AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ರೋಬೋ ಶ್ವಾನಕ್ಕೆ ಹೆಸರಿಟ್ಟು ಸಂಕಷ್ಟಕ್ಕೆ ಸಿಲುಕಿದ ಬಿಸಿಸಿಐ; ಹೈಕೋರ್ಟ್​ನಿಂದ ನೋಟಿಸ್

BCCI Faces Legal Trouble: ಐಪಿಎಲ್ 2025 ರ ಮಧ್ಯೆ ದೆಹಲಿ ಹೈಕೋರ್ಟ್‌ನಿಂದ ಬಿಸಿಸಿಐಗೆ ನೋಟಿಸ್ ಬಂದಿದೆ. ರೋಬೋಟ್ ಶ್ವಾನ ಚಂಪಕ್ ಕಾರಣದಿಂದಾಗಿ ಈ ನೋಟೀಸ್ ನೀಡಲಾಗಿದೆ.ಈ ಪ್ರಕರಣದ ವಿಚಾರಣೆ ಜುಲೈ 9 ರಂದು ನಡೆಯಲಿದ್ದು, ಬಿಸಿಸಿಐ ನಾಲ್ಕು ವಾರಗಳಲ್ಲಿ ಉತ್ತರ ಸಲ್ಲಿಸಬೇಕಾಗಿದೆ.

IPL 2025: ರೋಬೋ ಶ್ವಾನಕ್ಕೆ ಹೆಸರಿಟ್ಟು ಸಂಕಷ್ಟಕ್ಕೆ ಸಿಲುಕಿದ ಬಿಸಿಸಿಐ; ಹೈಕೋರ್ಟ್​ನಿಂದ ನೋಟಿಸ್
Champuk
ಪೃಥ್ವಿಶಂಕರ
|

Updated on:Apr 30, 2025 | 4:14 PM

Share

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ (BCCI) ಕಾನೂನಿನ ಕಂಟಕ ಎದುರಾಗಿದೆ. ಐಪಿಎಲ್ 2025 (IPL 2025) ರ ಮಧ್ಯೆ ಬಿಸಿಸಿಐಗೆ ದೆಹಲಿ ಹೈಕೋರ್ಟ್‌ನಿಂದ ನೋಟಿಸ್ ಕಳುಹಿಸಲಾಗಿದೆ. ದೆಹಲಿ ಕೋರ್ಟ್​ ಬಿಸಿಸಿಐ ಮೇಲೆ ಈ ರೀತಿಯ ಕ್ರಮ ಜರುಗಿಸಲು ಕಾರಣ ಏನು ಎಂಬುದನ್ನು ನೋಡುವುದಾದರೆ.. ಅದಕ್ಕೆ ಉತ್ತರ ಇತ್ತೀಚೆಗಷ್ಟೇ ಬಿಸಿಸಿಐ, ಐಪಿಎಲ್‌ನಲ್ಲಿ ಪರಿಚಯಿಸಿದ್ದ ರೋಬೋ ಶ್ವಾನ (Robot Dog). ಈ ರೋಬೋ ಶ್ವಾನವನ್ನು ಐಪಿಎಲ್ ಪಂದ್ಯಗಳ ಟಾಸ್ ಸಮಯದಲ್ಲಿ ಬಳಸಲಾಗುತ್ತದೆ. ಅಲ್ಲದೆ ಈ ಶ್ವಾನ ಅಭ್ಯಾಸದ ಸಮಯದಲ್ಲಿ ಆಟಗಾರರನ್ನು ಸಹ ಕವರ್ ಮಾಡುತ್ತದೆ. ಕೆಲವು ದಿನಗಳ ಹಿಂದೆ ಈ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡಲಾಗಿತ್ತು. ಇದೀಗ ಈ ಹೆಸರೇ ಬಿಸಿಸಿಐಗೆ ಒಂದು ಕಂಟಕವಾಗಿ ಪರಿಣಮಿಸಿದೆ.

ದೆಹಲಿ ಹೈಕೋರ್ಟ್‌ನಿಂದ ಬಿಸಿಸಿಐಗೆ ನೋಟಿಸ್

ದೆಹಲಿ ಹೈಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದೆ. ವಾಸ್ತವವಾಗಿ, ಪ್ರಸಿದ್ಧ ಮಕ್ಕಳ ನಿಯತಕಾಲಿಕೆಯ ಹೆಸರು ಕೂಡ ಚಂಪಕ್ ಆಗಿದ್ದು, ಅದಕ್ಕಾಗಿಯೇ ಈ ಕಂಪನಿಯು ಬಿಸಿಸಿಐ ವಿರುದ್ಧ ಕೋರ್ಟ್​ ಮೆಟ್ಟಿಲೇರಿದೆ. ಬಿಸಿಸಿಐ ತನ್ನ ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡುವ ಮೂಲಕ ನೋಂದಾಯಿತ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ನಿಯತಕಾಲಿಕೆಯ ಆಡಳಿತ ಮಂಡಳಿ ಆರೋಪ ಹೊರಿಸಿದೆ.

ದೂರಿನನ್ವಯ ದೆಹಲಿ ಕೋರ್ಟ್​ ಬಿಸಿಸಿಐಗೆ ನೋಟಿಸ್ ಕಳುಹಿಸಿದ್ದು, ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಟ್ಟಿರುವ ಬಗ್ಗೆ ಉತ್ತರ ಕೇಳಿದೆ. ಹೈಕೋರ್ಟ್​ ಆದೇಶಿಸಿರುವಂತೆ ಮುಂದಿನ ನಾಲ್ಕು ವಾರಗಳಲ್ಲಿ ಬಿಸಿಸಿಐ ತನ್ನ ಲಿಖಿತ ಉತ್ತರವನ್ನು ನೀಡಬೇಕಾಗಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 9 ರಂದು ನಡೆಯಲಿದೆ.

IPL 2025: ಬದಲಾಗಲಿದೆ ಐಪಿಎಲ್! ಕ್ರಿಕೆಟ್​ ಫ್ಯಾನ್ಸ್​ಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಬಿಸಿಸಿಐ

ರೋಬೋ ಶ್ವಾನ ಚಂಪಕ್​ನ ವೈಶಿಷ್ಟ್ಯಗಳು

ರೋಬೋ ಶ್ವಾನ ಚಂಪಕ್‌ನ ವಿಶೇಷತೆಯೆಂದರೆ.. ಇದು ಬಹು ಕ್ಯಾಮೆರಾಗಳನ್ನು ಹೊಂದಿದ್ದು ಆಟವನ್ನು ಎಲ್ಲಾ ಆಯಾಮಗಳಲ್ಲು ಸೇರಿ ಹಿಡಿಯುವ ಸಾಮರ್ಥ್ಯ ಹೊಂದಿದೆ. ಇದು ಮಾತ್ರವಲ್ಲದೆ ಆಟಗಾರರ ಕಾರ್ಯಕ್ಷಮತೆಯ ಡೇಟಾವನ್ನು ಸಹ ನಿರ್ವಹಿಸುತ್ತದೆ. ರೋಬೋ ಶ್ವಾನ ಚಂಪಕ್​ನ ಇನ್ನೊಂದು ದೊಡ್ಡ ವೈಶಿಷ್ಟ್ಯವೆಂದರೆ ಅದನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ, ಅದು ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ.ಕೆಳಗೆ ಬಿದ್ದರೆ, ಅದು ತಾನಾಗಿಯೇ ಎದ್ದು ನಿಲ್ಲುವ ಸಾಮರ್ಥ್ಯ ಹೊಂದಿದೆ. ಈ ಶ್ವಾನವನ್ನು ಪಂದ್ಯದ ಮೊದಲು, ಆಟಗಾರರ ಅಭ್ಯಾಸದ ಸಮಯದಲ್ಲಿ ಮತ್ತು ಅರ್ಧಾವಧಿಯಲ್ಲಿ ಬಳಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Wed, 30 April 25

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!