ಐಪಿಎಲ್​ನಲ್ಲಿ ಬೌಲಿಂಗ್ ಮಾಡದಂತೆ ಗ್ರೀನ್​ಗೆ ನಿರ್ಬಂಧ..!

IPL 2026 Cameron Green: ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಆಸ್ಟ್ರೇಲಿಯನ್ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿತ್ತು. ಬೃಹತ್ ಮೊತ್ತ ವ್ಯಯಿಸಿ ಖರೀದಿಸಿದ ಗ್ರೀನ್​ಗೆ ಬೌಲಿಂಗ್ ಮಾಡದಂತೆ ನಿರ್ಬಂಧ ಹೇರಲಾಗಿದೆ.

ಐಪಿಎಲ್​ನಲ್ಲಿ ಬೌಲಿಂಗ್ ಮಾಡದಂತೆ ಗ್ರೀನ್​ಗೆ ನಿರ್ಬಂಧ..!
Cameron Green

Updated on: Mar 30, 2026 | 2:09 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬೌಲಿಂಗ್ ಮಾಡದಂತೆ​ ಕ್ಯಾಮರೋನ್ ಗ್ರೀನ್​ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಗ್ರೀನ್ ಫಿಟ್​ನೆಸ್ ಸಮಸ್ಯೆಯಿಂದ ಬಳುತ್ತಿದ್ದು, ಹೀಗಾಗಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ.

ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕ್ಯಾಮರೋನ್ ಗ್ರೀನ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿದೆ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ.

ಇದಕ್ಕೆ ಮುಖ್ಯ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾದ ಸೂಚನೆ. ಅಂದರೆ ಬೆನ್ನು ನೋವಿನಿಂದ ಬಳಲುತ್ತಿರುವ ಕ್ಯಾಮರೋನ್ ಗ್ರೀನ್​ಗೆ ಬೌಲಿಂಗ್ ಮಾಡಲು ಎನ್​ಒಸಿ ನೀಡಲಾಗಿಲ್ಲ. ಸಂಪೂರ್ಣ ಫಿಟ್​ನೆಸ್ ಸಾಧಿಸುವರೆಗೆ ಕೇವಲ ಬ್ಯಾಟರ್ ಆಗಿ ಆಡುವಂತೆ ಸೂಚಿಸಲಾಗಿದೆ.

2024ರ ಕೊನೆಯಲ್ಲಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ದೀರ್ಘಕಾಲದ ಫಿಟ್​ನೆಸ್​ ಕಾಪಾಡಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (CA) ಅವರ ಬೌಲಿಂಗ್ ಮೇಲೆ ಸದ್ಯಕ್ಕೆ ನಿರ್ಬಂಧ ಹೇರಿದೆ.

ಇದಾಗ್ಯೂ ಐಪಿಎಲ್​ನ ದ್ವಿತಿಯಾರ್ಧದ ವೇಳೆಗೆ ಅವರು ಸಂಪೂರ್ಣವಾಗಿ ಫಿಟ್​ನೆಸ್ ಸಾಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಏಪ್ರಿಲ್ ಎರಡನೇ ವಾರದ ವೇಳೆಗೆ ಅವರು ಬೌಲಿಂಗ್ ಆರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಪಂದ್ಯಗಳಲ್ಲಿ ಕ್ಯಾಮರೋನ್ ಗ್ರೀನ್ ಕೇವಲ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಅತ್ತ ಅನುಭವಿ ವೇಗಿಗಳ ಕೊರತೆ ಎದುರಿಸುತ್ತಿರುವ ಕೆಕೆಆರ್ ತಂಡಕ್ಕೆ ಗ್ರೀನ್ ಅವರ ಫಿಟ್​ನೆಸ್ ಸಮಸ್ಯೆಯು ಹಿನ್ನಡೆಯಾಗಿ ಪರಿಣಮಿಸಿರುವುದು ಸುಳ್ಳಲ್ಲ.

ಇದನ್ನೂ ಓದಿ: VIDEO: ಪಾಕಿಸ್ತಾನ್ ಸೂಪರ್ ಲೀಗ್​ನ ‘ಕಳ್ಳಾಟ’ ಬಯಲು

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ, ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್, ಹರ್ಷಿತ್ ರಾಣಾ (ಅಲಭ್ಯ).

 

Loading...
Unable to load recommendations.
Follow Us