ಭಾರತ ಎ ತಂಡಕ್ಕೆ ಆಯ್ಕೆ ಮಾಡುವಂತೆ ಕೆಎಲ್ ರಾಹುಲ್ ಮನವಿ
India Squad For England Test Series: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಸರಣಿಗೂ ಮುನ್ನ ಭಾರತ ಎ ತಂಡದ ಪರ ಕಣಕ್ಕಿಳಿಯಲು ಕೆಎಲ್ ರಾಹುಲ್ ಬಯಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ತನ್ನನ್ನು ಭಾರತ ಎ ತಂಡಕ್ಕೆ ಪರಿಗಣಿಸುವಂತೆ ಟೀಮ್ ಇಂಡಿಯಾದ ಸ್ಟಾರ್ ಅಟಗಾರ ಕೆಎಲ್ ರಾಹುಲ್ (KL Rahul) ಬಿಸಿಸಿಐಗೆ ಮನವಿ ಮಾಡಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ಆಡಲು ಇಚ್ಛಿಸಿದ್ದೇನೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಸಿದ್ಧತೆ ಮಾಡಿಕೊಳ್ಳಲು ಬಯಸುತ್ತಿರುವುದಾಗಿ ಕೆಎಲ್ ರಾಹುಲ್ ಬಿಸಿಸಿಐ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಅವರ ಈ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದರೆ, ಇದೇ ವಾರ ಅವರು ಇಂಗ್ಲೆಂಡ್ಗೆ ತೆರಳಲಿದ್ದಾರೆ. ಏಕೆಂದರೆ ಇಂಗ್ಲೆಂಡ್ ಲಯನ್ಸ್ ಹಾಗೂ ಭಾರತ ಎ ತಂಡಗಳ ನಡುವಣ 2ನೇ ಟೆಸ್ಟ್ ಪಂದ್ಯವು ಜೂನ್ 6 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ಭಾರತ ಎ ತಂಡವನ್ನು ಕೂಡಿಕೊಳ್ಳಲು ರಾಹುಲ್ ಬಯಸಿದ್ದಾರೆ.
ಭಾರತ vs ಭಾರತ ಎ ಅಭ್ಯಾಸ ಪಂದ್ಯ:
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡವು ಭಾರತ ಎ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ. ಈ ಪಂದ್ಯವು ಜೂನ್ 13 ರಿಂದ ಶುರುವಾಗಲಿದೆ. ಒಂದು ವೇಳೆ ಭಾರತ ಎ ತಂಡದ ಪರ ಕಣಕ್ಕಿಳಿಯಲು ರಾಹುಲ್ಗೆ ಅನುಮತಿ ನೀಡದಿದ್ದರೆ, ಅವರು ಭಾರತ ಟೆಸ್ಟ್ ತಂಡದೊಂದಿಗೆ ಇಂಗ್ಲೆಂಡ್ಗೆ ಪ್ರಯಾಣಿಸಲಿದ್ದಾರೆ.
ಇಂಗ್ಲೆಂಡ್ ಸರಣಿಗೆ ಭಾರತ ಟೆಸ್ಟ್ ತಂಡ:
Published On - 10:54 am, Sun, 1 June 25
