Kapil Dev: ತನ್ನ ದಾಖಲೆಯನ್ನೇ ಮುರಿದ ಜಸ್​ಪ್ರೀತ್ ಬುಮ್ರಾ ಬಗ್ಗೆ ಕಪಿಲ್ ದೇವ್ ಹೇಳಿದ್ದೇನು ಕೇಳಿ

Jasprit Bumrah: ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆಯಲು ಕಪಿಲ್‌ ದೇವ್‌ 25 ಪಂದ್ಯಗಳನ್ನು ತೆಗೆದುಕೊಂಡರೆ, 27 ವರ್ಷದ ಜಸ್‌ಪ್ರೀತ್‌ ಬುಮ್ರಾ ತಮ್ಮ 24ನೇ ಪಂದ್ಯದಲ್ಲಿ ಈ ಸಾಧನೆ ಮೆರೆದಿದ್ದಾರೆ.

Kapil Dev: ತನ್ನ ದಾಖಲೆಯನ್ನೇ ಮುರಿದ ಜಸ್​ಪ್ರೀತ್ ಬುಮ್ರಾ ಬಗ್ಗೆ ಕಪಿಲ್ ದೇವ್ ಹೇಳಿದ್ದೇನು ಕೇಳಿ
kapil dev jasprit bumrah
Follow us
TV9 Web
| Updated By: Vinay Bhat

Updated on: Sep 13, 2021 | 1:57 PM

ಇತ್ತೀಚೆಗಷ್ಟೆ ಲಂಡನ್​ನ ಓವೆಲ್​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ (Jasprit Bumrah) ಅವರು ವಿಶೇಷ ಸಾಧನೆ ಮಾಡಿದ್ದರು. ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್‌ಗಳನ್ನು ಪಡೆದ ಭಾರತೀಯ ವೇಗದ ಬೌಲರ್‌ ಎಂಬ ಹೆಗ್ಗಳಿಕೆಯೊಂದಿಗೆ ಬುಮ್ರಾ ಇತಿಹಾಸದ ಪುಟ ಸೇರಿದ್ದಲ್ಲದೆ ದಿಗ್ಗಜ ಕಪಿಲ್ ದೇವ್ ಹೆಸರಲ್ಲಿದ್ದ ದೀರ್ಘಕಾಲದ ದಾಖಲೆಯನ್ನೂ ಅಳಿಸಿಹಾಕಿದರು. ಸದ್ಯ ಕಪಿಲ್ ದೇವ್ (Kapil Dev) ತನ್ನ ದಾಖಲೆಯನ್ನು ಮುರಿದ ಜಸ್​ಪ್ರೀತ್ ಬುಮ್ರಾ ಬಗ್ಗೆ ಮಾತನಾಡಿದ್ದಾರೆ.

“ಬುಮ್ರಾ ಒಬ್ಬ ಶ್ರೇಷ್ಠ ಬೌಲರ್. ಈಗಿರುವ ಕಂಡೀಷನ್​ನಲ್ಲಿ 100 ವಿಕೆಟ್ ಪಡೆಯುವುದು ಸುಲಭದ ಕೆಲಸವಲ್ಲ. ಅದಕೂಡ ಅವರ ಬೌಲಿಂಗ್ ಶೈಲಿಯಲ್ಲಿ 100 ವಿಕೆಟ್ ಕಿತ್ತಿರುವುದಕ್ಕೆ ಹ್ಯಾಟ್ಸ್​ಆಫ್ ಹೇಳಲೇ ಬೇಕು. ಭಾರತ ಕ್ರಿಕೆಟ್ ತಂಡದಲ್ಲಿ ಅವರು ಒಂದು ಇಮ್​ಪ್ಯಾಕ್ಟ್ ಕ್ರಿಯೆಟ್ ಮಾಡಿದ್ದಾರೆ” ಎಂದು ಕಪಿಲ್ ದೇವ್ ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆಯಲು ಕಪಿಲ್‌ ದೇವ್‌ 25 ಪಂದ್ಯಗಳನ್ನು ತೆಗೆದುಕೊಂಡರೆ, 27 ವರ್ಷದ ಜಸ್‌ಪ್ರೀತ್‌ ಬುಮ್ರಾ ತಮ್ಮ 24ನೇ ಪಂದ್ಯದಲ್ಲಿ ಈ ಸಾಧನೆ ಮೆರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ 100 ವಿಕೆಟ್‌ ಪಡೆದ ಬೌಲರ್‌ಗಳ ಪೈಕಿ ಅತ್ಯುತ್ತಮ ಸರಾಸರಿ ಹೊಂದಿರುವ ಹೆಗ್ಗಳಿಕೆಯೂ ಬುಮ್ರಾಗಿದೆ. ಇದಕ್ಕೂ ಮುನ್ನ ರವಿಚಂದ್ರನ್‌ ಅಶ್ವಿನ್‌ 24.56ರ ಸರಾಸರಿಯೊಂದಿಗೆ ಈ ದಾಖಲೆ ಹೊಂದಿದ್ದರು. ಬುಮ್ರಾ 22.45ರ ಸರಾಸರಿಯಲ್ಲಿ 100 ವಿಕೆಟ್‌ಗಳ ಗಡಿ ದಾಟಿದ್ದಾರೆ.

1980ರಲ್ಲಿ ಕಪಿಲ್ ದೇವ್ ಈ ಸಾಧನೆ ಮಾಡಿದ್ದರು. ಇರ್ಫಾನ್ ಪಠಾಣ್ (2008, 28 ಪಂದ್ಯ), ಮೊಹಮದ್ ಶಮಿ (2018, 29 ಪಂದ್ಯ) ಅತಿವೇಗವಾಗಿ 100 ವಿಕೆಟ್ ಕಬಳಿಸಿದ ಭಾರತೀಯ ವೇಗಿಗಳ ಪೈಕಿ ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ. ಬುಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್‌ಗಳ ಪೈಕಿ 22ನೇ ಸ್ಥಾನದಲ್ಲಿದ್ದು, ಕನ್ನಡಿಗ ಅನಿಲ್ ಕುಂಬ್ಳೆ (619) ಅಗ್ರಸ್ಥಾನದಲ್ಲಿದ್ದಾರೆ.

ಇನ್ನೂ ಇದೇವೇಳೆ ಟಿ-20 ವಿಶ್ವಕಪ್​ಗೆ ಟೀಮ್​ ಇಂಡಿಯಾ ಮೆಂಟರ್​​ ಆಗಿ ಎಂ. ಎಸ್ ಧೋನಿ ಆಯ್ಕೆಯಾಗಿರುವ ಬಗ್ಗೆ ಮಾತನಾಡಿದ ಕಪಿಲ್ ದೇವ್, ಮೆಂಟರ್​ ಆಗಿ ಧೋನಿ ಆಯ್ಕೆ ಸ್ವಾಗತಾರ್ಹ. ಆದರಿದು ತಂಡದ ಆಟಗಾರರಿಗೆ ಹೊಡೆತ ಬೀಳಲಿದೆ ಎಂದು ಹೇಳಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್​​​ಗೆ ನಿವೃತ್ತಿ ಘೋಷಿಸಿದ ಆಟಗಾರನನ್ನ, ಪುನಃ ತಂಡದಲ್ಲಿ ಯಾವುದಾದರೊಂದು ಜವಾಬ್ದಾರಿ ನೀಡಿ ಮರಳಿ ಕರೆತರಬೇಕಾದರೆ, ಕನಿಷ್ಠ 3-4 ವರ್ಷಗಳ ಅಂತರವಿರಬೇಕು. ಆದರೆ ಧೋನಿಯನ್ನ ಕೇವಲ ಒಂದು ವರ್ಷದ ನಂತರ ವಾಪಸ್​​​ ತಂದಿರೋದು ಒಂದು ವಿಶೇಷ ಎಂಬುದು ಅವರ ಅಭಿಪ್ರಾಯ.

US Open Final: ಯುಎಸ್ ಓಪನ್ ರೋಚಕ ಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡ ಹಾಲಿವುಡ್​ನ ಸ್ಟಾರ್ ನಟ-ನಟಿಯರು

Virat Kohli: ಬಿಸಿಸಿಐಯಿಂದ ಸದ್ಯದಲ್ಲೇ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಅತಿ ದೊಡ್ಡ ಘೋಷಣೆ: ಏನದು ಗೊತ್ತೇ?

(Jasprit Bumrah sensational Test-match bowler Kapil Dev reacts Bumrah breaking his record)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ