AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ 2, 17, 23: ಐಪಿಎಲ್ ಮಿನಿ ಹರಾಜಿನ ಬಿಗ್ ಅಪ್​ಡೇಟ್

ವಿಶ್ವದ ಅತ್ಯಂತ ಜನಪ್ರಿಯ ಟಿ20 ಲೀಗ್‌ ಆದ ಐಪಿಎಲ್ ಹರಾಜು ಪ್ರಕ್ರಿಯೆಗಾಗಿ ಇಡೀ ಕ್ರಿಕೆಟ್ ಲೋಕವೇ ಕಾತರದಿಂದ ಕಾಯುತ್ತಿದೆ. ಅದಕ್ಕೂ, ನಡೆಯಲಿರುವ ಮಿನಿ ಆಕ್ಷನ್ ಪ್ರಕ್ರಿಯೆಗಾಗಿ ಬಿಸಿಸಿಐ ದಿನಾಂಕಗಳನ್ನು ನಿಗದಿ ಮಾಡಿದೆ.  ಈ ಮೂಲಕ ಎಲ್ಲಾ 10 ಫ್ರಾಂಚೈಸಿಗಳಿಗೂ ಡಿಸೆಂಬರ್ 16 ರಂದು ನಡೆಯಲಿರುವ ಹರಾಜಿಗಾಗಿ ಸಕಲ ರೀತಿಯಲ್ಲೂ ಸಜ್ಜಾಗುವಂತೆ ಸೂಚನೆ ನೀಡಲಾಗಿದೆ.

ನವೆಂಬರ್ 2, 17, 23: ಐಪಿಎಲ್ ಮಿನಿ ಹರಾಜಿನ ಬಿಗ್ ಅಪ್​ಡೇಟ್
Ipl 2027 Image Credit source: IPL
ಝಾಹಿರ್ ಯೂಸುಫ್
|

Updated on: Nov 03, 2026 | 10:04 AM

Share

ಐಪಿಎಲ್ 2027ರ ಮಿನಿ ಹರಾಜಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿರುವ ಈ ಹರಾಜಿಗೂ ಮುನ್ನ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಹಾಗೂ ಹರಾಜು ನೋಂದಣಿಗಳು ನಡೆಯಲಿದ್ದು, ಇದಕ್ಕಾಗಿ ಬಿಸಿಸಿಐ ಪ್ರಮುಖ ದಿನಾಂಕಗಳನ್ನು ಪ್ರಕಟಿಸಿದೆ. ಈ ಮಹತ್ವದ ದಿನಾಂಕಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ರಿಟೆನ್ಷನ್ ಗಡುವು ವಿಸ್ತರಣೆ:

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಏಕದಿನ ಪಂದ್ಯದ ಹಿನ್ನೆಲೆಯಲ್ಲಿ, ಫ್ರಾಂಚೈಸಿಗಳು ತಮ್ಮ ಅಂತಿಮ ರಿಟೇನ್ ಮತ್ತು ರಿಲೀಸ್ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನೀಡಲಾಗಿದ್ದ ಗಡುವನ್ನು ಬಿಸಿಸಿಐ ನವೆಂಬರ್ 17ರವರೆಗೆ ವಿಸ್ತರಿಸಿದೆ. ಇದಕ್ಕೂ ಮುನ್ನ ನವೆಂಬರ್ 15 ಕೊನೆಯ ದಿನಾಂಕವಾಗಿತ್ತು. ಬಿಸಿಸಿಐನ ಈ ನಿರ್ಧಾರದಿಂದಾಗಿ ಫ್ರಾಂಚೈಸಿಗಳಿಗೆ ತಮ್ಮ ತಂಡದ ಕಾರ್ಯತಂತ್ರ ರೂಪಿಸಲು ಮತ್ತಷ್ಟು ಕಾಲಾವಕಾಶ ಸಿಕ್ಕಂತಾಗಿದೆ.

ಹಾಗೆಯೇ ಐಪಿಎಲ್ ಹರಾಜಿಗಾಗಿ ಆಟಗಾರರ ಹೆಸರು ನೋಂದಣಿ ಪ್ರಕ್ರಿಯೆಯ ಆರಂಭ ಹಾಗೂ ಕೊನೆಯ ದಿನಾಂಕಗಳನ್ನು ಬಿಸಿಸಿಐ ಪ್ರಕಟಿಸಿದೆ. ಇದರೊಂದಿಗೆ, ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರ ಶಾರ್ಟ್‌ಲಿಸ್ಟ್ (ಆದ್ಯತೆಯ ಪಟ್ಟಿ) ಸಲ್ಲಿಸಲು ಫ್ರಾಂಚೈಸಿಗಳಿಗೆ ನೀಡಲಾಗಿರುವ ಕೊನೆಯ ದಿನಾಂಕವನ್ನೂ ಘೋಷಿಸಲಾಗಿದೆ. ಬಿಸಿಸಿಐ ಬಿಡುಗಡೆ ಮಾಡಿರುವ ಈ ಎಲ್ಲಾ ಪ್ರಮುಖ ದಿನಾಂಕಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ…

  • ನವೆಂಬರ್ 2: ಆಟಗಾರರ ನೋಂದಣಿ ಪ್ರಕ್ರಿಯೆ ಆರಂಭ.
  • ನವೆಂಬರ್ 17: ಫ್ರಾಂಚೈಸಿಗಳು ಅಂತಿಮ ರಿಟೆನ್ಷನ್ ಪಟ್ಟಿ ಸಲ್ಲಿಸಲು ಕೊನೆಯ ದಿನ.
  • ನವೆಂಬರ್ 23: ಆಟಗಾರರ ನೋಂದಣಿಗೆ ಕೊನೆಯ ದಿನಾಂಕ.
  • ಡಿಸೆಂಬರ್ 1: ಫ್ರಾಂಚೈಸಿಗಳು ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರ ಆದ್ಯತಾ ಪಟ್ಟಿ ಸಲ್ಲಿಸುವ ಗಡುವು.
  • ಡಿಸೆಂಬರ್ 3: ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಅಂತಿಮ ಪಟ್ಟಿ ಬಿಡುಗಡೆ.
  • ಡಿಸೆಂಬರ್ 16: ಐಪಿಎಲ್ 2027ರ ಮಿನಿ ಹರಾಜು ಪ್ರಕ್ರಿಯೆ.

ಹರಾಜಿಗೂ ಮುನ್ನ ನಡೆದ ಪ್ರಮುಖ ಆಟಗಾರರ ಟ್ರೇಡ್:

ರಿಟೆನ್ಷನ್ ಗಡುವು ಮುಗಿಯುವ ಮುನ್ನವೇ ಕೆಲವು ಫ್ರಾಂಚೈಸಿಗಳು ಆಟಗಾರರ ದೊಡ್ಡ ಟ್ರೇಡ್‌ಗಳನ್ನು ಮಾಡಿಕೊಂಡಿವೆ. ಹೀಗೆ ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಸೇರ್ಪಡೆಯಾದ ಆಟಗಾರರೆಂದರೆ…

  • ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ.
  • ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕುಲ್ದೀಪ್ ಯಾದವ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
  • ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಟಿ. ನಟರಾಜನ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ವಾಪಸಾಗಿದ್ದಾರೆ.
  • ಸನ್​ರೈಸರ್ಸ್​ ಹೈದಾರಾಬಾದ್ ತಂಡದಲ್ಲಿದ್ದ ಝೀಶನ್ ಅನ್ಸಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.

ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ರಿಷಭ್ ಪಂತ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಸ್ವಾಪ್ ಡೀಲ್ (ಅದಲು-ಬದಲು) ಮಾಡಿಕೊಂಡಿವೆ. ಅದೇ ರೀತಿ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಲೆಗ್ ಸ್ಪಿನ್ನರ್ ಝೀಶನ್ ಅನ್ಸಾರಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಟ್ಟುಕೊಡುವ ಮೂಲಕ, ತಮಿಳುನಾಡಿನ ವೇಗಿ ಟಿ. ನಟರಾಜನ್ ಅವರನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: 5 ಸಿಕ್ಸ್, 15 ಫೋರ್​: ವಿಸ್ಫೋಟಕ ಸೆಂಚುರಿ ಸಿಡಿಸಿದ ಯಶಸ್ವಿ ಜೈಸ್ವಾಲ್

ಒಟ್ಟಿನಲ್ಲಿ ಬಿಸಿಸಿಐ ಹರಾಜು, ರಿಟೆನ್ಷನ್ ಹಾಗೂ ಆಟಗಾರರ ಶಾರ್ಟ್‌ಲಿಸ್ಟ್‌ಗೆ ಅಧಿಕೃತ ದಿನಾಂಕಗಳನ್ನು ನಿಗದಿ ಮಾಡಿರುವುದರಿಂದ ಐಪಿಎಲ್ ಅಂಗಳದಲ್ಲಿ ಈಗಿನಿಂದಲೇ ಕಾವು ಏರತೊಡಗಿದೆ. ಈ ಮಿನಿ ಹರಾಜಿನಲ್ಲಿ ಸರಿಯಾದ ಆಟಗಾರರನ್ನು ಸೆಳೆಯಲು ಎಲ್ಲಾ ಫ್ರಾಂಚೈಸಿಗಳು ತೆರೆಮರೆಯಲ್ಲಿ ಭರ್ಜರಿ ರಣತಂತ್ರ ರೂಪಿಸುತ್ತಿವೆ. ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿರುವ ಈ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡ ಬಲಿಷ್ಠವಾಗಿ ಹೊರಹೊಮ್ಮಲಿದೆ ಮತ್ತು ಯಾವ ಆಟಗಾರರು ಕೋಟಿ ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More