AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cameron Green: ಬರೋಬ್ಬರಿ 17.5 ಕೋಟಿಗೆ ರೋಹಿತ್ ಶರ್ಮಾ ತಂಡ ಸೇರಿದ ಕ್ಯಾಮ್ರೊನ್ ಗ್ರೀನ್

IPL 2023 Auction: ಕ್ಯಾಮ್ರೊನ್ ಗ್ರೀನ್ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಕಠಿಣ ಪೈಪೋಟಿ ನಡೆದವು. 17.5 ಕೋಟಿ ನೀಡಿ ರೋಹಿತ್ ಶರ್ಮಾ ತಂಡ ಗ್ರೀನ್ ಅವರಿಗೆ ಮಣೆ ಹಾಕಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಕೂಡ ಕೋಟಿ ಮೊತ್ತಕ್ಕೆ ಹರಾಜಾದರು.

Cameron Green: ಬರೋಬ್ಬರಿ 17.5 ಕೋಟಿಗೆ ರೋಹಿತ್ ಶರ್ಮಾ ತಂಡ ಸೇರಿದ ಕ್ಯಾಮ್ರೊನ್ ಗ್ರೀನ್
Cameron Green
TV9 Web
| Edited By: |

Updated on:Dec 23, 2022 | 6:56 PM

Share

ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2023) ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಐಪಿಎಲ್ ಇತಿಹಾಸದಲ್ಲೇ ನೂತನ ದಾಖಲೆ ನಿರ್ಮಾಣವಾಗಿದೆ. ಇಂಗ್ಲೆಂಡ್​ನ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರನ್​ (Sam Curren) ಅವರನ್ನು ಬರೋಬ್ಬರಿ 15 ಕೋಟಿ ನೀಡಿ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಮತ್ತೊಬ್ಬ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಸಿಎಸ್​ಕೆ ದಾಖಲೆಯ 16.25 ಕೋಟಿ ಮೊತ್ತಕ್ಕೆ ಪಡೆದುಕೊಂಡಿದೆ. ಇದರ ನಡುವೆ ಆಸ್ಟ್ರೇಲಿಯಾದ ಕ್ಯಾಮ್ರೊನ್ ಗ್ರೀನ್ (Cameron Green) ಭರ್ಜರಿ ಮೊತ್ತಕ್ಕೆ ಮರಾಟ ಆಗಿದ್ದಾರೆ.

ಗ್ರೀನ್ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಕಠಿಣ ಪೈಪೋಟಿ ನಡೆದವು. 17.5 ಕೋಟಿ ನೀಡಿ ರೋಹಿತ್ ಶರ್ಮಾ ತಂಡ ಗ್ರೀನ್ ಅವರಿಗೆ ಮಣೆ ಹಾಕಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಕೂಡ ಕೋಟಿ ಮೊತ್ತಕ್ಕೆ ಹರಾಜಾದರು. 1.50 ಕೋಟಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ 23 ವರ್ಷದ ಯುವ ಸ್ಪೋಟಕ ದಾಂಡಿಗನನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು ಬರೋಬ್ಬರಿ 13.25 ಕೋಟಿ ರೂ. ನೀಡಿ ಖರೀದಿಸಿತು.

ಇನ್ನು ಒಡೆನ್ ಸ್ಮಿತ್ 50 ಲಕ್ಷಕ್ಕೆ ಗುಜರಾತ್ ಪಾಲಾದರೆ, ಸಿಖಂದರ್ ರಾಜಾ ಕೂಡ 50 ಲಕ್ಷಕ್ಕೆ ಪಂಜಾಬ್ ಸೇರಿದರು. ಜೇಸನ್ ಹೋಲ್ಡರ್ 5.75 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾದರು. ಇದರ ನಡುವೆ ಶಕಿಬ್ ಅಲ್ ಹಸನ್ ಅನ್​ಸೋಲ್ಡ್ ಆದರು. ಕೇನ್ ವಿಲಿಯಮ್ಸನ್ ಅವರನ್ನು ಮೂಲಬೆಲೆಗೆ ಗುಜರಾತ್ ಟೈಟಾನ್ಸ್ ಖರೀದಿಸಿತು. ಬಳಿಕ 1 ಕೋಟಿ ಮೂಲಬೆಲೆ ಹೊಂದಿರುವ ಮಯಾಂಕ್ ಅಗರ್ವಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಲು ಮುಂದಾಯಿತು. ಆದರೆ, ಅಂತಿಮವಾಗಿ ಮಯಾಂಕ್ ಅವರನ್ನು 8.25 ಕೋಟಿಗೆ ಹೈದರಬಾದ್ ಖರೀದಿಸಿತು.

ಇದನ್ನೂ ಓದಿ
Image
Jason Holder: 5.75 ಕೋಟಿಗೆ ರಾಜಸ್ಥಾನ್ ತಂಡ ಸೇರಿದ ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್
Image
Sam Curran: ದಾಖಲೆಯ ಮೊತ್ತಕ್ಕೆ ಹರಾಜಾದ ಸ್ಯಾಮ್ ಕರನ್..!
Image
IPL 2023 Auction: ಮೂಲಬೆಲೆಗೆ ಮಾರಾಟವಾದ ವಿಲಿಯಮ್ಸನ್-ರಹಾನೆ
Image
Mayank Agarwal: ಆರ್​ಸಿಬಿ ಟ್ರೈ ಮಾಡಿದ್ರೂ ಸಿಕ್ಕಿಲ್ಲ: ಸನ್​ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್

ಕರನ್​ ಖರೀದಿಗೆ ಮುಗಿಬಿದ್ದ ಫ್ರಾಂಚೈಸಿಗಳು:

ಐಪಿಎಲ್ 2023 ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್​, ಎಸ್​ಆರ್​​ಹೆಚ್​, ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಆದರೆ, ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ಸ್ಯಾಮ್ ಕುರ್ರನ್ ಅವರನ್ನು ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಗಿದೆ.

ಐಪಿಎಲ್​ ಮಿನಿಹರಾಜು ಪ್ರಕ್ರಿಯೆ ಲೈವ್​

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 23 December 22

Follow Us
TV9 Web
TV9 Web

TV9 Kannada

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ