IPL: ಮಾಯವಾಯ್ತ ಐಪಿಎಲ್ ಜನಪ್ರಿಯತೆ? ಪಾತಾಳಕ್ಕೆ ಕುಸಿದ ಎಲ್ಲಾ ತಂಡಗಳ ಬ್ರಾಂಡ್ ಮೌಲ್ಯ
IPL Brand Value Decline: 2026ರ ಐಪಿಎಲ್ ಮಿನಿ ಹರಾಜಿಗೆ ಸಿದ್ಧತೆಗಳು ನಡೆಯುತ್ತಿದ್ದರೂ, ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಗುಜರಾತ್ ಟೈಟಾನ್ಸ್ ಹೊರತುಪಡಿಸಿ ಬಹುತೇಕ ಎಲ್ಲಾ ತಂಡಗಳ ಜನಪ್ರಿಯತೆ ಇಳಿದಿದ್ದು, ರಾಜಸ್ಥಾನ ರಾಯಲ್ಸ್ ಶೇ. 35ರಷ್ಟು ಕುಸಿತ ಕಂಡಿದೆ. ಐಪಿಎಲ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಮೂಡಿದೆ.

2026 ರ ಐಪಿಎಲ್ಗೆ (IPL 2026) ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಅದರಂತೆ ಇನ್ನು ಕೆಲವೇ ದಿನಗಳಲ್ಲಿ ಮಿನಿ ಹರಾಜು ಕೂಡ ನಡೆಯಲಿದೆ. ಇದೀಗ ಈ ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಆದರೆ ಇದೆಲ್ಲದರ ನಡುವೆ ಇಷ್ಟು ದಿನ ಬಿಸಿಸಿಐ (BCCI) ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿಕೊಂಡಿದ್ದ ಐಪಿಎಲ್ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣವೂ ಇದ್ದು, ಆವೃತ್ತಿಯಿಂದ ಆವೃತ್ತಿಗೆ ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ ಗಣನೀಯವಾಗಿ ಕುಸಿಯಲಾರಂಭಿಸಿದೆ. ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ಹೊರತುಪಡಿಸಿ ಪ್ರತಿಯೊಂದು ತಂಡದ ಬ್ರಾಂಡ್ ಮೌಲ್ಯವು ಕುಸಿದಿದೆ. ಆಘಾತಕ್ಕಾರಿಯೆಂದರೆ ರಾಜಸ್ಥಾನ ರಾಯಲ್ಸ್ ತಂಡದ ಬ್ರಾಂಡ್ ಮೌಲ್ಯವು ಶೇಕಡಾ 35 ರಷ್ಟು ಕುಸಿದಿದೆ.
ಕುಸಿದ ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ
ರಾಜಸ್ಥಾನ ರಾಯಲ್ಸ್ ಹೊರತುಪಡಿಸಿ, ಸನ್‌ರೈಸರ್ಸ್ ಹೈದರಾಬಾದ್‌ನ ಬ್ರಾಂಡ್ ಮೌಲ್ಯವು ಶೇಕಡಾ 34 ರಷ್ಟು, ಕೋಲ್ಕತ್ತಾ ನೈಟ್ ರೈಡರ್ಸ್‌ನ ಬ್ರಾಂಡ್ ಮೌಲ್ಯವು ಶೇಕಡಾ 33 ರಷ್ಟು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಬ್ರಾಂಡ್ ಮೌಲ್ಯವು ಶೇಕಡಾ 26 ರಷ್ಟು ಕುಸಿದಿದೆ. ಮೊದಲ ಬಾರಿಗೆ ಐಪಿಎಲ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ರಾಂಡ್ ಮೌಲ್ಯವು ಶೇಕಡಾ 10 ರಷ್ಟು ಕುಸಿದಿದೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾಂಡ್ ಮೌಲ್ಯವು ಶೇಕಡಾ 24 ರಷ್ಟು ಕುಸಿದಿದೆ. ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಹೆಚ್ಚಿನ ಹಾನಿಯನ್ನು ಅನುಭವಿಸಲಿಲ್ಲ. ಮುಂಬೈನ ಬ್ರಾಂಡ್ ಮೌಲ್ಯವು ಶೇಕಡಾ 9 ರಷ್ಟು, ಪಂಜಾಬ್‌ನ ಬ್ರಾಂಡ್ ಮೌಲ್ಯವು ಶೇಕಡಾ 3 ರಷ್ಟು ಮತ್ತು ಲಕ್ನೋದ ಬ್ರಾಂಡ್ ಮೌಲ್ಯವು ಕೇವಲ ಶೇಕಡಾ 2 ರಷ್ಟು ಕುಸಿದಿದೆ. ವರದಿಯ ಪ್ರಕಾರ , ಗುಜರಾತ್ ಟೈಟಾನ್ಸ್ ಮಾತ್ರ ಬ್ರಾಂಡ್ ಮೌಲ್ಯವು ಶೇಕಡಾ 2 ರಷ್ಟು ಹೆಚ್ಚಾಗಿದೆ.
ಐಪಿಎಲ್‌ನಲ್ಲಿ ಮಾರಾಟಕ್ಕಿವೆ 2 ತಂಡಗಳು..! ಸಂಚಲನ ಮೂಡಿಸಿದ 36000 ಕೋಟಿ ಒಡೆಯನ ಪೋಸ್ಟ್
2025 ರಲ್ಲಿ ಯಾವ ತಂಡವು ಎಷ್ಟು ಬ್ರಾಂಡ್ ಮೌಲ್ಯವನ್ನು ಹೊಂದಿತ್ತು ?
- ಮುಂಬೈ ಇಂಡಿಯನ್ಸ್ ನಿವ್ವಳ ಮೌಲ್ಯ – 924 ಕೋಟಿ ರೂ.
- ಆರ್‌ಸಿಬಿಯ ನಿವ್ವಳ ಮೌಲ್ಯ -898 ಕೋಟಿ ರೂ.
- ಸಿಎಸ್‌ಕೆ ತಂಡದ ನಿವ್ವಳ ಮೌಲ್ಯ -795 ಕೋಟಿ ರೂ.
- ಕೆಕೆಆರ್‌ನ ನಿವ್ವಳ ಮೌಲ್ಯ -624 ಕೋಟಿ ರೂ.
- ಗುಜರಾತ್ ಟೈಟಾನ್ಸ್ ನಿವ್ವಳ ಮೌಲ್ಯ -598 ಕೋಟಿ ರೂ.
- ಪಂಜಾಬ್ ಕಿಂಗ್ಸ್ ನಿವ್ವಳ ಮೌಲ್ಯ – 564 ಕೋಟಿ ರೂ.
- ಲಕ್ನೋ ಸೂಪರ್‌ಜೈಂಟ್ಸ್ ನಿವ್ವಳ ಮೌಲ್ಯ- 504 ಕೋಟಿ ರೂ.
- ಡೆಲ್ಲಿ ಕ್ಯಾಪಿಟಲ್ಸ್ ನಿವ್ವಳ ಮೌಲ್ಯ- 504 ಕೋಟಿ ರೂ.
- ಸನ್‌ರೈಸರ್ಸ್ ಹೈದರಾಬಾದ್ ನಿವ್ವಳ ಮೌಲ್ಯ- 478 ಕೋಟಿ ರೂ.
- ರಾಜಸ್ಥಾನ್ ರಾಯಲ್ಸ್ ನಿವ್ವಳ ಮೌಲ್ಯ- 453 ಕೋಟಿ ರೂ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Tue, 9 December 25
