ಅವಮಾನಕರ ಸೋಲಿನ ಆಘಾತದಲ್ಲಿರುವ ಪ್ಯಾಟ್ ಕಮ್ಮಿನ್ಸ್‌ಗೆ ಮತ್ತೊಂದು ಶಾಕ್ ನೀಡಿದ ಬಿಸಿಸಿಐ

Pat Cummins Fined ₹12 Lakh: ಗುಜರಾತ್ ಟೈಟಾನ್ಸ್ ವಿರುದ್ಧ ಹೀನಾಯ ಸೋಲು ಕಂಡ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಬಿಸಿಸಿಐ ದಂಡ ವಿಧಿಸಿದೆ. ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಕಮ್ಮಿನ್ಸ್ 12 ಲಕ್ಷ ರೂ. ದಂಡ ತೆರಬೇಕಾಗಿದೆ. ಕಮ್ಮಿನ್ಸ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದು, ಈ ತಪ್ಪಿಗೆ ಈ ಹಿಂದೆ ಹಲವು ನಾಯಕರು ದಂಡ ತೆತ್ತಿದ್ದಾರೆ.

ಅವಮಾನಕರ ಸೋಲಿನ ಆಘಾತದಲ್ಲಿರುವ ಪ್ಯಾಟ್ ಕಮ್ಮಿನ್ಸ್‌ಗೆ ಮತ್ತೊಂದು ಶಾಕ್ ನೀಡಿದ ಬಿಸಿಸಿಐ
Pat Cummins

Updated on: May 13, 2026 | 4:13 PM

ಗುಜರಾತ್ ಟೈಟಾನ್ಸ್ (GT) ವಿರುದ್ಧ ಎರಡಂಕಿ ಮೊತ್ತಕ್ಕೆ ಅಂದರೆ ಕೇವಲ 86 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಸೋಲಿನ ಅವಮಾನಕ್ಕೊಳಗಾಗಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ (pat cummins) ಇದೀಗ ಬಿಸಿಸಿಐ (BCCI) ಕೂಡ ಬಿಗ್ ಶಾಕ್ ನೀಡಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಿಗಧಿತ ಸಮಯಕ್ಕೆ ಓವರ್ ಮುಗಿಸದ ಸನ್​ರೈಸಸ್ ತಂಡದ ನಾಯಕ​ ಪ್ಯಾಟ್ ಕಮ್ಮಿನ್ಸ್‌ಗೆ ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ಅಂದರೆ ಕಮ್ಮಿನ್ಸ್ 12 ಲಕ್ಷ ರೂ ದಂಡ ಕಟ್ಟಬೇಕಾಗಿದೆ. ಆದಾಗ್ಯೂ, ಐಪಿಎಲ್ 2026 ರಲ್ಲಿ ಕಮ್ಮಿನ್ಸ್​ಗೂ ಮೊದಲು ಹಲವು ತಂಡಗಳ ನಾಯಕರು ಈ ತಪ್ಪಗೆ ದಂಡ ತೆತ್ತಿದ್ದಾರೆ. ಅದರಲ್ಲೂ ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಎರಡು ಬಾರಿ ನಿಧಾನಗತಿಯ ಓವರ್ ದರ ಉಲ್ಲಂಘನೆಗಾಗಿ ದಂಡ ಕಟ್ಟಿದ್ದಾರೆ.

ಕಮ್ಮಿನ್ಸ್‌ಗೆ 12 ಲಕ್ಷ ರೂ. ದಂಡ

ಪ್ಯಾಟ್ ಕಮ್ಮಿನ್ಸ್ ಮೊದಲ ಬಾರಿಗೆ ಈ ಶಿಕ್ಷೆಗೆ ಗುರಿಯಾಗಿರುವುದರಿಂದ ಅವರಿಗೆ 12 ಲಕ್ಷ ರೂಪಾಯಿಗಳನ್ನು ದಂಡವಾಗಿ ವಿಧಿಸಲಾಗಿದೆ. ನಿಧಾನಗತಿಯ ಓವರ್ ದರ ಉಲ್ಲಂಘನೆಯು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಉಲ್ಲಂಘನೆಯಾಗಿದೆ, ಇದಕ್ಕಾಗಿ ಕನಿಷ್ಠ ದಂಡ 12 ಲಕ್ಷ ರೂಪಾಯಿಗಳಾಗಿದೆ. ಇನ್ನು ಈ ಶಿಕ್ಷೆಗೆ ಗುರಿಯಾದವರಲ್ಲಿ ಪ್ಯಾಟ್ ಕಮ್ಮಿನ್ಸ್​ಗೂ ಮೊದಲು ಶ್ರೇಯಸ್ ಅಯ್ಯರ್, ಶುಭ್​ಮನ್ ಗಿಲ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ರುತುರಾಜ್ ಗಾಯಕ್ವಾಡ್ ಮತ್ತು ಅಕ್ಷರ್ ಪಟೇಲ್ ಕೂಡ ಸೇರಿದ್ದಾರೆ.

ಸನ್‌ರೈಸರ್ಸ್​ಗೆ ಹೀನಾಯ ಸೋಲು

ಪಂದ್ಯದ ವಿಚಾರಕ್ಕೆ ಬರುವುದಾದರೆ.. ಮೇಲೆ ಹೇಳಿದಂತೆ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 82 ರನ್‌ಗಳ ಸೋಲು ಅನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಬಲಿಷ್ಠ ಇನ್ನಿಂಗ್ಸ್‌ನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 168 ರನ್ ಗಳಿಸಿತು. ಗುಜರಾತ್ ಪರ ಸುದರ್ಶನ್ 61 ರನ್ ಗಳಿಸಿದರೆ, ಸುಂದರ್ 52 ರನ್ ಗಳಿಸಿದರು.

IPL 2026: ಎಲ್ಲವೂ ಬಂದ್; ಬಿಸಿಸಿಐ ಎಚ್ಚೆರಿಕೆಯ ಬಳಿಕ ಎಚ್ಚೆತ್ತ ಫ್ರಾಂಚೈಸಿಗಳು

ಇದಕ್ಕೆ ಉತ್ತರವಾಗಿ 169 ರನ್​ಗಳ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಗುಜರಾತ್ ಟೈಟಾನ್ಸ್‌ನ ಅದ್ಭುತ ಬೌಲಿಂಗ್‌ನಿಂದ 86 ರನ್‌ಗಳಿಗೆ ಆಲೌಟ್ ಆಯಿತು. ಸನ್‌ರೈಸರ್ಸ್ ತಂಡವು 20 ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾಗಿ, ಕೇವಲ 14.5 ಓವರ್‌ಗಳಲ್ಲಿ ಆಲೌಟ್ ಆಯಿತು. ಗುಜರಾತ್ ಪರ ರಬಾಡ ಮತ್ತು ಹೋಲ್ಡರ್ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Wed, 13 May 26

Follow Us