IND vs ENG: ಕೆರಳಿಸಿದ ಕೊಹ್ಲಿ; ಅಮೋಘ ಶತಕ ಬಾರಿಸಿ ಉತ್ತರ ಕೊಟ್ಟ ಜಾನಿ ಬೈರ್‌ಸ್ಟೋವ್

| Updated By: ಪೃಥ್ವಿಶಂಕರ

Updated on: Jul 03, 2022 | 6:44 PM

IND vs ENG: ತಮ್ಮ ಅಮೋಘ ಫಾರ್ಮ್ ಮುಂದುವರಿಸಿರುವ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜಾನಿ ಬೈರ್ ಸ್ಟೋವ್ ಮತ್ತೊಂದು ಶತಕ ದಾಖಲಿಸಿದ್ದಾರೆ

IND vs ENG: ಕೆರಳಿಸಿದ ಕೊಹ್ಲಿ; ಅಮೋಘ ಶತಕ ಬಾರಿಸಿ ಉತ್ತರ ಕೊಟ್ಟ ಜಾನಿ ಬೈರ್‌ಸ್ಟೋವ್
Jonny Bairstow
Follow us on

ತಮ್ಮ ಅಮೋಘ ಫಾರ್ಮ್ ಮುಂದುವರಿಸಿರುವ ಇಂಗ್ಲೆಂಡ್ ಬ್ಯಾಟ್ಸ್​ಮನ್ ಜಾನಿ ಬೈರ್​ಸ್ಟೋವ್ (Jonny Bairstow) ಮತ್ತೊಂದು ಶತಕ ದಾಖಲಿಸಿದ್ದಾರೆ. ಭಾರತ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೂರನೇ ದಿನದಂದು ಬೇರ್‌ಸ್ಟೋವ್ ಶತಕ ಪೂರೈಸಿದರು. ಇದು ಅವರ ಸತತ ಮೂರನೇ ಟೆಸ್ಟ್ ಶತಕವಾಗಿದೆ. ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿರುವ ಬೈರ್‌ಸ್ಟೋವ್ ಭಾರತದ ವಿರುದ್ಧ ಕೇವಲ 119 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಶತಕದಿಂದ ಇಂಗ್ಲೆಂಡ್ ತಂಡವು ಕೆಟ್ಟ ಪರಿಸ್ಥಿತಿಯಿಂದ ಚೇತರಿಸಿಕೊಂಡಿತು. ಬೈರ್‌ಸ್ಟೋವ್ ಅವರ ಬ್ಯಾಟಿಂಗ್ ಆರಂಭದಲ್ಲಿ ಅದ್ಭುತವಾಗಿರಲಿಲ್ಲ, ಆದರೆ ಮೊದಲ ಸೆಷನ್‌ನ ಆರಂಭಿಕ ಕ್ಷಣಗಳಲ್ಲಿ ಬೈರ್‌ಸ್ಟೋವ್ ಮೇಲೆ ಮೌಖಿಕ ದಾಳಿ ಮಾಡಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯದ ಮೂರನೇ ದಿನದಂದು, ಬೈರ್‌ಸ್ಟೋವ್ 13 ರನ್‌ಗಳಿಂದ ತನ್ನ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿದರು. ಎರಡನೇ ದಿನದ ಕೊನೆಯ ಸೆಷನ್‌ನಲ್ಲಿರುವ ಅದೇ ಪರಿಸ್ಥಿತಿಯನ್ನು ಮೊದಲ ಅರ್ಧ ಗಂಟೆಯಲ್ಲಿ ಎದುರಿಸಿದರು. ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ ಜೋಡಿಯು ಅವರನ್ನು ನಿರಂತರವಾಗಿ ತೊಂದರೆಗೊಳಿಸುತ್ತಿತ್ತು. ನಂತರ ಅವರು ವಿರಾಟ್ ಕೊಹ್ಲಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಆ ಸಮಯದಲ್ಲಿ ಬೈರ್‌ಸ್ಟೋವ್ ಅವರ ಸ್ಕೋರ್ 61 ಎಸೆತಗಳಲ್ಲಿ 13 ರನ್ ಆಗಿತ್ತು.

ಇಲ್ಲಿಂದ ಬೈರ್‌ಸ್ಟೋ ತನ್ನ ಗೇರ್ ಬದಲಾಯಿಸಲು ಪ್ರಾರಂಭಿಸಿ ಭಾರತೀಯ ಬೌಲರ್‌ಗಳನ್ನು ಗುರಿಯಾಗಿಸಿದರು. ಅವರು ಶಮಿ, ಬುಮ್ರಾ ಮತ್ತು ಸಿರಾಜ್ ವಿರುದ್ಧ ಲಾಂಗ್ ಆನ್, ಲಾಂಗ್ ಆಫ್ ಮತ್ತು ಸ್ಕ್ವೇರ್ ಲೆಗ್‌ನಲ್ಲಿ ಹೆಚ್ಚಿನ ಹೊಡೆತಗಳನ್ನು ಆಡಿದರು ಮತ್ತು ಬೌಂಡರಿಗಳನ್ನು ಪಡೆದರು. ಶೀಘ್ರದಲ್ಲೇ ಅವರು ಮುಂದಿನ 20 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು. ಮಳೆಯಿಂದಾಗಿ ಸೆಷನ್​ನನ್ನು ರದ್ದುಗೊಳಿಸಲಾಯಿತು. ಆ ಸಮಯದಲ್ಲಿ ಬೈರ್‌ಸ್ಟೋವ್ ಅವರ ಸ್ಕೋರ್ 110 ಎಸೆತಗಳಲ್ಲಿ 91 ರನ್ ಆಗಿತ್ತು.

ಇದನ್ನೂ ಓದಿ
IND vs ENG: ಕೊರೊನಾದಿಂದ ಚೇತರಿಸಿಕೊಂಡ ಹಿಟ್‌ಮ್ಯಾನ್ ರೋಹಿತ್; ಸೀಮಿತ ಓವರ್‌ಗಳ ಸರಣಿಗೆ ಸಿದ್ಧತೆ
IND vs ENG: 6 ಎಸೆತಗಳಲ್ಲಿ ವಿಶ್ವದಾಖಲೆ ಬರೆದ ಬಮ್ರಾ; ಕೊಹ್ಲಿ- ದ್ರಾವಿಡ್ ಸೆಲೆಬ್ರೇಷನ್ ಹೇಗಿತ್ತು ಗೊತ್ತಾ?

ಊಟದ ನಂತರದ ಎರಡನೇ ಸೆಷನ್‌ನಲ್ಲಿ ಬೈರ್‌ಸ್ಟೋ ಹೆಚ್ಚು ತಡಮಾಡದೆ ಶತಕ ಪೂರೈಸಿದರು. ಶಾರ್ದೂಲ್ ಠಾಕೂರ್ ಅವರ ಚೆಂಡನ್ನು ನಾಲ್ಕು ರನ್‌ಗಳಿಗೆ ಕಳುಹಿಸುವ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 11 ನೇ ಶತಕವನ್ನು ಪೂರ್ಣಗೊಳಿಸಿದರು. ಈ ವೇಳೆ ಅವರು 14 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು.

ಬೈರ್‌ಸ್ಟೋ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಆಶಸ್ ಸರಣಿಯಲ್ಲಿ ಶತಕ ಬಾರಿಸಿದ ನಂತರ ಈ ವರ್ಷ ಒಟ್ಟು 5 ಶತಕಗಳನ್ನು ಗಳಿಸಿದ್ದಾರೆ. ಜೋ ರೂಟ್ ನಂತರ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ್ದು ಅವರ ಬ್ಯಾಟ್. ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಬೈರ್‌ಸ್ಟೋವ್ ಶತಕ ಬಾರಿಸಿದ್ದರು. ಇದರ ನಂತರ, ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಸರಣಿಯ ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಸತತ ಶತಕಗಳನ್ನು ಗಳಿಸಿದರು. ಇದೀಗ ಭಾರತದ ವಿರುದ್ಧದ ಮೊದಲ ಶತಕದೊಂದಿಗೆ ಅವರು ಸತತ ಮೂರನೇ ಟೆಸ್ಟ್ನಲ್ಲಿ ಶತಕವನ್ನು ಪೂರ್ಣಗೊಳಿಸಿದರು.

Published On - 6:20 pm, Sun, 3 July 22