Ishan Kishan: ಸಚಿನ್ಗಿಂತ ಒಂದು ಹೆಜ್ಜೆ ಮುಂದೆ ಹೋದ ಇಶಾನ್ ಕಿಶನ್: ಇಷ್ಟೊಂದು ಒಳ್ಳೆಯವನಾಗುವ ಅಗತ್ಯವಿತ್ತೆ?
SRH vs MI, IPL 2025: ದೀಪಕ್ ಚಹಾರ್ ಅವರು ಎಸೆದ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋಯಿತು. ಇಶಾನ್ ಕಿಶನ್ ಅದನ್ನು ಆಡಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ. ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಗೆ ಸೇರಿತು. ಈ ಸಂದರ್ಭ ವಿಕೆಟ್ ಕೀಪರ್ ಆಗಲಿ ಅಥವಾ ಬೌಲರ್ ಆಗಲಿ ಔಟ್ಗೆಂದು ಮೇಲ್ಮನವಿ ಸಲ್ಲಿಸಲಿಲ್ಲ. ಆದರೂ ಕಿಶನ್ ಔಟ್ ಎಂದು ಹೊರಟುಹೋದರು.

ಬೆಂಗಳೂರು (ಏ. 24): ಸಚಿನ್ ತೆಂಡೂಲ್ಕರ್ (Sachin Tendulkar) ಪ್ರಾಮಾಣಿಕತೆಯಿಂದ ಕ್ರಿಕೆಟ್ ಆಡುವುದಕ್ಕೆ ಹೆಸರುವಾಸಿಯಾದವರು. ಸಚಿನ್ ಔಟ್ ಎಂದು ಭಾವಿಸಿದರೆ, ಅವರು ಅಂಪೈರ್ ನಿರ್ಧಾರಕ್ಕಾಗಿ ಕಾಯುತ್ತಿರಲಿಲ್ಲ. ಎದುರಾಳಿ ತಂಡ ಮೇಲ್ಮನವಿ ಸಲ್ಲಿಸಲಿ ಅಥವಾ ನೀಡದಿರಲಿ, ಅಂಪೈರ್ ಔಟ್ ನೀಡಲಿ ಅಥವಾ ನೀಡದಿರಲಿ, ಸಚಿನ್ ಸ್ವತಃ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್‌ನ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಆದರೆ ಇಶಾನ್ ಕಿಶನ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ವಿಚಿತ್ರವಾದ ಘಟನೆ ನಡೆಯಿತು. ದೀಪಕ್ ಚಹಾರ್ ಅವರು ಎಸೆದ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋಯಿತು. ಇಶಾನ್ ಕಿಶನ್ ಅದನ್ನು ಆಡಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ. ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಗೆ ಸೇರಿತು.
ಈ ಸಂದರ್ಭ ವಿಕೆಟ್ ಕೀಪರ್ ಆಗಲಿ ಅಥವಾ ಬೌಲರ್ ಆಗಲಿ ಔಟ್ಗೆಂದು ಮೇಲ್ಮನವಿ ಸಲ್ಲಿಸಲಿಲ್ಲ. ಯಾಕೆಂದರೆ ಚೆಂಡು ಬ್ಯಾಟ್ಗಾಗಲಿ ಅಥವಾ ಗ್ಲೌಸ್ಗಾಗಲಿ ತಾಗಿಲ್ಲ ಎಂದು ಬೌಲರ್-ವಿಕೆಟ್ ಕೀಪರ್ಗೆ ಚೆನ್ನಾಗಿ ತಿಳಿದಿತ್ತು. ಆದರೆ, ಅಚ್ಚರಿ ಎಂಬಂತೆ ಚೆಂಡು ವಿಕೆಟ್ ಕೀಪರ್ ಕೈ ಸೇರಿದ ತಕ್ಷಣ ಇಶಾನ್ ಕಿಶನ್ ಪೆವಿಲಿಯನ್‌ಗೆ ಮರಳಲು ಪ್ರಾರಂಭಿಸಿದರು.
ಇಶಾನ್ ಹೊರಡಲು ಪ್ರಾರಂಭಿಸುತ್ತಿರುವುದನ್ನು ದೀಪಕ್ ಚಹಾರ್ ನೋಡಿದಾಗ ಅವರು ಅಂಪೈರ್ಗೆ ಮನವಿ ಮಾಡಲು ಕೈ ಎತ್ತಿದರು. ಆಗ ಅಂಪೈರ್ ಕೂಡ ಗೊಂದಲಕ್ಕೊಳಗಾದರು.. ಕೈ ಎತ್ತಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ತಿಳಿಯಲಿಲ್ಲ. ಕೊನೆಗೆ ಔಟ್ ಎಂದು ಬೆರಳು ಎತ್ತಿದರು. ಇದಾದ ನಂತರ ಹಾರ್ದಿಕ್ ಪಾಂಡ್ಯ ಅವರು ಇಶಾನ್ ಕಿಶನ್ ಅವರ ಬಳಿ ಹೋಗಿ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದಂತೆ ತಲೆಯ ಮೇಲೆ ಕೈಯಿಟ್ಟು ಚಪ್ಪಾಳೆ ತಟ್ಟಿದರು.
Jasprit Bumrah: ಟಿ20ಯಲ್ಲಿ 300 ವಿಕೆಟ್ ಪೂರ್ಣಗೊಳಿಸಿದರೂ ಜಸ್ಪ್ರೀತ್ ಬುಮ್ರಾ: ಆದರೂ ನಂಬರ್ ಒನ್ ಅಲ್ಲ
ಆದರೆ ಸ್ನಿಕೋಮೀಟರ್ ನಲ್ಲಿ ವೀಕ್ಷಣೆ ಮಾಡಿದಾಗ ಎಲ್ಲರೂ ದಿಗ್ಭ್ರಮೆಗೊಂಡರು. ವಾಸ್ತವವಾಗಿ, ಚೆಂಡು ಇಶಾನ್ ಕಿಶನ್ ಅವರ ಬ್ಯಾಟ್‌ಗೆ ತಾಗಲಿಲ್ಲ, ಅವರ ದೇಹದ ಯಾವುದೇ ಭಾಗಕ್ಕೂ ತಾಗಲಿಲ್ಲ. ಚೆಂಡು ಹಾಗೂ ಬ್ಯಾಟ್ ಮಧ್ಯೆ ದೊಡ್ಡ ಗ್ಯಾಪ್ ಇತ್ತು. ಆದರೆ ಇದಾದ ನಂತರವೂ ಇಶಾನ್ ಪೆವಿಲಿಯನ್ ತೊರೆದರು. ಇದನ್ನ ಕಂಡು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಇದು ಫಿಕ್ಸಿಂಗ್ ಎಂದು ಕರೆದರೆ ಇನ್ನೂ ಕೆಲವು ಇಷ್ಟೊಂದು ಒಳ್ಳೆಯನಾಗುವ ಅಗತ್ಯ ಇರಲಿಲ್ಲ, ಅಂಪೈರ್ ನಿರ್ಧಾರಕ್ಕೆ ಕಾಯಬೇಕಿತ್ತು ಅಥವಾ ರಿವ್ಯೂ ತೆಗೆದುಕೊಳ್ಳಬಹುದಿತ್ತು ಎಂದು ಹೇಳುತ್ತಿದ್ದಾರೆ.
ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ವಿಫಲವಾಯಿತು. ಪವರ್ ಪ್ಲೇ ನಂತರ ತಂಡದ ಸ್ಕೋರ್ 4 ವಿಕೆಟ್‌ಗಳಿಗೆ 24 ರನ್‌ಗಳಾಗಿತ್ತು. ತಂಡದ ಅರ್ಧದಷ್ಟು ಜನರು 35 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದ್ದರು. ನಂತರ, ಹೆನ್ರಿಕ್ ಕ್ಲಾಸೆನ್ ಅವರ 44 ಎಸೆತಗಳಲ್ಲಿ 71 ರನ್ ನೆರವಿನಿಂದ 143 ರನ್ ಗಳಿಸಿತು. ಮಾಜಿ ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ಸಹಾಯದಿಂದ ಮುಂಬೈ ಇಂಡಿಯನ್ಸ್ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ