Asia Cup 2026: ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ ಪ್ರಕಟ; ಜೆಮಿಮಾ, ಶ್ರೇಯಾಂಕ ಔಟ್..!
India Women's T20 Asia Cup 2026 squad: ಆಗಸ್ಟ್ 28 ರಿಂದ ದುಬೈನಲ್ಲಿ ನಡೆಯಲಿರುವ 2026ರ ಮಹಿಳಾ ಟಿ20 ಏಷ್ಯಾಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿದ್ದು, ಸ್ಮೃತಿ ಮಂಧನಾ ಉಪನಾಯಕಿ. ಜೆಮಿಮಾ ರೊಡ್ರಿಗಸ್ ಗಾಯದಿಂದ ಹೊರಬಿದ್ದಿದ್ದು, ಶ್ರೇಯಾಂಕ ಪಾಟೀಲ್ ಗಾಯದಿಂದ ಚೇತರಿಸಿಕೊಂಡಿಲ್ಲ. ಆಗಸ್ಟ್ 30 ರಂದು ಥೈಲ್ಯಾಂಡ್ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದ್ದು, ಸೆಪ್ಟೆಂಬರ್ 5 ರಂದು ಪಾಕಿಸ್ತಾನದ ವಿರುದ್ಧ ಪಂದ್ಯ ನಡೆಯಲಿದೆ.

ಇದೇ ಆಗಸ್ಟ್ 28 ರಿಂದ ಪ್ರಾರಂಭವಾಗಲಿರುವ 2026 ರ ಮಹಿಳಾ ಟಿ20 ಏಷ್ಯಾಕಪ್‌ಗೆ (Women’s T20 Asia Cup 2026) ಭಾರತ ಮಹಿಳಾ ತಂಡವನ್ನು (India Women’s Squad) ಪ್ರಕಟಿಸಲಾಗಿದೆ. ಎಂದಿನಂತೆ ಈ ತಂಡವನ್ನು ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಉಳಿದಂತೆ ತಂಡದಲ್ಲಿ ನಿರೀಕ್ಷಿತ ಹೆಸರುಗಳೇ ಇವೆ. ಆದರೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಗಾಯದಿಂದಾಗಿ ಈ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹಾಗೆಯೇ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ತಂಡದಲ್ಲಿ ಆಯ್ಕೆಯಾಗಿಲ್ಲ.
ತಂಡ ಹೀಗಿದೆ
ಬ್ಯಾಟಿಂಗ್ ವಿಭಾಗವನ್ನು ನೋಡುವುದಾದರೆ.. ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೆಮಿಮಾ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಅವರ ಸ್ಥಾನದಲ್ಲಿ ಭಾರತಿ ಫುಲ್‌ಮಾಲಿ ಬರಬಹುದು. 4ನೇ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಆಡಿದರೆ, ವಿಕೆಟ್‌ಕೀಪರ್ ಪಾತ್ರದಲ್ಲಿ ರಿಚಾ ಘೋಷ್ ಕಾಣಿಸಿಕೊಳ್ಳಲಿದ್ದಾರೆ.
ಆಲ್‌ರೌಂಡರ್ ಆಗಿ ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ರಾಧಾ ಯಾದವ್ ಆಡಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ರೇಣುಕಾ ಠಾಕೂರ್, ನಂದನಿ ಶರ್ಮಾ ಇದ್ದರೆ, ಸ್ಪಿನ್ನರ್‌ಗಳಾಗಿ ಶ್ರೀಚರಣಿ, ಪ್ರೇಮಾ ರಾವತ್ ತಂಡದಲ್ಲಿದ್ದಾರೆ. ಎರಡನೇ ವಿಕೆಟ್ ಕೀಪರ್ ಆಗಿ ಜಿ. ಕಮಲಿನಿ ಹಾಗೂ ಮತ್ತೊಬ್ಬ ಆರಂಭಿಕ ಆಟಗಾರ್ತಿಯಾಗಿ ಪ್ರತಿಕಾ ರಾವಲ್ ತಂಡದಲ್ಲಿದ್ದಾರೆ.
A look at #TeamIndia's squad for the upcoming ACC Women's Asia Cup 2026 🙌#ACC | #WomensAsiaCup2026 pic.twitter.com/a7fVxTjMMI
— BCCI Women (@BCCIWomen) August 14, 2026
ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಭಾರತಿ ಫುಲ್‌ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಜಿ. ಕಮಲಿನಿ (ವಿಕೆಟ್‌ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ನಂದನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.
ಏಷ್ಯಾಕಪ್ ಸಮೀಪಿಸುತ್ತಿರುವ ಬೆನ್ನಲ್ಲೇ ಗಾಯಕ್ಕೆ ತುತ್ತಾದ ಜೆಮಿಮಾ ರೊಡ್ರಿಗಸ್
ಏಷ್ಯಾಕಪ್ ಯಾವಾಗ ಪ್ರಾರಂಭ?
ಮಹಿಳೆಯರ ಏಷ್ಯಾಕಪ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ದುಬೈನಲ್ಲಿ ನಡೆಯಲಿದೆ. ಅತ್ಯಂತ ಯಶಸ್ವಿ ತಂಡವಾದ ಭಾರತ ಆಗಸ್ಟ್ 30 ರಂದು ಥೈಲ್ಯಾಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದು, ಸೆಪ್ಟೆಂಬರ್ 5 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಭಾರತ ತಂಡವು ಪಾಕಿಸ್ತಾನ, ಥೈಲ್ಯಾಂಡ್, ಹಾಂಗ್ ಕಾಂಗ್, ಚೀನಾ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದ್ದರೆ, ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಇಂಡೋನೇಷ್ಯಾ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಗಳು ಗ್ರೂಪ್ ಬಿ ಯಲ್ಲಿ ಸ್ಥಾನ ಪಡೆದಿವೆ.
ಭಾರತದ ವೇಳಾಪಟ್ಟಿ
- ಆಗಸ್ಟ್ 30: ಭಾರತ vs. ಥೈಲ್ಯಾಂಡ್
- ಸೆಪ್ಟೆಂಬರ್ 3: ಭಾರತ vs. ಹಾಂಗ್ ಕಾಂಗ್
- ಸೆಪ್ಟೆಂಬರ್ 5: ಭಾರತ vs. ಪಾಕಿಸ್ತಾನ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 pm, Fri, 14 August 26




