IPL 2026: ಆರ್‌ಸಿಬಿ ಗ್ರೀನ್ ಜೆರ್ಸಿ ತೊಡುವುದು ಏಕೆ? ಈ ಜೆರ್ಸಿಯ ವಿಶೇಷತೆ ಏನು?
RCB vs DC Green Jersey Clash at Chinnaswamy: ಐಪಿಎಲ್ 2026ರ 26ನೇ ಪಂದ್ಯದಲ್ಲಿ RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಚಿನ್ನಸ್ವಾಮಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ RCB ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಡೆಲ್ಲಿ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್, ಕರುಣ್ ನಾಯರ್ ಇರುವುದರಿಂದ ಇದು "ಕನ್ನಡಿಗರು vs ಕರ್ನಾಟಕ" ಕದನವಾಗಲಿದೆ. ಪರಿಸರ ಜಾಗೃತಿಗಾಗಿ RCB 2011ರಿಂದ ಗ್ರೀನ್ ಜೆರ್ಸಿ ಅಭಿಯಾನ ನಡೆಸುತ್ತಿದೆ. ಗ್ರೀನ್ ಜೆರ್ಸಿಯಲ್ಲಿ RCB ಹಿಂದಿನ ಪ್ರದರ್ಶನವೂ ಲೇಖನದಲ್ಲಿದೆ.

ಐಪಿಎಲ್ 2026 (IPL 2026) ರ 26ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳ ನಡುವೆ ನಡೆಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30 ರಿಂದ ಆರಂಭವಾಗಲಿರುವ ಈ ಪಂದ್ಯ ಕನ್ನಡಿಗರು vs ಕರ್ನಾಟಕದ ತಂಡದ ನಡುವಿನ ಕಾಳಗ ಎನ್ನಬಹುದು. ಏಕೆಂದರೆ ಡೆಲ್ಲಿ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಇದ್ದಾರೆ. ಹೀಗಾಗಿ ಈ ಪಂದ್ಯ ಕನ್ನಡಿಗರಿಗೆ ತುಂಬಾ ವಿಶೇಷವಾಗಿರಲಿದೆ. ಇನ್ನು ಈ ಪಂದ್ಯವನ್ನು ಮತ್ತಷ್ಟು ವಿಶೇಷಗೊಳಿಸುವ ಸಲುವಾಗಿ ಆರ್‌ಸಿಬಿ ಈ ಪಂದ್ಯದಲ್ಲಿ ಗ್ರೀನ್ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದೆ.
ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ
ವಾಸ್ತವವಾಗಿ, 2011 ರ ಐಪಿಎಲ್ ಆವೃತ್ತಿಯಿಂದ ಆರ್‌ಸಿಬಿ ತಂಡ ಸೀಸನ್ನಲ್ಲಿ ಆಡುವ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ತನ್ನ ಅಭಿಮಾನಿಗಳಲ್ಲಿ ಸ್ವಚ್ಛ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಸಿಬಿ ಈ ಹಸಿರು ಜೆರ್ಸಿಯನ್ನು ಧರಿಸಲಿದೆ. ಅದರಂತೆ ಈ ಬಾರಿಯೂ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಸಿರು ಜೆರ್ಸಿ ತೊಟ್ಟು ಆಡಲಿದೆ. ತಂಡದ ಹೊಸ ಜೆರ್ಸಿ ಸಾಕಷ್ಟು ಆಕರ್ಷಕವಾಗಿದೆ. ಈ ಜೆರ್ಸಿಯ ಟೀ ಶರ್ಟ್‌ನಲ್ಲಿ ಹಸಿರು ಮತ್ತು ನೀಲಿ ಬಣ್ಣಗಳನ್ನು ಬಳಸಲಾಗಿದೆ.
𝗜𝘁’𝘀 𝘁𝗵𝗮𝘁 𝘁𝗶𝗺𝗲 𝗼𝗳 𝘁𝗵𝗲 𝘆𝗲𝗮𝗿 𝗮𝗴𝗮𝗶𝗻 – 𝗹𝗲𝘁’𝘀 𝗚𝗼 𝗚𝗿𝗲𝗲𝗻! 😍💚
More than a tradition. A purpose we wear with pride. 🙌
Tomorrow, our boys take the field donning the Green Jersey against Delhi, to raise awareness by pledging to protect the… pic.twitter.com/UzvgUdXllf
— Royal Challengers Bengaluru (@RCBTweets) April 17, 2026
ಗ್ರೀನ್ ಜೆರ್ಸಿಯಲ್ಲಿ ದಾಖಲೆ
ಮೇಲೆ ಹೇಳಿದಂತೆ 2011 ರಿಂದ, ಆರ್‌ಸಿಬಿ ಪ್ರತಿ ಐಪಿಎಲ್ ಆವೃತ್ತಿಯಲ್ಲಿ ಹಸಿರು ಜೆರ್ಸಿ ಧರಿಸಿ ಒಂದು ಪಂದ್ಯವನ್ನು ಆಡುತ್ತದೆ. ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಈ ಜೆರ್ಸಿಯನ್ನು ಆರ್‌ಸಿಬಿ ಮಧ್ಯಾಹ್ನದ ಪಂದ್ಯಗಳಲ್ಲಿ ಧರಿಸಿ ಆಡುತ್ತದೆ. ಇನ್ನು ಹಸಿರು ಜೆರ್ಸಿಯಲ್ಲಿ ಆರ್‌ಸಿಬಿಯ ರಿಪೋರ್ಟ್ ಕಾರ್ಡ್ ನೋಡುವುದಾದರೆ.. ಆರ್‌ಸಿಬಿ ಇದುವರೆಗೆ ಹಸಿರು ಜೆರ್ಸಿ ತೊಟ್ಟು 15 ಪಂದ್ಯಗಳನ್ನಾಡಿದೆ. ಇದರಲ್ಲಿ ಕೇವಲ 5 ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ 9 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
IPL 2026: ಆರ್‌ಸಿಬಿ ನಾಯಕನ ಈ ಎರಡು ಗುಣಗಳನ್ನು ಮನಸಾರೆ ಮೆಚ್ಚಿಕೊಂಡ ಶ್ರೇಯಸ್ ಅಯ್ಯರ್
ಇನ್ನು ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ವಿರುದ್ಧ ಗ್ರೀನ್ ಜೆರ್ಸಿ ತೊಟ್ಟು ಆಡಿದ್ದ ಆರ್‌ಸಿಬಿ ಭರ್ಜರಿ ಗೆಲುವು ದಾಖಲಿಸಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ಆರಂಭಿಕರಾದ ಫಿಲ್ ಸಾಲ್ಟ್ (65) ಹಾಗೂ ವಿರಾಟ್ ಕೊಹ್ಲಿ (62) ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಹೀಗಾಗಿ ಈ ಬಾರಿಯೂ ಅದೇ ಪ್ರದರ್ಶನವನ್ನು ಮುಂದುವರೆಸಲು ಆರ್‌ಸಿಬಿ ಪ್ರಯತ್ನಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




