Jason Holder: 5.75 ಕೋಟಿಗೆ ರಾಜಸ್ಥಾನ್ ತಂಡ ಸೇರಿದ ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್

IPL Auction 2023: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಕುರ್ರನ್ ಗರಿಷ್ಠ ಮೊತ್ತಕ್ಕೆ ಸೇಲ್ ಆದ ದಾಖಲೆ ಬರೆದರು. ಜೇಸನ್ ಹೋಲ್ಡರ್ 5.75 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾದರು. ಇದರ ನಡುವೆ ಶಕಿಬ್ ಅಲ್ ಹಸನ್ ಅನ್​ಸೋಲ್ಡ್ ಆದರು.

Jason Holder: 5.75 ಕೋಟಿಗೆ ರಾಜಸ್ಥಾನ್ ತಂಡ ಸೇರಿದ ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್
Jason Holder
Follow us
TV9 Web
| Updated By: Digi Tech Desk

Updated on:Dec 23, 2022 | 4:55 PM

ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2023) ಟೂರ್ನಿಯ ಹದಿನಾರನೇ ಆವೃತ್ತಿ ಸಲುವಾಗಿ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆಯನ್ನು ಕೇರಳದ ಕೊಚ್ಚಿಯಲ್ಲಿ ಶುರುವಾಗಿದೆ. ಬರೋಬ್ಬರಿ 405 ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ 10 ತಂಡಗಳು ತಮ್ಮ ಆಟಗಾರರ ಖರೀದಿ ಸಲುವಾಗಿ ಹಣದ ಹೊಳೆ ಹರಿಸಲು ಶುರು ಮಾಡಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ 119 ಕ್ಯಾಪ್ಡ್​​​ ಪ್ಲೇಯರ್ಸ್ ಸದ್ಯ ಹರಾಜಿನ ಕೇಂದ್ರಬಿಂದುವಾಗಿದ್ದಾರೆ. ಇಂಗ್ಲೆಂಡ್​ನ ಹ್ಯಾರಿ ಬ್ಯೂಕ್ (Harry Brook) ಹಾಗೂ ಸ್ಯಾಮ್ ಕುರ್ರನ್ ಭರ್ಜರಿ ಮೊತ್ತಕ್ಕೆ ಸೇಲ್ ಆದರು.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಕುರ್ರನ್ ಗರಿಷ್ಠ ಮೊತ್ತಕ್ಕೆ ಸೇಲ್ ಆದ ದಾಖಲೆ ಬರೆದರು. 18.50 ಕೋಟಿಗೆ ಸ್ಯಾಮ್ ಸನ್​ರೈಸರ್ಸ್ ಹೈದರಾಬಾದ್ ಪಾಲಾದರು. ಒಡೆನ್ ಸ್ಮಿತ್ 50 ಲಕ್ಷಕ್ಕೆ ಗುಜರಾತ್ ಪಾಲಾದರೆ, ಸಿಖಂದರ್ ರಾಜಾ ಕೂಡ 50 ಲಕ್ಷಕ್ಕೆ ಪಂಜಾಬ್ ಸೇರಿದರು. ಜೇಸನ್ ಹೋಲ್ಡರ್ 5.75 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾದರು. ಇದರ ನಡುವೆ ಶಕಿಬ್ ಅಲ್ ಹಸನ್ ಅನ್​ಸೋಲ್ಡ್ ಆದರು.

ಹರಾಜಿನಲ್ಲಿ ಮೊದಲ ಆಟಗಾರ ಕೇನ್ ವಿಲಿಯಮ್ಸನ್ ಅವರನ್ನು ಮೂಲಬೆಲೆಗೆ ಗುಜರಾತ್ ಟೈಟಾನ್ಸ್ ಖರೀದಿಸಿತು. ಬಳಿಕ 1 ಕೋಟಿ ಮೂಲಬೆಲೆ ಹೊಂದಿರುವ ಮಯಾಂಕ್ ಅಗರ್ವಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಲು ಮುಂದಾಯಿತು. ಆದರೆ, ತನ್ನ ಪರ್ಸ್​ನಲ್ಲಿ ಅಷ್ಟು ಮೊತ್ತ ಇಲ್ಲದ ಕಾರಣ ಮಯಾಂಕ್ ಅಂತಿಮವಾಗಿ ಸನ್​ರೈಸರ್ಸ್ ಪಾಲಾದರು. ಆರಂಭದಲ್ಲಿ ಮಯಾಂಕ್ ಖರೀದಿಗೆ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಂದೆ ಬಂತು. ಆದರೆ, ನಂತರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ನಡುವೆ ಕಠಿಣ ಪೈಪೋಟಿ ನಡೆಯಿತು.

ಇದನ್ನೂ ಓದಿ
Image
IPL 2023 Auction: ಮೂಲಬೆಲೆಗೆ ಮಾರಾಟವಾದ ವಿಲಿಯಮ್ಸನ್-ರಹಾನೆ
Image
Mayank Agarwal: ಆರ್​ಸಿಬಿ ಟ್ರೈ ಮಾಡಿದ್ರೂ ಸಿಕ್ಕಿಲ್ಲ: ಸನ್​ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್
Image
IPL 2023 Auction: ಬರೋಬ್ಬರಿ 13.25 ಕೋಟಿಗೆ ಹರಾಜಾದ ಇಂಗ್ಲೆಂಡ್​ನ ಸ್ಪೋಟಕ ಯುವ ಬ್ಯಾಟ್ಸ್​ಮನ್
Image
Rishabh Pant: ಶತಕದ ಅಂಚಿನಲ್ಲಿ ಎಡವಿದ ಪಂತ್: ರಿಷಭ್-ಅಯ್ಯರ್ 159 ರನ್ಸ್ ಜೊತೆಯಾಟ ಅಂತ್ಯ

IPL 2023 Auction: ಬರೋಬ್ಬರಿ 13.25 ಕೋಟಿಗೆ ಹರಾಜಾದ ಇಂಗ್ಲೆಂಡ್​ನ ಸ್ಪೋಟಕ ಯುವ ಬ್ಯಾಟ್ಸ್​ಮನ್

ಅಂತಿಮವಾಗಿ ಮಯಾಂಕ್ 8.25 ಕೋಟಿಗೆ ಹೈದರಬಾದ್ ಖರೀದಿಸಿತು. ಈ ಹಿಂದೆ ಪಂಜಾಬ್ ತಂಡದಲ್ಲಿದ್ದ ಮಯಾಂಕ್​ರನ್ನು ಹರಾಜಿಗೂ ಮುನ್ನ ಫ್ರಾಂಚೈಸಿ ಕೈಬಿಟ್ಟಿತ್ತು. ಇತ್ತ ಆರ್​ಸಿಬಿ ಖಾತೆಯಲ್ಲಿ ದೊಡ್ಡ ಮಟ್ಟದ ಹಣವಿಲ್ಲ. ಬೆಂಗಳೂರು ಬಳಿ ಕೇವಲ 8.75 ಕೋಟಿ ರೂ. ಇದೆಯಷ್ಟೆ. ಇದರಲ್ಲೇ ತಂಡಕ್ಕೆ ಅಗತ್ಯವಿರುವ ಪ್ರಮುಖ ಆಟಗಾರರನ್ನು ಖರೀದಿಸಬೇಕಾಗಿದೆ. ಆರ್​ಸಿಬಿಗೆ ಒಟ್ಟು ಏಳು ಆಟಗಾರರನ್ನು ಖರೀದಿಸುವ ಅವಕಾಶವಿದೆ. ಆದರೆ, ವಿದೇಶಿ ಪ್ಲೇಯರ್ಸ್ ಪೈಕಿ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

ಐಪಿಎಲ್ ಸೀಸನ್ 16 ಹರಾಜಿನ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಕೋಟಿ ಮೊತ್ತಕ್ಕೆ ಹರಾಜಾದರು. 1.50 ಕೋಟಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ 23 ವರ್ಷದ ಯುವ ಸ್ಪೋಟಕ ದಾಂಡಿಗನನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು ಬರೋಬ್ಬರಿ 13.25 ಕೋಟಿ ರೂ. ನೀಡಿ ಖರೀದಿಸಿತು.

ಐಪಿಎಲ್​ ಮಿನಿಹರಾಜು ಪ್ರಕ್ರಿಯೆ ಲೈವ್​

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Fri, 23 December 22

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ