AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಏಕದಿನ ತಂಡದಲ್ಲೂ ರಾಹುಲ್​ಗೆ ಅನ್ಯಾಯ’; ಮೂರ್ಖತನದ ನಿರ್ಧಾರ ಎಂದ ಮಾಜಿ ನಾಯಕ

KL Rahul Batting Order Controversy: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋತ ಬಳಿಕ, ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತಂಡದ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಕ್ಷರ್ ಪಟೇಲ್‌ಗಿಂತ ಮೊದಲು ರಾಹುಲ್ ಅವರನ್ನು ಆಡಿಸದಿರುವುದು ಹಾಸ್ಯಾಸ್ಪದ ನಿರ್ಧಾರ ಎಂದಿದ್ದಾರೆ. ರಾಹುಲ್‌ನಂತಹ ಕ್ಲಾಸ್ ಆಟಗಾರ ನಾಲ್ಕನೇ ಅಥವಾ ಐದನೇ ಸ್ಥಾನದಲ್ಲಿ ಬ್ಯಾಟ್ ಮಾಡಬೇಕೆಂದು ಶ್ರೀಕಾಂತ್ ಒತ್ತಿ ಹೇಳಿದ್ದು, ಇದು ಸೋಲಿಗೆ ಕಾರಣವಾಯಿತು ಎಂದರು.

‘ಏಕದಿನ ತಂಡದಲ್ಲೂ ರಾಹುಲ್​ಗೆ ಅನ್ಯಾಯ’; ಮೂರ್ಖತನದ ನಿರ್ಧಾರ ಎಂದ ಮಾಜಿ ನಾಯಕ
Kl Rahul
ಪೃಥ್ವಿಶಂಕರ
|

Updated on:Oct 20, 2025 | 7:09 PM

Share

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs Australia) ಏಳು ವಿಕೆಟ್‌ಗಳ ಸೋಲು ಕಂಡಿದೆ. ಪರ್ತ್‌ನಲ್ಲಿ ನಡೆದ ಪಂದ್ಯವನ್ನು ಮಳೆಯಿಂದಾಗಿ ತಲಾ 26 ಓವರ್‌ಗಳಿಗೆ ಇಳಿಸಲಾಯಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೇವಲ 136 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಅತ್ಯಧಿಕ 38 ರನ್​ಗಳ ಇನ್ನಿಂಗ್ಸ್ ಆಡಿದ ಕನ್ನಡಿಗ ಕೆಎಲ್ ರಾಹುಲ್ (KL Rahul) ತಂಡವನ್ನು 100 ರನ್​ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಕ್ಷರ್ ಪಟೇಲ್ ಕೂಡ 31 ರನ್​ಗಳ ಕಾಣಿಕೆ ನೀಡಿದರು. ಇವರಿಬ್ಬರು ಐದನೇ ವಿಕೆಟ್‌ಗೆ ಇಬ್ಬರೂ 39 ರನ್‌ಗಳ ಜೊತೆಯಾಟ ನಡೆಸಿದ ಕಾರಣಕ್ಕೆ ತಂಡ ಬೇಗನೇ ಆಲೌಟ್ ಆಗಲಿಲ್ಲ. ಆದಾಗ್ಯೂ ಈ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್ ಮಾಡಲು ಬಂದ ಕ್ರಮಾಂಕ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪೂರಕವಾಗಿ ರಾಹುಲ್​ಗೆ ಏಕದಿನ ಕ್ರಿಕೆಟ್​ನಲ್ಲೂ ಅನ್ಯಾಯವಾಗುತ್ತಿದೆ ಎಂದು ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅಸಮಾಧಾನ ಹೊರಹಾಕಿದ್ದಾರೆ.

ಮೂರ್ಖತನದ ನಿರ್ಧಾರ

ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, ಅಕ್ಷರ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಪರ್ತ್ ಏಕದಿನ ಪಂದ್ಯದ ಸೋಲಿನ ನಂತರ ಕೃಷ್ಣಮಾಚಾರಿ ಶ್ರೀಕಾಂತ್ ಭಾರತೀಯ ತಂಡದ ಆಡಳಿತ ಮಂಡಳಿಯನ್ನು ಟೀಕಿಸಿದ್ದಾರೆ. ರಾಹುಲ್​ಗೂ ಮುನ್ನ ಅಕ್ಷರ್ ಅವರನ್ನು ಕಳುಹಿಸುವುದು ಸಂಪೂರ್ಣವಾಗಿ ಮೂರ್ಖತನದ ನಿರ್ಧಾರ ಎಂದಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಕಳುಹಿಸುತ್ತಿದ್ದೆ

ಈ ಬಗ್ಗೆ ತಮ್ಮ ಯ್ಯೂಟೂಬ್ ಚಾನೆಲ್‌ನಲ್ಲಿ ವಿವರವಾಗಿ ಮಾತನಾಡಿರುವ ಅವರು ‘ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್​ಗಿಂತ ಮೊದಲು ಆಡಬೇಕೆಂದು ನಾನು ಮೊದಲೇ ಹೇಳಿದ್ದೆ. ಇದು ತಂಡ ಮತ್ತು ಆಡಳಿತ ಮಂಡಳಿಯ ಹಾಸ್ಯಾಸ್ಪದ ನಿರ್ಧಾರ. ನೀವು ರಾಹುಲ್​ಗೂ ಮುನ್ನ ಬೇರೆಯವರನ್ನು ಕಳುಹಿಸುತ್ತಿದ್ದೀರಿ. ಅಕ್ಷರ್ ಪಟೇಲ್ ಅವರನ್ನು ರಾಹುಲ್​ಗಿಂತ ಮುಂದೆ ಕಳುಹಿಸುವುದು ಸಂಪೂರ್ಣವಾಗಿ ಅಸಂಬದ್ಧ. ವಿಷಯವು ಅಕ್ಷರ್ ಚೆನ್ನಾಗಿ ಆಡಿದ್ದಾರೋ ಇಲ್ಲವೋ ಎಂಬುದು ಅಲ್ಲ. ನಿಮ್ಮ ಪ್ಲೇಯಿಂಗ್ ಹನ್ನೊಂದರಲ್ಲಿ ಅತ್ಯುತ್ತಮ ಮತ್ತು ಕ್ಲಾಸ್ ಆಟಗಾರನಾಗಿರುವ ರಾಹುಲ್ ಐದನೇ ಸ್ಥಾನದಲ್ಲಿ ಬರಬೇಕಿತ್ತು. ನಾನು ನಾಯಕನಾಗಿದ್ದರೆ, ನಾನು ಅವರನ್ನು ನಾಲ್ಕನೇ ಸ್ಥಾನದಲ್ಲಿ ಕಳುಹಿಸುತ್ತಿದ್ದೆ. ಉಪಖಂಡದ ಪರಿಸ್ಥಿತಿಗಳು ಆಸ್ಟ್ರೇಲಿಯಾಕ್ಕಿಂತ ಭಿನ್ನವಾಗಿವೆ. ಅವರು ಸಾಧ್ಯವಾದಷ್ಟು ಹೆಚ್ಚಿನ ಎಸೆತಗಳನ್ನು ಆಡಬೇಕು’ ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

IPL 2026: ಕೆಕೆಆರ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್?

ಎಡ-ಬಲ ಸಂಯೋಜನೆಗೆ ಹೋಗಬೇಡಿ

ಇನ್ನು ಪಂದ್ಯದಲ್ಲಿ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿರುವ ಶ್ರೀಕಾಂತ್, ‘ಭಾರತವು ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಳ್ಳದೆ 160 ತಲುಪಿದ್ದರೆ, ಡಕ್‌ವರ್ತ್-ಲೂಯಿಸ್ ವಿಧಾನದ ಪ್ರಕಾರ ಹೆಚ್ಚಿನ ಮೊತ್ತ ಸಿಗುತ್ತಿತ್ತು ಮತ್ತು ವಿಷಯಗಳು ಭಾರತದ ಪರವಾಗಿ ತಿರುಗಬಹುದಿತ್ತು. ಕೆಎಲ್ ರಾಹುಲ್ ಮತ್ತು ಅಕ್ಷರ್ ಔಟಾದ ನಂತರ ನಿತೀಶ್ ಕುಮಾರ್ ರೆಡ್ಡಿಯನ್ನು ಕಳುಹಿಸದೆ ಅವರು ಮತ್ತೊಂದು ತಪ್ಪು ಮಾಡಿದರು. ನೀವು ಅವರನ್ನು ದೊಡ್ಡ ಹಿಟ್ಟರ್ ಆಗಿ ತಂಡಕ್ಕೆ ಸೇರಿಸಿದ್ದೀರಿ. ಹೀಗಾಗಿ ಎಡ-ಬಲ ಸಂಯೋಜನೆಗೆ ಹೋಗಬೇಡಿ.

ಭಾರತ ಈ ಪಂದ್ಯದಲ್ಲಿ 150 ರನ್ ಗಳಿಸಿದ್ದರೆ, ಅದು ನಿಕಟ ಸ್ಪರ್ಧೆಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ 60 ಅಥವಾ 70 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡ ನಂತರ ಭಾರತ ಭರವಸೆ ಕಳೆದುಕೊಳ್ಳಲು ಪ್ರಾರಂಭಿಸಿತು. ಆದರೆ ಭಾರತ 150 ರನ್ ಗಳಿಸಿದ್ದರೆ, ಅವರು ಭರವಸೆಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಮಿಚೆಲ್ ಮಾರ್ಷ್​ಗೂ ಕೂಡ ಒತ್ತಡವಿಲ್ಲದೆ ಆಡಲು ಕಷ್ಟವಾಗುತ್ತಿತ್ತು’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Mon, 20 October 25

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ