
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2026 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡವು 3.4 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 25 ರನ್ ಗಳಿಸಿದ್ದಾಗ ಲಘು ಮಳೆ ಪಂದ್ಯವನ್ನು ನಿಲ್ಲಿಸಿತು. ಅದಾದ ಬಳಿಕ ಮಳೆ ತೀವ್ರಗೊಂಡ ಕಾರಣ ಪಂದ್ಯವನ್ನು ಆರಂಭಿಸಲು ಸಾಕಷ್ಟು ಸಮಯ ಕಾಯಲಾಯಿತು. ಆದರೆ ಎಷ್ಟೇ ಕಾದರೂ ಮಳೆ ನಿಲ್ಲದ ಕಾರಣ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದರು.
ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೇವಲ 3.4 ಓವರ್‌ಗಳ ನಂತರ ಮಳೆ ಆಟವನ್ನು ಸ್ಥಗಿತಗೊಳಿಸಿತು. ಸುಮಾರು 3.25 ಗಂಟೆಗಳ ಕಾಲ ಕಾದರೂ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.
ಕೋಲ್ಕತ್ತಾದಲ್ಲಿ ಕೇವಲ 3.4 ಓವರ್‌ಗಳ ಆಟ ಮುಗಿದ ನಂತರ ಮಳೆ ಬಂದಿದೆ, ಇದರಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ಮಳೆ ಬರುವ ನಿರೀಕ್ಷೆಯಿತ್ತು. ಪಂದ್ಯ ನಿಲ್ಲುವ ಸಮಯದಲ್ಲಿ ಕೋಲ್ಕತ್ತಾ ಎರಡು ವಿಕೆಟ್‌ಗಳ ನಷ್ಟಕ್ಕೆ ಕೇವಲ 25 ರನ್ ಗಳಿಸಿದೆ. ನಾಯಕ ರಹಾನೆ ಮತ್ತು ಅಂಗ್‌ಕ್ರಿಶ್ ರಘುವಂಶಿ ಆಡುತ್ತಿದ್ದರು.
ಕೋಲ್ಕತ್ತಾ ತಂಡಕ್ಕೆ ಮೊದಲ ಹೊಡೆತ ಬಿದ್ದಿತು. ಎರಡನೇ ಓವರ್‌ನಲ್ಲಿಯೇ ಫಿನ್ ಅಲೆನ್ ಅವರನ್ನು ವೇಗಿ ಕ್ಸೇವಿಯರ್ ಬಾರ್ಟ್ಲೆಟ್ ಔಟ್ ಮಾಡಿದರು.
ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಕ್ಯಾಮೆರಾನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ, ರೋವ್ಮನ್ ಪೊವೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ನವದೀಪ್ ಸೈನಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.
ಶ್ರೇಯಸ್ ಅಯ್ಯರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್‌ಕುಮಾರ್ ವೈಶಾಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Published On - 7:02 pm, Mon, 6 April 26