ಹರಾಜಿಗೂ ಮುನ್ನ ಹೈದರಾಬಾದ್‌-ಚೆನ್ನೈ ನಡುವೆ ಮೆಗಾ ಡೀಲ್; ನಾಲ್ವರು ಆಟಗಾರರ ವಿನಿಮಯ

ಐಪಿಎಲ್ 2027ರ ರಿಟೆನ್ಷನ್‌ ಗಡುವು ಹತ್ತಿರವಾಗುತ್ತಿದ್ದಂತೆ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಾಲ್ವರು ಆಟಗಾರರ ನೇರ ವಿನಿಮಯ ನಡೆದಿದೆ. ಲಿಯಾಮ್ ಲಿವಿಂಗ್‌ಸ್ಟೋನ್, ಜ್ಯಾಕ್ ಎಡ್ವರ್ಡ್ಸ್, ಖಲೀಲ್ ಅಹ್ಮದ್ ಮತ್ತು ನಾಥನ್ ಎಲಿಸ್ ತಂಡ ಬದಲಿಸಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ಹಣದ ವಹಿವಾಟು ನಡೆದಿಲ್ಲ. ವಿಶೇಷವಾಗಿ ಲಿವಿಂಗ್‌ಸ್ಟೋನ್‌ಗೆ ₹7 ಕೋಟಿ ಸಂಭಾವನೆ ನಷ್ಟವಾಗಿದೆ.

ಹರಾಜಿಗೂ ಮುನ್ನ ಹೈದರಾಬಾದ್‌-ಚೆನ್ನೈ ನಡುವೆ ಮೆಗಾ ಡೀಲ್; ನಾಲ್ವರು ಆಟಗಾರರ ವಿನಿಮಯ
Ipl 2027

Updated on: Nov 06, 2026 | 2:48 PM

ಐಪಿಎಲ್ 2027ರ ಆಟಗಾರರ ರಿಟೆನ್ಷನ್ ಪ್ರಕ್ರಿಯೆಗೆ ಗಡುವು ಹತ್ತಿರವಾಗುತ್ತಿದ್ದಂತೆ, ತಂಡಗಳ ನಡುವಿನ ಆಟಗಾರರ ವರ್ಗಾವಣೆ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾಗೂ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಮತ್ತೊಂದೆಡೆ ನಾಲ್ವರು ಆಟಗಾರರ ವಿನಿಮಯ ನಡೆದಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಈ ಮಹತ್ವದ ಒಪ್ಪಂದ ನಡೆದಿದ್ದು, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಖಲೀಲ್ ಅಹ್ಮದ್ ಅವರಂತಹ ಪ್ರಮುಖ ಆಟಗಾರರು ತಂಡ ಬದಲಿಸಿಕೊಂಡಿದ್ದಾರೆ.

ನವೆಂಬರ್ 5ರ ಗುರುವಾರ ಐಪಿಎಲ್ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ಈ ಆಟಗಾರರ ವರ್ಗಾವಣೆಯನ್ನು ಖಚಿತಪಡಿಸಲಾಗಿದೆ. ಒಪ್ಪಂದದ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ತಂಡ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜ್ಯಾಕ್ ಎಡ್ವರ್ಡ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಟ್ಟುಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಸಿಎಸ್‌ಕೆ ತಂಡ ಖಲೀಲ್ ಅಹ್ಮದ್ ಮತ್ತು ನಾಥನ್ ಎಲಿಸ್ ಅವರನ್ನು ಹೈದರಾಬಾದ್ ತಂಡಕ್ಕೆ ವರ್ಗಾಯಿಸಿದೆ. ವಿಶೇಷವೆಂದರೆ, ಈ ಒಪ್ಪಂದದಲ್ಲಿ ಯಾವುದೇ ಹಣದ ವಹಿವಾಟು ನಡೆದಿಲ್ಲ. ನಾಲ್ವರು ಆಟಗಾರರ ನೇರ ವಿನಿಮಯದ ಮೂಲಕವೇ ಒಪ್ಪಂದ ಪೂರ್ಣಗೊಂಡಿದೆ.

Loading...

ಲಿವಿಂಗ್‌ಸ್ಟೋನ್‌ಗೆ 7 ಕೋಟಿ ನಷ್ಟ

ಈ ವರ್ಗಾವಣೆಯಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟಿಂಗ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅತಿ ಹೆಚ್ಚು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಈ ವರ್ಗಾವಣೆಯಿಂದ ಅವರಿಗೆ ಭಾರಿ ಆರ್ಥಿಕ ನಷ್ಟವೂ ಉಂಟಾಗಿದೆ. ಕಳೆದ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಲಿವಿಂಗ್‌ಸ್ಟೋನ್ ಅವರನ್ನು ಬರೋಬ್ಬರಿ 13 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಇದೀಗ ಅವರನ್ನು ಕೇವಲ 6 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವರ್ಗಾಯಿಸಿದೆ.

ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಲಿವಿಂಗ್‌ಸ್ಟೋನ್ ಅವರಿಗೆ 6 ಕೋಟಿ ರೂ. ಮಾತ್ರ ಸಂಭಾವನೆ ಸಿಗಲಿದೆ. ಅಂದರೆ ಹಿಂದಿನ ಸಂಭಾವನೆಗೆ ಹೋಲಿಸಿದರೆ ಬರೋಬ್ಬರಿ 7 ಕೋಟಿ ರೂ. ಕಡಿತವಾಗಿದೆ. ಕಳೆದ ಆವೃತ್ತಿಯಲ್ಲಿ ಲಿವಿಂಗ್‌ಸ್ಟೋನ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅವರು ಆಡಿದ ಎರಡು ಪಂದ್ಯಗಳಲ್ಲಿ ಕೇವಲ 15 ರನ್ ಗಳಿಸಿದ್ದರು. ಇದೇ ಕಾರಣಕ್ಕೆ ಹೈದರಾಬಾದ್ ತಂಡ ಅವರನ್ನು ಕೈಬಿಟ್ಟಿದೆ ಎನ್ನಲಾಗಿದೆ.

ಉಳಿದವರ ಸಂಭಾವನೆಯಲ್ಲಿ ಬದಲಾವಣೆ ಇಲ್ಲ

ಇನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಕೂಡ ತಂಡ ಬದಲಿಸಿಕೊಂಡಿದ್ದಾರೆ. ಕಳೆದ ವರ್ಷ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು 3 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ಅದೇ 3 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವರ್ಗಾಯಿಸಲಾಗಿದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೆಗಾ ಹರಾಜಿನಲ್ಲಿ ಖಲೀಲ್ ಅಹ್ಮದ್ ಅವರನ್ನು 4.8 ಕೋಟಿಗೆ ಖರೀದಿಸಿತ್ತು. ಆದರೆ ಕಳೆದ ಎರಡು ಆವೃತ್ತಿಗಳಲ್ಲಿ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರದ ಹಿನ್ನೆಲೆಯಲ್ಲಿ ಅವರನ್ನು ಹೈದರಾಬಾದ್ ತಂಡಕ್ಕೆ ಅದೇ ಮೊತ್ತಕ್ಕೆ ವರ್ಗಾಯಿಸಿದೆ.

ಐಪಿಎಲ್ ರಿಟೆನ್ಷನ್ ಗಡುವು ವಿಸ್ತರಿಸಿದ ಬಿಸಿಸಿಐ: ದಿಢೀರ್ ನಿರ್ಧಾರದ ಹಿಂದಿದೆ ಬಲವಾದ ಕಾರಣ

ಇನ್ನು ಆಸ್ಟ್ರೇಲಿಯಾದ ವೇಗದ ಬೌಲರ್ ನಾಥನ್ ಎಲಿಸ್ ಅವರ ವರ್ಗಾವಣೆಯೂ ಗಮನ ಸೆಳೆದಿದೆ. ಚೆನ್ನೈ ತಂಡ ಅವರನ್ನು 2 ಕೋಟಿ ಮೂಲ ಬೆಲೆಗೆ ಹೈದರಾಬಾದ್‌ಗೆ ಬಿಟ್ಟುಕೊಟ್ಟಿದೆ. ಈ ಮೂಲಕ ಐಪಿಎಲ್ 2027ರ ಸೀಸನ್‌ಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಆಟಗಾರರ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us