IND vs ENG: ಇಂಗ್ಲೆಂಡ್​ನಲ್ಲಿ ಯಾವ ಭಾರತೀಯ ವೇಗಿಯೂ ಸೃಷ್ಟಿಸದ ದಾಖಲೆಯ ಮೇಲೆ ಬುಮ್ರಾ ಕಣ್ಣು

Jasprit Bumrah's England Record: ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದೊಂದಿಗೆ ಪ್ರವಾಸದಲ್ಲಿದ್ದಾರೆ. ಆದರೆ ಅವರು ಎಲ್ಲಾ ಪಂದ್ಯಗಳನ್ನು ಆಡುವ ಸಾಧ್ಯತೆ ಕಡಿಮೆ. ಆದಾಗ್ಯೂ ಇಂಗ್ಲೆಂಡ್‌ ವಿರುದ್ಧ ಅವರು 13 ವಿಕೆಟ್​ಗಳನ್ನು ಪಡೆದರೆ, ಈ ತಂಡದ ವಿರುದ್ಧ 50 ವಿಕೆಟ್‌ಗಳನ್ನು ಪಡೆದ ದಾಖಲೆ ಬರೆಯಲಿದ್ದಾರೆ. ಇದು ಸಾಧ್ಯವಾದರೆ, ಅವರು ಇಂಗ್ಲೆಂಡ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಆಗುತ್ತಾರೆ.

IND vs ENG: ಇಂಗ್ಲೆಂಡ್​ನಲ್ಲಿ ಯಾವ ಭಾರತೀಯ ವೇಗಿಯೂ ಸೃಷ್ಟಿಸದ ದಾಖಲೆಯ ಮೇಲೆ ಬುಮ್ರಾ ಕಣ್ಣು
Jasprit Bumrah

Updated on: Jun 08, 2025 | 10:23 PM

ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ತಂಡದೊಂದಿಗೆ ಇಂಗ್ಲೆಂಡ್‌ (Team India’s England Tour) ಪ್ರವಾಸದಲ್ಲಿದ್ದಾರೆ. ಆದರೆ ಈ ಟೆಸ್ಟ್ ಸರಣಿಯ ಐದು ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಎಲ್ಲಾ ಪಂದ್ಯಗಳನ್ನು ಆಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಸಧ್ಯದ ಮಾಹಿತಿ ಪ್ರಕಾರ ಬುಮ್ರಾ, ಮೂರು ಪಂದ್ಯಗಳನ್ನು ಆಡಬಹುದು ಎಂದು ವರದಿಯಾಗಿದೆ. ಅದೇನೆ ಇರಲಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದರೆ, ಟೀಂ ಇಂಡಿಯಾಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ. ಇದರ ಜೊತೆಗೆ ಬುಮ್ರಾ ಇಂಗ್ಲೆಂಡ್‌ ಪ್ರವಾಸದಲ್ಲಿ 13 ವಿಕೆಟ್‌ಗಳನ್ನು ಪಡೆದರೆ, ಅವರ ಹೆಸರಿನಲ್ಲಿ ವಿಶೇಷ ದಾಖಲೆ ದಾಖಲಾಗುತ್ತದೆ.

13 ವಿಕೆಟ್‌ಗಳ ಅಗತ್ಯ

ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್‌ನಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಇನ್ನೂ 13 ವಿಕೆಟ್‌ಗಳ ಅಗತ್ಯವಿದೆ. ಬುಮ್ರಾ ಈ ಸಾಧನೆ ಮಾಡಿದರೆ, ಇಂಗ್ಲೆಂಡ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಈ ಅದ್ಭುತ ದಾಖಲೆಯನ್ನು ಇನ್ನೂ ಯಾವುದೇ ಭಾರತೀಯ ಬೌಲರ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ದಾಖಲೆ ಬರೆಯಲು ಇದೀಗ ಜಸ್ಪ್ರೀತ್ ಬುಮ್ರಾಗೆ ಸುವರ್ಣಾವಕಾಶವಿದೆ. ಇಲ್ಲಿಯವರೆಗೆ, ಇಶಾಂತ್ ಶರ್ಮಾ ಇಂಗ್ಲೆಂಡ್‌ನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಇಶಾಂತ್ ಶರ್ಮಾ ಇಂಗ್ಲೆಂಡ್ ನೆಲದಲ್ಲಿ ಇಂಗ್ಲಿಷ್ ತಂಡದ ವಿರುದ್ಧ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 48 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದೇ ಸಮಯದಲ್ಲಿ, ಜಸ್ಪ್ರೀತ್ ಬುಮ್ರಾ ಇದುವರೆಗೆ ಇಂಗ್ಲೆಂಡ್‌ನಲ್ಲಿ 8 ಟೆಸ್ಟ್ ಪಂದ್ಯಗಳಲ್ಲಿ 37 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಶಾಂತ್ ಶರ್ಮಾ ನಂತರ, ಕಪಿಲ್ ದೇವ್ ಅವರ ಹೆಸರು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿದೆ, ಅವರು ತಮ್ಮ ವೃತ್ತಿಜೀವನದಲ್ಲಿ 13 ಪಂದ್ಯಗಳಲ್ಲಿ 43 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Jasprit Bumrah: ಕ್ರಿಕೆಟ್​ಗಿಂತ ಕುಟುಂಬ ಮುಖ್ಯ; ನಿವೃತ್ತಿಯ ಸುಳಿವು ನೀಡಿದ್ರಾ ಜಸ್ಪ್ರೀತ್ ಬುಮ್ರಾ?

ಕಪಿಲ್ ದಾಖಲೆ ಮೇಲೆ ಬುಮ್ರಾ ಕಣ್ಣು

ಜಸ್ಪ್ರೀತ್ ಬುಮ್ರಾ ಇದುವರೆಗೆ ಇಂಗ್ಲೆಂಡ್ ವಿರುದ್ಧ ಒಟ್ಟು 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಕಪಿಲ್ ದೇವ್ ಅವರ 85 ವಿಕೆಟ್‌ಗಳ ದಾಖಲೆಯನ್ನು ಮುರಿಯಲು ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗಳಲ್ಲಿ ಭಾರತದ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಲು ಬುಮ್ರಾಗೆ ಈ ಸರಣಿಯಲ್ಲಿ ಕನಿಷ್ಠ 26 ವಿಕೆಟ್‌ಗಳು ಬೇಕಾಗುತ್ತವೆ. ಜಸ್ಪ್ರೀತ್ ಬುಮ್ರಾ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಬುಮ್ರಾ, ಆಡಿದ 12 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಬುಮ್ರಾ ಟೆಸ್ಟ್ ಸರಣಿಯಲ್ಲೂ ಅದೇ ಪ್ರದರ್ಶನವನ್ನು ಪುನರಾವರ್ತಿಸುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ