AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾ ಮಾಜಿ ನಾಯಕನಿಗೆ ಗೆಲುವನ್ನು ಅರ್ಪಿಸಿದ LSG ಫಿನಿಶರ್ ಮುಕುಲ್ ಚೌಧರಿ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ, ಮುಕುಲ್ ಚೌಧರಿ 27 ಎಸೆತಗಳಲ್ಲಿ 54 ರನ್ ಸಿಡಿಸಿ ಲಖನೌ ಸೂಪರ್ ಜಯಂಟ್ಸ್‌ಗೆ ರೋಚಕ ಗೆಲುವು ತಂದುಕೊಟ್ಟರು. ಎಂ.ಎಸ್. ಧೋನಿ ಅವರ ಆಟದಿಂದ ಸ್ಫೂರ್ತಿ ಪಡೆದ ಮುಕುಲ್, ತಮ್ಮ ವಿಜಯವನ್ನು ಧೋನಿಗೆ ಅರ್ಪಿಸಿದರು.

ಟೀಂ ಇಂಡಿಯಾ ಮಾಜಿ ನಾಯಕನಿಗೆ ಗೆಲುವನ್ನು ಅರ್ಪಿಸಿದ LSG ಫಿನಿಶರ್ ಮುಕುಲ್ ಚೌಧರಿ
ಎಲ್​​ಎಸ್​​ಜಿ
ರಾಜೇಶ್ ದುಗ್ಗುಮನೆ
|

Updated on: Apr 10, 2026 | 10:32 AM

Share

ಕೋಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತ ಕೊನೆಯ ಕ್ಷಣದಲ್ಲಿ ಸೋತಿದೆ. ಎಲ್​​ಎಸ್​​ಜಿ ಪರ ಮುಕುಲ್ ಚೌಧರಿ ಅವರು 27 ಬಾಲ್​​ಗಳಿಗೆ 54 ರನ್ ಪೇರಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಅದ್ಭುತ ಆಟಕ್ಕೆ ಎಲ್ಲರೂ ತಲೆ ಬಾಗಿದ್ದಾರೆ. ಅವರು ತಮ್ಮ ಗೆಲುವನ್ನು ವಿಶೇಷ ವ್ಯಕ್ತಿಗೆ ಅರ್ಪಿಸಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ ಅಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

182 ರನ್​​ಗಳ ಬೃಹತ್ ಮೊತ್ತವನ್ನು ಎಲ್​​ಎಸ್​ಜಿ ಬೆನ್ನು ಹತ್ತಿತು. ಉತ್ತಮ ಆರಂಭ ಕಂಡರೂ ನಂತರ ಮುಗ್ಗರಿಸಿತು. ಎಲ್​​ಎಸ್​​ಜಿ 16 ಓವರ್​​ಗೆ 128 ರನ್​​ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಪಂದ್ಯ ಕೈ ತಪ್ಪಿತು ಎನ್ನುವಾಗ ಜಾಗರೂಕ ಆಟ ಆಡಲು ಆರಂಭಿಸಿದ್ದು ಮುಕುಲ್. 18ನೇ ಓವರ್​​ನಲ್ಲಿ 13 ರನ್​​, 19ನೇ ಓವರ್​​ನಲ್ಲಿ 16 ರನ್ ಬಾರಿಸಿದರು. ಕೊನೆಯ ಓವರ್​​ನಲ್ಲಿ ಗೆಲುವಿಗೆ ಬೇಕಾಗಿದ್ದು 14 ರನ್​​ಗಳು.

ಆವೇಶ್ ಮೊದಲು ಬಾಲ್ ಸಿಂಗಲ್ ತೆಗೆದರು. ನಂತರ ಬ್ಯಾಟಿಂಗ್​​ಗೆ ಇಳಿದ ಮುಕುಲ್ ಒಂದು ಸಿಕ್ಸ್ ಬಾರಿಸಿದರು. ನಂತರ ಎರಡು ಬಾಲ್ ಡಾಟ್ ಆಯಿತು. ಐದನೇ ಬಾಲ್​​ಗೆ ಆರು ರನ್​​ಗಳು ಬಂದವು. ಕೊನೆಯ ಬಾಲ್ ಸಿಂಗಲ್ ತೆಗೆಯುವ ಮೂಲಕ ಎಲ್​​ಎಸ್​ಜಿ ಗೆಲುವಿನ ದಡ ಸೇರಿತು.

‘ಎಂಎಸ್ ಧೋನಿ ಪಂದ್ಯಗಳನ್ನು ಹೇಗೆ ಫಿನಿಶ್ ಮಾಡುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೆ. ನಾನು ಅದೇ ರೀತಿಯಲ್ಲಿ ಬ್ಯಾಟ್ ಮಾಡಿದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಅವರು ನನಗೆ ಸ್ಫೂರ್ತಿ ನೀಡಿದರು. ನಾನು ಗೆಲ್ಲಿಸಿಕೊಟ್ಟೆ, ಮತ್ತು ಆ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ’ ಎಂದರು.

‘ನನ್ನ ದೇಹ ಹೆಚ್ಚು ಶಕ್ತಿಯನ್ನು ಹೊಂದಿದೆ. ಆದರೆ ನಾನು ದಿನವೂ ಅಭ್ಯಾಸ ಮಾಡುತ್ತೇನೆ. ಪ್ರತಿದಿನ 100ರಿಂದ 150 ಸಿಕ್ಸರ್‌ಗಳನ್ನು ಹೊಡೆಯುವುದನ್ನು ಅಭ್ಯಾಸ ಮಾಡಿದರೆ ಆ ಕಲೆ ಬೆಳೆಯುತ್ತದೆ. ಕಳೆದ 5-6 ತಿಂಗಳುಗಳಿಂದ ನಾನು ಅದರ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುವ ಬ್ಯಾಟರ್ ಮುಕುಲ್ ಚೌಧರಿ ಎದುರು ಸೋತ ಕೆಕೆಆರ್ ಮುಕುಲ್ ಅವರನ್ನು ತಂಡಕ್ಕೆ ಹೇಗೆ ಆಯ್ಕೆ ಮಾಡಲಾಯಿತು ಎಂಬ ವಿಷಯವನ್ನು ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ರಿವೀಲ್ ಮಾಡಿದ್ದಾರೆ. ‘ಮುಕುಲ್ ಅವರನ್ನು ಕೆಲವು ತಿಂಗಳ ಹಿಂದೆ ತರಬೇತಿ ಶಿಬಿರದಲ್ಲಿ ನೋಡಿದ್ದೆವು. ಈ ದೇಶದಲ್ಲಿ ತುಂಬಾ ಪ್ರತಿಭೆಗಳಿವೆ. ನಮ್ಮ ಡೇಟಾ ವಿಶ್ಲೇಷಕ ಶ್ರೀನಿವಾಸ್ ಅವರೇ ಮುಕುಲ್​​ನ ಆಯ್ಕೆ ಮಾಡಿದ್ದು’ ಎಂದು ಜಸ್ಟಿನ್ ವಿವರಿಸಿದರು. ಎಲ್​​ಎಸ್​​ಜಿ ಮುಕುಲ್​​ಗೆ 2.60 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಈ ಹಣ ಒಂದೇ ಪಂದ್ಯದಲ್ಲಿ ವಸೂಲಿ ಆಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ