ನ್ಯೂಝಿಲೆಂಡ್ ತಂಡ ಪ್ರಕಟ: ಕೊನೆಗೂ ಸ್ಥಾನ ಪಡೆದ ಕೇನ್ ವಿಲಿಯಮ್ಸನ್

New Zealand vs England series: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಏಕದಿನ ಸರಣಿ ಶುರುವಾಗಲಿದೆ. ಅಕ್ಟೋಬರ್ 26 ರಿಂದ ಆರಂಭವಾಗಲಿರುವ ಈ ಸರಣಿಗಾಗಿ ಬಲಿಷ್ಠ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರುಗಳ ಈ ತಂಡದಲ್ಲಿ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಕಾಣಿಸಿಕೊಂಡಿರುವುದು ವಿಶೇಷ.

ನ್ಯೂಝಿಲೆಂಡ್ ತಂಡ ಪ್ರಕಟ: ಕೊನೆಗೂ ಸ್ಥಾನ ಪಡೆದ ಕೇನ್ ವಿಲಿಯಮ್ಸನ್
New Zealand

Updated on: Oct 21, 2025 | 11:00 AM

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರುಗಳ ಈ ತಂಡದಲ್ಲಿ ಕೇನ್ ವಿಲಿಯಮ್ಸನ್ ಕಾಣಿಸಿಕೊಂಡಿರುವುದು ವಿಶೇಷ. ಅಂದರೆ ಕಳೆದ 7 ತಿಂಗಳುಗಳಿಂದ ವಿಲಿಯಮ್ಸನ್ ಯಾವುದೇ ರಾಷ್ಟ್ರೀಯ ಪಂದ್ಯವಾಡಿರಲಿಲ್ಲ.

ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಕೆಲ ಸರಣಿಗಳಿಂದ ಹೊರಗಿಡಲಾಗಿತ್ತು. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದೀಗ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಏಳು ತಿಂಗಳುಗಳ ಬಳಿಕ ಮತ್ತೆ ಕಣಕ್ಕಿಳಿಯಲು ಕೇನ್ ಸಜ್ಜಾಗಿದ್ದಾರೆ.

ಇನ್ನು ನ್ಯೂಝಿಲೆಂಡ್ ಏಕದಿನ ತಂಡದ ನಾಯಕರಾಗಿ ಮಿಚೆಲ್ ಸ್ಯಾಂಟ್ನರ್ ಮುಂದುವರೆದಿದ್ದು, ವಿಕೆಟ್ ಕೀಪರ್ ಆಗಿ ಟಾಮ್ ಲ್ಯಾಥಮ್ ಆಯ್ಕೆಯಾಗಿದ್ದಾರೆ. ಹಾಗೆಯೇ ಆಲ್​ರೌಂಡರ್ ಸ್ಥಾನದಲ್ಲಿ ಮೈಕೆಲ್​ ಬ್ರೇಸ್​ವೆಲ್ ಹಾಗೂ ರಚಿನ್ ರವೀಂದ್ರಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಇದಾಗ್ಯೂ ಗಾಯದಿಂದ ಬಳಲುತ್ತಿರುವ ಆಲ್​ರೌಂಡರ್ ಗ್ಲೆನ್ ಫಿಲಿಪ್, ವೇಗಿ ವಿಲಿಯಮ್ ಒರೋಕ್, ಲಾಕಿ ಫರ್ಗುಸನ್ ಈ ಸರಣಿಗೂ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ತಂಡದಲ್ಲಿ ಕೈಲ್ ಜೇಮಿಸನ್, ಮಾರ್ಕ್​ ಚಾಪ್​ಮನ್, ಜೇಕಬ್ ಡಫಿ ಕಾಣಿಸಿಕೊಂಡಿದ್ದಾರೆ. ಅದರಂತೆ ನ್ಯೂಝಿಲೆಂಡ್ ಏಕದಿನ ತಂಡ ಈ ಕೆಳಗಿನಂತಿದೆ…

ನ್ಯೂಝಿಲೆಂಡ್ ಏಕದಿನ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.

ನ್ಯೂಝಿಲೆಂಡ್ vs ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ:

  • ಅಕ್ಟೋಬರ್ 26- ನ್ಯೂಝಿಲೆಂಡ್ vs ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ (ಮೌಂಟ್ ಮಂಗನುಯಿ)
  • ಅಕ್ಟೋಬರ್ 29- ನ್ಯೂಝಿಲೆಂಡ್ vs ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯ (ಹ್ಯಾಮಿಲ್ಟನ್)
  • ನವೆಂಬರ್ 1- ನ್ಯೂಝಿಲೆಂಡ್ vs ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ (ವೆಲ್ಟಿಂಗ್ಟನ್)

ಇದನ್ನೂ ಓದಿ: ಸಿಕ್ಸ್ ಸಿಡಿಸಿಯೇ ಭರ್ಜರಿ ದಾಖಲೆ ಬರೆದ ಫಿಲ್ ಸಾಲ್ಟ್

ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವೊನ್ ಜೇಕಬ್ಸ್, ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಮತ್ತು ಟಿಮ್ ಸೀಫರ್ಟ್ (ವಿಕೆಟ್ ಕೀಪರ್).

 

 

Published On - 10:59 am, Tue, 21 October 25

Follow Us