KKR vs RCB Weather Report: ಫ್ಯಾನ್ಸ್​ಗೆ ಕೆಟ್ಟ ಸುದ್ದಿ: ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಕೆಕೆಆರ್-ಆರ್​ಸಿಬಿ ಪಂದ್ಯ ರದ್ದಾಗುವ ಸಾಧ್ಯತೆ

| Updated By: Vinay Bhat

Updated on: Mar 21, 2025 | 11:16 AM

IPL 2025 Match 1st Weather Report: ಐಪಿಎಲ್ 2025 ರ ಋತುವು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಜನಪ್ರಿಯ ಗಾಯಕಿಯರಾದ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಮತ್ತು ನಟಿ ದಿಶಾ ಪಟಾನಿ ಪ್ರದರ್ಶನ ನೀಡಲಿದ್ದಾರೆ. ಆದಾಗ್ಯೂ, ಮಾರ್ಚ್ 22 ರವರೆಗೆ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

KKR vs RCB Weather Report: ಫ್ಯಾನ್ಸ್​ಗೆ ಕೆಟ್ಟ ಸುದ್ದಿ: ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಕೆಕೆಆರ್-ಆರ್​ಸಿಬಿ ಪಂದ್ಯ ರದ್ದಾಗುವ ಸಾಧ್ಯತೆ
Kkr Vs Rcb Ipl 2025
Follow us on

ಬೆಂಗಳೂರು (ಮಾ. 21): ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ಆರಂಭಕ್ಕೆ ಈಗ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಐಪಿಎಲ್‌ನ ಹೊಸ ಸೀಸನ್ ಮಾರ್ಚ್ 22 ರಂದು ಅಂದರೆ ಶನಿವಾರ ಪ್ರಾರಂಭವಾಗಲಿದೆ. ಅಭಿಮಾನಿಗಳಂತು ಈ ಹೊಡಿಬಡಿ ಆಟದ ವೀಕ್ಷಣೆಗೆ ಕಾದು ಕುಳಿತಿದ್ದಾರೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕಳೆದ 18 ವರ್ಷಗಳಲ್ಲಿ ಎರಡೂ ತಂಡಗಳ ನಡುವೆ ಅನೇಕ ಹೈವೋಲ್ಟೇಜ್ ಪಂದ್ಯ ನಡೆದಿದ್ದು, ಈ ಬಾರಿ ಕೂಡ ರೋಚಕ ಕಾದಾಟ ನಿರೀಕ್ಷಿಸಲಾಗಿದೆ. ಆದರೆ, ಐಪಿಎಲ್ ಅಭಿಮಾನಿಗಳಿಗೆ ಒಂದು ಕೆಟ್ಟ ಸುದ್ದಿ ಹೊರಬಿದ್ದಿದೆ. ಐಪಿಎಲ್ 2025 ರ ಉದ್ಘಾಟನಾ ಪಂದ್ಯ ರದ್ದಾಗುವ ಸಾಧ್ಯತೆಯಿದೆ.

ಮಳೆಯಿಂದಾಗಿ ಕೆಕೆಆರ್- ಆರ್​ಸಿಬಿ ಪಂದ್ಯ ರದ್ದಾಗುವ ಸಾಧ್ಯತೆ:

ಐಪಿಎಲ್ 2025 ರ ಋತುವು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಜನಪ್ರಿಯ ಗಾಯಕಿಯರಾದ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಮತ್ತು ನಟಿ ದಿಶಾ ಪಟಾನಿ ಪ್ರದರ್ಶನ ನೀಡಲಿದ್ದಾರೆ. ಆದಾಗ್ಯೂ, ಮಾರ್ಚ್ 22 ರವರೆಗೆ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯವು ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯ ಇದೆ.

ಇದನ್ನೂ ಓದಿ
ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್; ಚಾಹಲ್​ಗೂ ಕೌಂಟರ್
ವಿಚ್ಛೇದನ ಪಡೆದ ದಿನ ಹಾಡಿನ ಮೂಲಕ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದ ಧನಶ್ರೀ
ನಾಯಕರ ನಿಷೇಧಕ್ಕೆ ಬ್ರೇಕ್ ಹಾಕಿದ ಬಿಸಿಸಿಐ ಬದಲಿಯಾಗಿ ತಂದಿದ್ದು ಯಾವ ನಿಯಮ?
ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ; ಗುವಾಹಟಿಗೆ ಪಂದ್ಯ ಶಿಫ್ಟ್

 

ಕೋಲ್ಕತ್ತಾದ ಪ್ರಾದೇಶಿಕ ಹವಾಮಾನ ಕೇಂದ್ರವು ಮಾರ್ಚ್ 20 ರಿಂದ 22 ರವರೆಗೆ ಪಶ್ಚಿಮ ಬಂಗಾಳದ ಕೆಲವು ಭಾಗಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಪ್ರಾದೇಶಿಕ ಹವಾಮಾನ ಮುನ್ಸೂಚನಾ ಸಂಸ್ಥೆ, ‘‘2025 ರ ಮಾರ್ಚ್ 20 ರಿಂದ 22 ರವರೆಗೆ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ’’ ಎಂದು ಹೇಳಿದೆ. ಬಂಗಾಳಕೊಲ್ಲಿಯಿಂದ ಕೆಳ ಉಷ್ಣವಲಯದ ಮಟ್ಟದಲ್ಲಿ ಗಾಳಿ ಮತ್ತು ತೇವಾಂಶ ಇರುವುದರಿಂದ, ಮಾರ್ಚ್ 20 ರಿಂದ 22 ರವರೆಗೆ ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಗಾಳಿ ಮತ್ತು ಮಿಂಚು ಮಳೆಯಾಗುವ ಸಾಧ್ಯತೆಯಿದೆ.

ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್ ಕೊಟ್ಟ ಚಾಹಲ್; ಕೌಂಟರ್ ಕೊಟ್ಟ ವರ್ಮಾ

ಈ ಪಂದ್ಯ ರದ್ದಾದರೆ ಏನು ನಿಯಮ?:

ಮಳೆಯಿಂದಾಗಿ ಪಂದ್ಯ ರದ್ದಾದರೆ, ಕೆಕೆಆರ್ ಮತ್ತು ಆರ್‌ಸಿಬಿ ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ಸಿಗುತ್ತದೆ. ಹೊಸ ನಾಯಕರ ನಾಯಕತ್ವದಲ್ಲಿ ಎರಡೂ ತಂಡಗಳು ಹೊಸ ಋತುವನ್ನು ಗೆಲುವಿನೊಂದಿಗೆ ಆರಂಭಿಸಲು ಬಯಸುತ್ತಿವೆ. ಕೆಕೆಆರ್ ತಂಡವನ್ನು ಅಜಿಂಕ್ಯಾ ರಹಾನೆ ಮುನ್ನಡೆಸಿದರೆ, ಆರ್‌ಸಿಬಿ ತಂಡಕ್ಕೆ ರಜತ್ ಪಾಟಿದಾರ್ ಕ್ಯಾಪ್ಟನ್ ಆಗಿದ್ದಾರೆ.

ಆರ್‌ಸಿಬಿಗೆ ಕೆಕೆಆರ್ ವಿರುದ್ಧ ಕಠಿಣ ಸವಾಲು:

ಬೆಂಗಳೂರು ತಂಡದ ಮೇಲೆ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲುಗೈ ಸಾಧಿಸಿದೆ. ಈವರೆಗೆ ಎರಡೂ ತಂಡಗಳ ನಡುವೆ 34 ಪಂದ್ಯಗಳು ನಡೆದಿದ್ದು, ಕೋಲ್ಕತ್ತಾ 20 ಪಂದ್ಯಗಳಲ್ಲಿ ಗೆದ್ದಿದ್ದರೆ, ಬೆಂಗಳೂರು 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಪ್ರಮುಖ ವಿಷಯವೆಂದರೆ ಎರಡೂ ತಂಡಗಳ ಒಂದೇ ಒಂದು ಪಂದ್ಯವೂ ಮಳೆಯಿಂದಾಗಲಿ ಅಥವಾ ಇನ್ಯಾವುದೇ ಕಾರಣದಿಂದಾಗಿಯಾಗಲಿ ರದ್ದಾಗಿಲ್ಲ. ಪ್ರತಿಯೊಂದು ಪಂದ್ಯದ ಫಲಿತಾಂಶ ಹೊರಬಂದಿದೆ. ಆದರೆ ಮಾರ್ಚ್ 22 ರಂದು ಕೋಲ್ಕತ್ತಾದ ಹವಾಮಾನ ಬೇರೆಯದೆ ಆಗಿದ್ದು, ಪಂದ್ಯ ನಡೆಯುತ್ತ ಅಥವಾ ಇಲ್ಲವೇ ಎಂಬುದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ