AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಝಿಲೆಂಡ್ ತಂಡ ಪ್ರಕಟ: 7 ಪ್ರಮುಖ ಆಟಗಾರರು ಅಲಭ್ಯ

New Zealand vs England T20 Series: ನ್ಯೂಝಿಲೆಂಡ್-ಇಂಗ್ಲೆಂಡ್ ನಡುವಣ ಸರಣಿಯು ಅಕ್ಟೋಬರ್ 18 ರಿಂದ ಶುರುವಾಗಲಿದೆ. ನ್ಯೂಝಿಲೆಂಡ್​ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಗಾಗಿ ಇದೀಗ 14 ಸದಸ್ಯರುಗಳ ನ್ಯೂಝಿಲೆಂಡ್ ತಂಡವನ್ನು ಘೋಷಿಸಲಾಗಿದೆ.

ನ್ಯೂಝಿಲೆಂಡ್ ತಂಡ ಪ್ರಕಟ: 7 ಪ್ರಮುಖ ಆಟಗಾರರು ಅಲಭ್ಯ
New Zealand
ಝಾಹಿರ್ ಯೂಸುಫ್
|

Updated on:Oct 13, 2025 | 2:20 PM

Share

ಇಂಗ್ಲೆಂಡ್ ವಿರುದ್ಧದ ಸರಣಿಗೆ ನ್ಯೂಝಿಲೆಂಡ್ ಟಿ20 ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಕೇನ್ ವಿಲಿಯಮ್ಸನ್ ವಿಫಲರಾಗಿದ್ದಾರೆ. ಇದಾಗ್ಯೂ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಕೇನ್ ವಿಲಿಯಮ್ಸನ್ ಅಲ್ಲದೆ, ತಂಡದ ಪ್ರಮುಖ ವೇಗಿ ಬೆನ್ ಸಿಯರ್ಸ್ ಕೂಡ ಟಿ20 ತಂಡದಲ್ಲಿ ಕಾಣಿಸಿಕೊಂಡಿಲ್ಲ. ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ಸಿಯರ್ಸ್ ಹೊರಗುಳಿದರೆ, ಕಾಲಿನ ನೋವಿನ ಕಾರಣ ಫಿನ್ ಅಲೆನ್ ಈ ಸರಣಿಗೆ ಅಲಭ್ಯರಾಗಿದ್ದಾರೆ.

ಇನ್ನು ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಆ್ಯಡಂ ಮಿಲ್ನ್ ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಬೆನ್ನು ನೋವಿನ ಕಾರಣ ವಿಲಿಯಮ್ ಒರೋಕ್ ಸಹ ಈ ಸರಣಿಯಿಂದ ಹಿಂದೆ ಸರಿದಿದ್ದಾರೆ.

ಹಾಗೆಯೇ ತೊಡೆಸಂಧು ಗಾಯದ ಸಮಸ್ಯೆಯಿಂದಾಗಿ ಗ್ಲೆನ್ ಫಿಲಿಪ್ಸ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಜಾಣಿಸಿಕೊಳ್ಳುವುದಿಲ್ಲ. ಹಾಗೆಯೇ ಮಂಡಿರಜ್ಜು ಸಮಸ್ಯೆಯಿಂದಾಗಿ ಪ್ರಮುಖ ವೇಗಿ ಲಾಕಿ ಫರ್ಗುಸನ್ ಈ ಸರಣಿಗೆ ಅಲಭ್ಯರಾಗಿದ್ದಾರೆ.

ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವೊನ್ ಜೇಕಬ್ಸ್, ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಮತ್ತು ಟಿಮ್ ಸೀಫರ್ಟ್ (ವಿಕೆಟ್ ಕೀಪರ್).

ನ್ಯೂಝಿಲೆಂಡ್ ತಂಡದಿಂದ ಹೊರಗುಳಿದಿರುವ ಆಟಗಾರರು:

  • ಬೆನ್ ಸಿಯರ್ಸ್
  • ಗ್ಲೆನ್ ಫಿಲಿಪ್ಸ್
  • ಫಿನ್ ಅಲೆನ್
  • ವಿಲಿಯಮ್ ಒರೋಕ್
  • ಲಾಕಿ ಫರ್ಗುಸನ್
  • ಆ್ಯಡಂ ಮಿಲ್ನ್
  • ಕೇನ್ ವಿಲಿಯಮ್ಸನ್.

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಝಾಕ್ ಕ್ರಾಲಿ, ಜೇಕಬ್ ಬೆಥೆಲ್, ಲಿಯಾಮ್ ಡಾಸನ್, ಜೇಮೀ ಓವರ್ಟನ್, ಸ್ಯಾಮ್ ಕರನ್, ರೆಹಾನ್ ಅಹ್ಮದ್, ಟಾಮ್ ಬ್ಯಾಂಟನ್ (ವಿಕೆಟ್ ಕೀಪರ್), ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸೋನಿ ಬೇಕರ್, ಲ್ಯೂಕ್ ವುಡ್, ಆದಿಲ್ ರಶೀದ್, ಬ್ರೈಡನ್ ಕಾರ್ಸ್.

ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್ 

ಇಂಗ್ಲೆಂಡ್-ನ್ಯೂಝಿಲೆಂಡ್ ಸರಣಿ ವೇಳಾಪಟ್ಟಿ:

  • ಅಕ್ಟೋಬರ್ 18- ಮೊದಲ ಟಿ20 ಪಂದ್ಯ
  • ಅಕ್ಟೋಬರ್ 20- ಎರಡನೇ ಟಿ20 ಪಂದ್ಯ
  • ಅಕ್ಟೋಬರ್ 23- ಮೂರನೇ ಟಿ20 ಪಂದ್ಯ

Published On - 2:19 pm, Mon, 13 October 25

Follow Us
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್