ವೈಭವ್ ಸೂರ್ಯವಂಶಿ ಕಟ್ಟಿ ಹಾಕಲು ಇಂದು ಕಣಕ್ಕೆ ಇಳಿಯುತ್ತಾರಾ ಹೇಜಲ್​ವುಡ್?

ಇಂದು (ಏಪ್ರಿಲ್ 10) RCB ಮತ್ತು RR ನಡುವೆ IPL ಪಂದ್ಯ ನಡೆಯಲಿದೆ. ಎರಡೂ ತಂಡಗಳು ಸಮಬಲದಲ್ಲಿವೆ. ಆದರೆ, ಜೋಶ್ ಹೇಜಲ್‌ವುಡ್ ಆಡುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ತಂಡದ ನಿರ್ಧಾರ ಅನಿಶ್ಚಿತ. ಇನ್ನು, ಗುವಾಹಟಿಯಲ್ಲಿ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆಗಳಿದ್ದು, ಆರ್​ಸಿಬಿಗೆ ಆರ್​ಆರ್​ನ ಓಪನರ್‌ಗಳನ್ನು ಕಟ್ಟಿಹಾಕುವ ಸವಾಲಿದೆ.

ವೈಭವ್ ಸೂರ್ಯವಂಶಿ ಕಟ್ಟಿ ಹಾಕಲು ಇಂದು ಕಣಕ್ಕೆ ಇಳಿಯುತ್ತಾರಾ ಹೇಜಲ್​ವುಡ್?
ಹೇಜಲ್​​ವುಡ್​-ಸೂರ್ಯವಂಶಿ

Updated on: Apr 10, 2026 | 11:25 AM

ಐಪಿಎಲ್​​ನ (IPL) ಈ ಸೀಸನ್ ಅಲ್ಲಿ ಆರ್​​​ಸಿಬಿ ಮೊದಲ ಎರಡು ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳು ಸಮಬಲದಲ್ಲಿವೆ ಎಂದರೂ ತಪ್ಪಾಗಲಾರದು. ಇಂದು (ಏಪ್ರಿಲ್ 10) ಎರಡೂ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪೈಕಿ ಗೆಲವು ಯಾರ ಪಾಲಿಗೆ ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ. ಹೀಗಿರುವಾಗಲೇ ಜೋಶ್ ಹೇಜಲ್​​ವುಡ್ ಕಣಕ್ಕೆ ಇಳಿಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಆರ್​​ಸಿಬಿಯಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ಉತ್ತಮ ರೀತಿಯಲ್ಲಿ ಇದೆ. ಹೇಜಲ್​​ವುಡ್ ಅಲಭ್ಯತೆಯಲ್ಲಿ ಜೇಕಬ್ ಡಫ್ಫಿ ಅವರು ಉತ್ತಮ ಬೌಲಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಈ ಮೂಲಕ ಹೇಜಲ್​​ವುಡ್​ ಇಲ್ಲ ಎಂಬ ಕೊರುಗನ್ನು ನೀಗಿಸುತ್ತಿದ್ದಾರೆ. ಈ ಮಧ್ಯೆ ಹೆಜಲ್​​ವುಡ್ ಕೂಡ ಫೀಲ್ಡ್​​ಗೆ ಇಳಿಯಲಿ ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಅದು ಈಡೇರುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ಹೇಜಲ್​​ವುಡ್ ಅವರು ಫಿಟ್ನೆಸ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ ಆಗುವ ಪ್ರಯತ್ನದಲ್ಲಿ ಇದ್ದಾರೆ. ಒಂದೊಮ್ಮೆ ಫಿಟ್ನೆಸ್ ಇಲ್ಲದೆ ಕಣಕ್ಕೆ ಇಳಿದರೆ ಅದು ದೀರ್ಘ ಕಾಲದ ಗಾಯಕ್ಕೆ ಒಳಗಾಗುವಂತೆ ಮಾಡುವು ಭಯ ಕಾಡಿದೆ. ಹೀಗಾಗಿ, ಸಂಪೂರ್ಣ ಫಿಟ್ ಆದಂತೂ ಅವರನ್ನು ಇಳಿಸುವ ಆಲೋಚನೆ ತಂಡಕ್ಕೆ ಇಲ್ಲ. ಈ ಮೊದಲು ಚೆನ್ನೈ ವಿರುದ್ಧದ ಪಂದ್ಯದಲ್ಲಿ ನೆಟ್ಸ್​​ನಲ್ಲಿ ಹೇಜಲ್​​ವುಡ್​ ಕಾಣಿಸಿಕೊಂಡಿದ್ದರು. ಹೀಗಾಗಿ, ಅವರು ಫಿಟ್ನೆಸ್​​ಗೆ ಮರಳಿರಬಹುದು ಎಂದು ಊಹಿಸಲಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಮಾಜಿ ನಾಯಕನಿಗೆ ಗೆಲುವನ್ನು ಅರ್ಪಿಸಿದ LSG ಫಿನಿಶರ್ ಮುಕುಲ್ ಚೌಧರಿ

ಇಂದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ಆರ್​​ಸಿಬಿ vs ಆರ್​​ಆರ್​ ಪಂದ್ಯಕ್ಕೆ ಮಳೆ ಬರುವ ಸೂಚನೆ ಎಂದು ಹೇಳಲಾಗುತ್ತಾ ಇದೆ. ಸಂಜೆ ವೇಳೆಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಆರ್​​ಆರ್​ ತಂಡದ ಓಪನಿಂಗ್ ಪೇರ್ ಎನಿಸಿಕೊಂಡಿರುವ ವೈಭವ್ ಸೈರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಕಟ್ಟಿ ಹಾಕುವ ಚಾಲೆಂಜ್ ಆರ್​​ಸಿಬಿಗೆ ಇದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us