AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಆಟಗಾರ ಗಾಯಾಳು: ತಂಡದಲ್ಲಿ ಒಂದು ಬದಲಾವಣೆ ಖಚಿತ

Zimbabwe vs India, 3rd T20I: ಭಾರತ ಮತ್ತು ಝಿಂಬಾಬ್ವೆ ನಡುವಣ ಮೂರು ಮ್ಯಾಚ್​​ಗಳ ಟಿ20 ಸರಣಿಯ ಕೊನೆಯ ಪಂದ್ಯವು ಇಂದು (ಜುಲೈ 26) ನಡೆಯಲಿದೆ. ಹರಾರೆಯಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಬಹುದು. ಏಕೆಂದರೆ ಇದಕ್ಕೂ ಮುನ್ನ ನಡೆದ ಎರಡು ಪಂದ್ಯಗಳಲ್ಲಿ ಭಾರತ ತಂಡ ಅಮೋಘ ಜಯ ಸಾಧಿಸಿದ್ದು, ಇದೀಗ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.

ಟೀಮ್ ಇಂಡಿಯಾ ಆಟಗಾರ ಗಾಯಾಳು: ತಂಡದಲ್ಲಿ ಒಂದು ಬದಲಾವಣೆ ಖಚಿತ
Team IndiaImage Credit source: BCCI
ಝಾಹಿರ್ ಯೂಸುಫ್
|

Updated on: Jul 26, 2026 | 12:25 PM

Share

ಝಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾಗೆ ಅಂತಿಮ ಪಂದ್ಯಕ್ಕೂ ಮುನ್ನ ಭಾರಿ ಆಘಾತ ಎದುರಾಗಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪ್ರಿನ್ಸ್ ಯಾದವ್ ಗಾಯಗೊಂಡಿದ್ದು, ಹೀಗಾಗಿ ಅವರು ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ.

ಝಿಂಬಾಬ್ವೆ ಇನ್ನಿಂಗ್ಸ್‌ನ ತನ್ನ ಎರಡನೇ ಓವರ್‌ನ ಎರಡನೇ ಎಸೆತವನ್ನು ಎಸೆಯುವಾಗ ಪ್ರಿನ್ಸ್ ಯಾದವ್ ಅವರ ಹ್ಯಾಮ್‌ಸ್ಟ್ರಿಂಗ್ ಸ್ನಾಯು ಸೆಳೆತಕ್ಕೊಳಗಾಯಿತು. ರನ್-ಅಪ್ ಮಧ್ಯದಲ್ಲೇ ತೀವ್ರ ನೋವಿನಿಂದ ನರಳಿದ ಅವರು ತಕ್ಷಣವೇ ಮೈದಾನದಲ್ಲೇ ಕುಳಿತುಕೊಂಡರು.

ತಂಡದ ಫಿಸಿಯೋ ತಪಾಸಣೆ ನಡೆಸಿದ ಬಳಿಕ, ಅವರು ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದರು. ಹೀಗಾಗಿ ಅವರ ಓವರ್‌ನ ಬಾಕಿ ಉಳಿದ ಎಸೆತಗಳನ್ನು ಆಲ್ ರೌಂಡರ್ ಶಿವಂ ದುಬೆ ಪೂರ್ಣಗೊಳಿಸಿದ್ದರು.

ಮೈದಾನದಿಂದ ಹೊರಹೋಗುವ ಮುನ್ನ ಪ್ರಿನ್ಸ್ ಯಾದವ್ ಕೇವಲ 10 ರನ್ ನೀಡಿ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝ ಸೇರಿದಂತೆ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಎದುರಾಳಿಗಳಿಗೆ ಆರಂಭಿಕ ಆಘಾತ ನೀಡಿದ್ದರು. ಇದೀಗ ಹ್ಯಾಮ್‌ಸ್ಟ್ರಿಂಗ್ ಇಂಜುರಿ ಕಾರಣ ಮೂರನೇ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಸುಳಿವು ನೀಡಿದ ಶ್ರೇಯಸ್ ಅಯ್ಯರ್:

ದ್ವಿತೀಯ ಟಿ20 ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ದುರದೃಷ್ಟವಶಾತ್ ನಮ್ಮ ಪ್ರಮುಖ ಆಟಗಾರರೊಬ್ಬರು ಗಾಯಗೊಂಡಿದ್ದಾರೆ. ಹೀಗಾಗಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ನೀವು ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ಹೀಗಾಗಿ ಭಾನುವಾರ ನಡೆಯಲಿರುವ ಝಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಇಲ್ಲಿ ಪ್ರಿನ್ಸ್ ಯಾದವ್ ಬದಲಿಗೆ ವೇಗದ ಬೌಲಿಂಗ್ ಆಲ್​ರೌಂಡರ್ ಸೂರ್ಯಂಶ್ ಶೆಡ್ಗೆಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಸೂರ್ಯಂಶ್ ಶೆಡ್ಗೆ, ಯಶ್ ಠಾಕೂರ್, ಮಯಾಂಕ್ ಯಾದವ್.

ಇದನ್ನೂ ಓದಿ: ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

Follow Us
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!