IPL 2026 GT vs KKR: ಸತತ 6ನೇ ಪಂದ್ಯದಲ್ಲೂ ಕೆಕೆಆರ್ಗೆ ದಕ್ಕದ ಜಯ
GT Dominates KKR in IPL 2026 Match 25: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2026ರ 25ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಕೆಕೆಆರ್ ತಂಡವನ್ನು ಮಣಿಸಿ ಮೂರನೇ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಇತ್ತ ಕೆಕೆಆರ್ ತಂಡವು ತನ್ನ ಮೊದಲ ಗೆಲುವಿಗಾಗಿ ಹೋರಾಡುತ್ತಿದ್ದು, ಆಡಿದ 6 ಪಂದ್ಯಗಳಲ್ಲಿ 5 ಸೋತು ನಿರಾಸೆ ಮೂಡಿಸಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಐಪಿಎಲ್ 2026 (IPL 2026) ರ 25ನೇ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿದ ಗುಜರಾತ್ ಟೈಟಾನ್ಸ್ (KKR vs GT) ಲೀಗ್ನಲ್ಲಿ ಮೂರನೇ ಗೆಲುವು ದಾಖಲಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಲೀಗ್ನಲ್ಲಿ ತನ್ನ ಮೊದಲ ಗೆಲುವಿಗಾಗಿ ಹಂಬಲಿಸುತ್ತಿರುವ ಕೆಕೆಆರ್ ತಂಡಕ್ಕೆ ಗೆಲುವು ಎಂಬುದು ಗಗನ ಕುಸುಮವಾದಂತ್ತಾಗಿದೆ. ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ. ಉಳಿದಂತೆ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 180 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಗುಜರಾತ್ 5 ವಿಕೆಟ್ಗಳಿಂದ ಜಯದ ನಗೆ ಬೀರಿತು.
ಕೆಕೆಆರ್ಗೆ ಆರಂಭಿಕ ಆಘಾತ
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಬ್ಯಾಟಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ರಹಾನೆ ಆಯ್ಕೆ ತಪ್ಪು ಎಂಬುದು ಸಾಭೀತಾಯಿತು. ತಂಡವು ಕೇವಲ 32 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ರೋವ್‌ಮನ್ ಪೊವೆಲ್ (27) ಮತ್ತು ಕ್ಯಾಮರೂನ್ ಗ್ರೀನ್ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಸ್ಥಿರಗೊಳಿಸಿದರು. ನಂತರ ತಂಡದ ಪರ ಗ್ರೀನ್ (79) ಏಕಾಂಗಿ ಹೋರಾಟ ನಡೆಸಿ ಮೊದಲ ಅರ್ಧಶತಕವನ್ನು ಗಳಿಸಿದರು. ಆದಾಗ್ಯೂ, ಕೊನೆಯ ಐದು ಓವರ್‌ಗಳಲ್ಲಿ ಕೋಲ್ಕತ್ತಾ ಕೇವಲ 32 ರನ್‌ಗಳನ್ನು ಗಳಿಸಿತು, ಇದರ ಪರಿಣಾಮವಾಗಿ 180 ರನ್‌ಗಳ ಆಲೌಟ್ ಆಯಿತು. ಗುಜರಾತ್ ಪರ ರಬಾಡ ಮೂರು ವಿಕೆಟ್‌ಗಳನ್ನು ಪಡೆದರೆ, ಸಿರಾಜ್ ಮತ್ತು ಅಶೋಕ್ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು.
IPL 2026: ಆರ್ಸಿಬಿ ಗ್ರೀನ್ ಜೆರ್ಸಿ ತೊಡುವುದು ಏಕೆ? ಈ ಜೆರ್ಸಿಯ ವಿಶೇಷತೆ ಏನು?
ಕೊನೆಯ ಓವರ್‌ನಲ್ಲಿ ಗೆದ್ದ ಗುಜರಾತ್
ಗುರಿ ಬೆನ್ನಟ್ಟಿದ ಗುಜರಾತ್ ಪರ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ (22) ಮತ್ತೊಮ್ಮೆ ಅರ್ಧಶತಕದ ಜೊತೆಯಾಟದಲ್ಲಿ 57 ರನ್ ಸೇರಿಸಿದರು. ನಂತರ ಜೋಸ್ ಬಟ್ಲರ್ (25) ಕೂಡ ಕೆಲವು ದೊಡ್ಡ ಹೊಡೆತಗಳನ್ನು ಹೊಡೆದು ಔಟಾದರು. ಆದಾಗ್ಯೂ, ನಾಯಕ ಶುಭಮನ್ ಗಿಲ್ (86) ಕ್ರೀಸ್‌ನಲ್ಲಿಯೇ ಉಳಿದು, ಸತತ ಮೂರನೇ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಆದಾಗ್ಯೂ, ಅವರು ತಮ್ಮ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಗೆಲುವಿಗೆ ಕೆಲವೇ ರನ್‌ಗಳ ದೂರದಲ್ಲಿ ಔಟಾದರು. ಆದರೆ ಗ್ಲೆನ್ ಫಿಲಿಪ್ಸ್ ಮತ್ತು ರಾಹುಲ್ ಟೆವಾಟಿಯಾ ಒಟ್ಟಾಗಿ ಅಂತಿಮ ಓವರ್‌ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 pm, Fri, 17 April 26




