Legends League Cricket: ಕ್ರಿಕೆಟ್ ಅಖಾಡಕ್ಕೆ ಮತ್ತೆ ಎಂಟ್ರಿ ಕೊಟ್ಟ ಸಿಡಿಲಮರಿ ಸೆಹ್ವಾಗ್, ಪಠಾಣ್ ಬ್ರದರ್ಸ್

| Updated By: ಪೃಥ್ವಿಶಂಕರ

Updated on: Jul 06, 2022 | 4:48 PM

Legends League Cricket: ಭಾರತವಲ್ಲದೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಪಂದ್ಯಾವಳಿಯು ಓಮನ್‌ನಲ್ಲಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 10 ರವರೆಗೆ ನಡೆಯಲಿದೆ.

Legends League Cricket: ಕ್ರಿಕೆಟ್ ಅಖಾಡಕ್ಕೆ ಮತ್ತೆ ಎಂಟ್ರಿ ಕೊಟ್ಟ ಸಿಡಿಲಮರಿ ಸೆಹ್ವಾಗ್, ಪಠಾಣ್ ಬ್ರದರ್ಸ್
ವೀರೇಂದ್ರ ಸೆಹ್ವಾಗ್
Follow us on

ಭಾರತದ ದಿಗ್ಗಜ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ (Virender Sehwag), ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ (Irfan Pathan and Yusuf Pathan) ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನ (Legends Cricket League) ಎರಡನೇ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ. ಎರಡನೇ ಸೀಸನ್‌ನಲ್ಲಿ 4 ತಂಡಗಳು ಮತ್ತು 110 ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಭಾಗವಹಿಸದ ಸೆಹ್ವಾಗ್, ನಾನು ಕ್ರಿಕೆಟ್ ಮೈದಾನಕ್ಕೆ ಬರಲು ಇಷ್ಟಪಡುತ್ತೇನೆ ಎಂದು ಹೇಳಿದರು. ನಾನು LLC ಯ ಮೊದಲ ಸೀಸನ್‌ನಲ್ಲಿ ಆಡಲಿಲ್ಲ, ಆದರೆ LLC ಯ ಎರಡನೇ ಸೀಸನ್‌ನೊಂದಿಗೆ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲು ಉತ್ಸುಕನಾಗಿದ್ದೇನೆ ಎಂದು ಸೆಹ್ವಾಗ್ ಹೇಳಿದ್ದಾರೆ. ಸೆಹ್ವಾಗ್ ಹೊರತಾಗಿ ಪಠಾಣ್ ಸಹೋದರರು ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.

ಟಾಪ್ ಕ್ರಿಕೆಟಿಗರು ಒಟ್ಟಿಗೆ ಆಡುವುದನ್ನು ಕಾಣಬಹುದು

ಇದನ್ನೂ ಓದಿ
IND vs ENG, 1st T20, Match Preview: ಟಿ20 ಸರಣಿಯಲ್ಲಿ ಆಂಗ್ಲರನ್ನು ಸೋಲಿಸುವ ಶಕ್ತಿ ಟೀಂ ಇಂಡಿಯಾಕ್ಕಿದೆಯಾ?
MS Dhoni Birthday: ಧೋನಿಯ 41ನೇ ಜನ್ಮದಿನಕ್ಕೆ ಅಭಿಮಾನಿಯಿಂದ ಸಿದ್ದವಾಯ್ತು 41 ಅಡಿಯ ಕಟೌಟ್; ಫೋಟೋ ವೈರಲ್
ICC Test Ranking: 2053 ದಿನಗಳ ನಂತರ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ರಿಂದ ಹೊರಬಿದ್ದ ವಿರಾಟ್ ಕೊಹ್ಲಿ..!

ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನ ಕಮಿಷನರ್, ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿ, ಲೆಜೆಂಡ್ಸ್ ಹಬ್ಬವು ಪುನರಾವರ್ತನೆಯಾಗುತ್ತಿದೆ ಎಂದು ಹೇಳಿದರು. ಪ್ರಪಂಚದಾದ್ಯಂತದ ಟಾಪ್ ಕ್ರಿಕೆಟಿಗರು ಒಟ್ಟಿಗೆ ಆಡುವುದನ್ನು ಕಾಣಬಹುದು. ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಕೊಡುಗೆ ನೀಡಿದ ಈ ಆಟಗಾರರನ್ನು ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನ ಎರಡನೇ ಸೀಸನ್​ನಲ್ಲಿ ಆಡುವುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಟೂರ್ನಿಯ ಮೊದಲ ಸೀಸನ್‌ನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರು ಭಾರತ, ಏಷ್ಯನ್ ಮತ್ತು ರೆಸ್ಟ್ ಆಫ್ ದಿ ವರ್ಲ್ಡ್ ಎಂಬ 3 ತಂಡಗಳನ್ನು ಪ್ರತಿನಿಧಿಸಿದ್ದರು, ಆದರೆ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಶೈಲಿಯಲ್ಲಿ ನಾಲ್ಕು ಫ್ರಾಂಚೈಸಿ ತಂಡಗಳು ಭಾಗವಹಿಸಲಿವೆ.

ಇದನ್ನೂ ಓದಿ: ಧೋನಿಯ ಆ ನಿರ್ಧಾರದಿಂದಾಗಿ ನಾನು ಏಕದಿನ ಕ್ರಿಕೆಟ್​ಗೆ ಗುಡ್​ ಬೈ ಹೇಳಲು ಬಯಸಿದ್ದೆ! ಸೆಹ್ವಾಗ್ ಶಾಕಿಂಗ್ ಹೇಳಿಕೆ

ಸಮಯ ಬಂದಾಗ 4 ತಂಡದ ಮಾಲೀಕರನ್ನು ಘೋಷಿಸುತ್ತೇವೆ ಎಂದು ಎಲ್ ಎಲ್ ಸಿ ಸಿಇಒ ರಮಣ್ ರಹೇಜಾ ಹೇಳಿದ್ದಾರೆ. ನಾವು ಪ್ರಸ್ತುತ 110 ಅಗ್ರ ಆಟಗಾರರ ಪೂಲ್ ಅನ್ನು ಹೊಂದಿದ್ದೇವೆ. ಆಗಸ್ಟ್ ಆರಂಭದಲ್ಲಿ ಆಟಗಾರರ ಡ್ರಾಫ್ಟ್ ಪ್ರಕ್ರಿಯೆಯ ಮೂಲಕ ನಾಲ್ಕು ತಂಡಗಳಲ್ಲಿ ಅವರನ್ನು ಸೇರಿಸಲಾಗುತ್ತದೆ. ಭಾರತವಲ್ಲದೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಪಂದ್ಯಾವಳಿಯು ಓಮನ್‌ನಲ್ಲಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 10 ರವರೆಗೆ ನಡೆಯಲಿದೆ.