೀವು ಬೇರೆಯವರಿಗೆ ಕೊಡಲು ಸಿದ್ಧರಿದ್ದರೆ, ಅದನ್ನು ಅವರಿಂದ ತಿರುಗಿಸಿ ಇಸ್ಕೊಳ್ಳುವುದಕ್ಕೂ ಸಿದ್ಧರಾಗಿರಬೇಕು. ಇಲ್ಲದಿದ್ದರೆ ಕೊಡಲು ಹೋಗಬೇಡಿ” ಎಂದಿದ್ದರು. ಇದೇ ಡೈಲಾಗ್ ವಿರಾಟ್ ಕೊಹ್ಲಿಗೂ ಅನ್ವಯಿಸುತ್ತದೆ ಎಂಬುದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 20 ಓವರ್ಗಳಲ್ಲಿ 200 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡ 55 ರನ್‌ಗಳ ಜಯ ಸಾಧಿಸಿದೆ.