
ಬೆಂಗಳೂರು (ಏ. 07): ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2025ರ 10ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Mumbai Indians vs Royal Challengers Bengaluru) ಭರ್ಜರು ಬ್ಯಾಟಿಂಗ್ ಮಾಡಿದೆ. 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ಗಳ ಬೃಹತ್ ರನ್ ಕಲೆಹಾಕಿದೆ. ಈ ಮೂಲಕ ಎದುರಾಳಿಗೆ ಕಠಿಣ ಸವಾಲು ನೀಡಿದೆ. ವಿರಾಟ್ ಕೊಹ್ಲಿ ಹಾಗೂ ನಾಯಕ ರಜತ್ ಪಾಟಿದಾರ್ ಅರ್ಧಶತಕ ಸಿಡಿಸಿದರೆ, ಮತ್ತೊಂದೆಡೆ ಎಲ್ಲರ ಗಮನ ಸೆಳೆದಿದ್ದ ಜಿತೇಶ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್. ಇವರ ಆಟ ಆರ್ಸಿಬಿಯ ಮಾಜಿ ಬ್ಯಾಟರ್ ದಿನೇಶ್ ಕಾರ್ತಿಕ್ ಅವರನ್ನು ನೆನಪಿಸಿತು.
ಲಿಯಾಮ್ ಲಿವಿಂಗ್ಸ್ಟೋನ್ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಜಿತೇಶ್ ಶರ್ಮಾ ಆರಂಭದಿಂದಲೂ ಬಿರುಸಿನ ಆಟ ಪ್ರದರ್ಶಿಸಿದರು. ಇನ್ನಿಂಗ್ಸ್ನ ಕೊನೆಯ ಎಸೆದ ವರೆಗೂ ಕ್ರೀಸ್ನಲ್ಲಿ ಇದ್ದ ಇವರು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 19 ಎಸೆತಗಳಲ್ಲಿ 2 ಫೋರ್ ಹಾಗೂ 4 ಅಮೋಘ ಸಿಕ್ಸ್ ಸಿಡಿಸಿ ಅಜೇಯ 40 ರನ್ ಗಳಿಸಿ ತಂಡದ ಮೊತ್ತವನ್ನು 221ಕ್ಕೆ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಜಸ್ಪ್ರಿತ್ ಬುಮ್ರಾ ರಂತಹ ವಿಶ್ವ ಶ್ರೇಷ್ಠಾ ಬೌಲರ್ನ 20ನೇ ಓವರ್ನಲ್ಲಿ ಜಿತೇಶ್ ಸಿಡಿಸಿದ ಸಿಕ್ಸ್ ಅದ್ಭುತವಾಗಿತ್ತು.
ಮುಂಬೈ ಬೌಲರ್ಗಳ ಚೆಂಡಾಡಿದ ಜಿತೇಶ್ ಅವರ ಈ ಆಟ ನೋಡಲು ಥೇಟ್ ದಿನೇಶ್ ಕಾರ್ತಿಕ್ರಂತೇ ಇತ್ತು. ಕಳೆದ ಸೀಸನ್ಗಳಲ್ಲೆಲ್ಲ ಕಾರ್ತಿಕ್ ಆರ್ಸಿಬಿಗಾಗಿ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದರು. ಅಂತಿಮ ಹಂತದಲ್ಲಿ ಬಂದು ಸಿಕ್ಸರ್ಗಳ ಮಳೆ ಸುರಿಸಿ ತಂಡಕ್ಕೆ ನೆರವಾಗುತ್ತಿದ್ದರು. ಈ ಬಾರಿ ಅವರ ಸ್ಥಾನ ಯಾರು ತುಂಬ ಬಹುದು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೀಗ ಜಿತೇಶ್ ಶರ್ಮಾ ಮೂಲಕ ಉತ್ತರ ಸಿಕ್ಕಿದೆ. ಕಾರ್ತಿಕ್ರಂತೆ ಮಿಡ್ ವಿಕೆಟ್ ಮೇಲೆ, ಲಾಂಗ್ ಆನ್ ಮೇಲೆ ಶಾಟ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ ಜಿತೇಶ್.
IPL 2025: ಬುಮ್ರಾರನ್ನು ಸಿಕ್ಸರ್ ಮೂಲಕ ಸ್ವಾಗತಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ಮೊದಲ ಓವರ್ನ 2ನೇ ಎಸೆತದಲ್ಲಿ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್ಗೆ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಆಟವಾಡಿದರು. ಪವರ್ ಪ್ಲೇಯನ್ನು ಅತ್ಯುತ್ತಮವಾಗಿ ಉಪಯೋಗಿಸಿದ ಇವರು 6 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಅಂಚಿಗೆ ತಂದಿಟ್ಟರು. ಪಡಿಕ್ಕಲ್ 22 ಎಸೆತಗಳಲ್ಲಿ 37 ರನ್ ಸಿಡಿಸಿ ಔಟಾದರು.
ನಂತರ ನಾಯಕ ರಜತ್ ಪಾಟಿದಾರ್ ಜೊತೆಯಾದ ಕೊಹ್ಲಿ ಅದೇ ವೇಗದಲ್ಲಿ ರನ್ ಕಲೆಹಾಕಿದರು. ಕೊಹ್ಲಿ 42 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ನೊಂದಿಗೆ 67 ರನ್ ಬಾರಿಸಿದರೆ, ರಜತ್ 32 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್ನೊಂದಿಗೆ 64 ರನ್ ಚಚ್ಚಿದರು. ಈ ಮೂಲಕ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ ಕಲೆಹಾಕಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರೆ ವಿಘ್ನೇಶ್ ಪುತ್ತೂರ್ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ