
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡುತ್ತಿದೆ. ಈ ಪ್ರದರ್ಶನದೊಂದಿಗೆ ಓರ್ವ ಬ್ಯಾಟರ್ ಮಾತ್ರ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಅವರು ಮತ್ಯಾರೂ ಅಲ್ಲ, ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ರಜತ್ ಪಾಟಿದಾರ್.
ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಖ್ಯಾತ ವಿಶ್ಲೇಷಕ ಇರ್ಫಾನ್ ಪಠಾಣ್, ರಜತ್ ಪಾಟಿದಾರ್ ಅವರ ವಿಸ್ಫೋಟಕ ಬ್ಯಾಟಿಂಗ್ಗೆ ಮಾರುಹೋಗಿದ್ದಾರೆ. ಅಲ್ಲದೆ ಅವರನ್ನು ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” ಎಂದು ಕರೆದಿದ್ದಾರೆ.
ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಅಥವಾ ಫಿಲ್ ಸಾಲ್ಟ್ ಅವರ ಮೇಲೆ ಎಲ್ಲರ ಕಣ್ಣಿರುತ್ತದೆ. ಆದರೆ, ಈ ಬಾರಿ ಇರ್ಫಾನ್ ಪಠಾಣ್ ಅವರ ಗಮನ ಸೆಳೆದಿರುವುದು ರಜತ್ ಪಾಟಿದಾರ್ ಅವರ ಅಪ್ರತಿಮ ‘ಇಂಟೆಂಟ್’.
ಈ ಬಗ್ಗೆ ಮಾತನಾಡಿದ ಪಠಾಣ್, “ಪಾಟಿದಾರ್ ಕ್ರೀಸ್‌ಗೆ ಬಂದ ಮೊದಲ ಎಸೆತದಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಾರೆ. ಅವರ ಆಕ್ರಮಣಕಾರಿ ಆಟ ಆರ್‌ಸಿಬಿ ತಂಡದ ರನ್ ಗತಿಯನ್ನೇ ಬದಲಿಸುತ್ತಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇರ್ಫಾನ್ ಪಠಾಣ್ ಅವರ ಪ್ರಕಾರ, ಆರ್‌ಸಿಬಿ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ರಜತ್ ಪಾಟಿದಾರ್ ಅವರ ಫಾರ್ಮ್ ಅತ್ಯಂತ ನಿರ್ಣಾಯಕ. ವಿರಾಟ್ ಕೊಹ್ಲಿ ಒಂದು ಕಡೆ ನೆಲೆಯೂರಿದರೆ, ಇನ್ನೊಂದು ತುದಿಯಲ್ಲಿ ರಜತ್ ಪಾಟಿದಾರ್ ನಡೆಸುವ ಆಕ್ರಮಣಕಾರಿ ಬ್ಯಾಟಿಂಗ್ ಎದುರಾಳಿ ತಂಡದ ತಂತ್ರಗಳನ್ನೆಲ್ಲ ತಲೆಕೆಳಗಾಗಿಸುತ್ತಿದೆ.
ಇದನ್ನೂ ಓದಿ: RCB ವಿರುದ್ಧ ‘ರಾಜಧಾನಿ ಎಕ್ಸ್ಪ್ರೆಸ್’ ಆಗಮನ..!
ಹೀಗಾಗಿ ಮುಂದಿನ ಪಂದ್ಯದಲ್ಲಿ ರಜತ್ ಪಾಟಿದಾರ್ ಹೇಗೆ ಆಡಲಿದ್ದಾರೆ ಎಂಬುದರ ಮೇಲೆ ಆರ್‌ಸಿಬಿ ತಂಡದ ಪ್ಲೇಆಫ್ ಲೆಕ್ಕಾಚಾರ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ರಜತ್ ಪಾಟಿದಾರ್ ಕೇವಲ ಒಬ್ಬ ಬ್ಯಾಟರ್ ಆಗಿ ಉಳಿಯದೆ, ಆರ್‌ಸಿಬಿ ಪಾಲಿನ ‘ಎಕ್ಸ್-ಫ್ಯಾಕ್ಟರ್’ ಆಗಿ ಹೊರಹೊಮ್ಮುತ್ತಿರುದು ವಿಶೇಷ.
Published On - 2:05 pm, Wed, 15 April 26