AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಆರ್​ಸಿಬಿ ಆಟಗಾರನ ಹಿಂದೆ ಬಿದ್ದ ಸಿಎಸ್​ಕೆ; ಐಪಿಎಲ್‌ನಲ್ಲಿ ಬಿಗ್ ಟ್ರೇಡಿಂಗ್ ಸುದ್ದಿ

ಐಪಿಎಲ್ 2027ರ ಹರಾಜಿಗೂ ಮುನ್ನ ಆಟಗಾರರ ಟ್ರೇಡಿಂಗ್ ಚಟುವಟಿಕೆ ಜೋರಾಗಿದೆ. ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಸನ್‌ರೈಸರ್ಸ್ ಹೈದರಾಬಾದ್ ಜೊತೆ ಮಾತುಕತೆ ನಡೆಸುತ್ತಿದೆ. ಕಳೆದ ಐಪಿಎಲ್‌ನಲ್ಲಿ ಲಿವಿಂಗ್‌ಸ್ಟೋನ್ ಪ್ರದರ್ಶನ ಕಳಪೆಯಾಗಿದ್ದರಿಂದ ಹೈದರಾಬಾದ್ ಅವರ ಭವಿಷ್ಯದ ಬಗ್ಗೆ ಚಿಂತಿಸುತ್ತಿದೆ. ಖಲೀಲ್ ಅಹ್ಮದ್ ಹೆಸರೂ ಟ್ರೇಡಿಂಗ್‌ನಲ್ಲಿ ಕೇಳಿಬರುತ್ತಿದೆ.

ಮಾಜಿ ಆರ್​ಸಿಬಿ ಆಟಗಾರನ ಹಿಂದೆ ಬಿದ್ದ ಸಿಎಸ್​ಕೆ; ಐಪಿಎಲ್‌ನಲ್ಲಿ ಬಿಗ್ ಟ್ರೇಡಿಂಗ್ ಸುದ್ದಿ
ಆರ್​ಸಿಬಿ ತಂಡ
ಪೃಥ್ವಿಶಂಕರ
|

Updated on: Nov 03, 2026 | 9:47 PM

Share

ಐಪಿಎಲ್ 2027ರ ಹರಾಜಿಗೂ ಮುನ್ನ ಫ್ರಾಂಚೈಸಿಗಳ ನಡುವೆ ಆಟಗಾರರ ಟ್ರೇಡಿಂಗ್ ಚಟುವಟಿಕೆ ಜೋರಾಗಿದೆ. ಹಾರ್ದಿಕ್ ಪಾಂಡ್ಯ ಅವರ ಸಂಭಾವ್ಯ ಟ್ರೇಡಿಂಗ್ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಹೆಸರು ಕೂಡ ಇದೀಗ ಮುನ್ನೆಲೆಗೆ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಿವಿಂಗ್‌ಸ್ಟೋನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿದ್ದು, ಈ ಸಂಬಂಧ ಸನ್‌ರೈಸರ್ಸ್ ಹೈದರಾಬಾದ್ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಹೈದರಾಬಾದ್ ಫ್ರಾಂಚೈಸಿ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಲಿವಿಂಗ್‌ಸ್ಟೋನ್‌ಗಾಗಿ ಸಿಎಸ್‌ಕೆ ಆಸಕ್ತಿ

ಕ್ರಿಕ್‌ಬಜ್ ವರದಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಟ್ರೇಡಿಂಗ್ ಮೂಲಕ ತನ್ನ ತಂಡಕ್ಕೆ ಕರೆತರುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಕಳೆದ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಈ ಇಂಗ್ಲೆಂಡ್ ಆಲ್‌ರೌಂಡರ್ ಅವರನ್ನು ಬರೋಬ್ಬರಿ 13 ಕೋಟಿ ನೀಡಿ ಖರೀದಿಸಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಹೀಗಾಗಿ ಇದೀಗ ಅವರ ಭವಿಷ್ಯದ ಬಗ್ಗೆ ಹೈದರಾಬಾದ್ ತಂಡ ಚಿಂತನೆ ನಡೆಸುತ್ತಿದೆ. ಇದೇ ವೇಳೆ ಉತ್ತರ ಭಾರತದ ಮತ್ತೊಂದು ಫ್ರಾಂಚೈಸಿ ಕೂಡ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ. ಆದರೆ ಸದ್ಯಕ್ಕೆ ಈ ಸಂಬಂಧದ ಮಾತುಕತೆಗಳು ಆರಂಭಿಕ ಹಂತದಲ್ಲಿವೆ.

ಕಳೆದ ಐಪಿಎಲ್‌ನಲ್ಲಿ ಲಿವಿಂಗ್‌ಸ್ಟೋನ್ ಫ್ಲಾಪ್

33 ವರ್ಷದ ಲಿಯಾಮ್ ಲಿವಿಂಗ್‌ಸ್ಟೋನ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಸಂಪೂರ್ಣ ನಿರಾಸೆ ಮೂಡಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ಪರ ಕೇವಲ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು, ಒಟ್ಟು 15 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಕಳಪೆ ಪ್ರದರ್ಶನದ ಪರಿಣಾಮವಾಗಿ ಅವರು ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಳೆದುಕೊಂಡರು. ಬಳಿಕ ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಅವರನ್ನು ಬಳಸಿಕೊಳ್ಳುವುದನ್ನು ತಂಡ ನಿಲ್ಲಿಸಿತ್ತು.

ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಬಿಡುಗಡೆಯಾದ ಬಳಿಕ ಹೈದರಾಬಾದ್ ಫ್ರಾಂಚೈಸಿ ಅವರನ್ನು ಖರೀದಿಸಿತ್ತು. ಅದಕ್ಕೂ ಮುನ್ನ ಆರ್‌ಸಿಬಿ ಮೆಗಾ ಹರಾಜಿನಲ್ಲಿ ಲಿವಿಂಗ್‌ಸ್ಟೋನ್ ಅವರನ್ನು 8.75 ಕೋಟಿಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫಲರಾದ ಕಾರಣ ಇದೀಗ ಮತ್ತೊಂದು ತಂಡಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಎದುರಾಗಿದೆ.

ಖಲೀಲ್ ಅಹ್ಮದ್ ಹೆಸರು ಕೂಡ ಚರ್ಚೆಯಲ್ಲಿ

ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಪಡೆಯಲು ಸಿಎಸ್‌ಕೆ ತಂಡವು ಹೈದರಾಬಾದ್‌ಗೆ ಯಾವ ಆಟಗಾರನನ್ನು ಬಿಟ್ಟುಕೊಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಭಾವ್ಯ ಒಪ್ಪಂದದಲ್ಲಿ ಚೆನ್ನೈ ತಂಡದ ವೇಗದ ಬೌಲರ್ ಖಲೀಲ್ ಅಹ್ಮದ್ ಅವರ ಹೆಸರೂ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇತ್ತೀಚೆಗಷ್ಟೇ ಸನ್‌ರೈಸರ್ಸ್ ಹೈದರಾಬಾದ್ ಅನುಭವಿ ಎಡಗೈ ವೇಗಿ ಟಿ. ನಟರಾಜನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದರಿಂದ ಖಲೀಲ್ ಅಹ್ಮದ್ ಅವರನ್ನು ಟ್ರೇಡ್ ಮಾಡುವ ಸಾಧ್ಯತೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್